ಬಳ್ಳಾರಿ ಮೇ 26 : ಬೇಡಿ ಜಂಗಮ ಜಾತಿ ಮಾದಿಗ ಜನಾಂಗದವರಿಂದ ಕಾಡಿಬೇಡಿ ಮಾಂಸ ಮತ್ತು ಮಧ್ಯವನ್ನು ಪಡೆದುಕೊಂಡು ಉಣ್ಣುತ್ತಿದ್ದರು ಈ ಜಾತಿ ಹಲವಾರು ವರ್ಷಗಳ ಹಿಂದೆ ನಶಿಸಿಹೋಗಿದೆ ಬೇಡಿ ಜಂಗಮ ಜಾತಿಯನ್ನು ಪರಿಶಿಷ್ಟ ಜಾತಿಯಿಂದ ಕೈ ಬಿಡಬೇಕು ಎಂದು ಮಾಜಿ ಸಚಿವ ಎಚ್ ಆಂಜನೇಯಲು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಅವರು ಇಂದು ನಗರದ ರಾಯಲ್ ಪೋರ್ಟ್ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಮನೆ ಬಾಗಿಲಿಗೆ ಬರುವ ಜಾತಿ ಗಣತಿದಾರರಿಗೆ ಆದಿ ಕರ್ನಾಟಕ ಆದಿ ಜಾಂಬವ ಎಂದು ಬರೆಸದೆ ಪರಿಶಿಷ್ಟ ಜಾತಿ ಮಾದಿಗ ಎಂದು ಬರೆಸಲು ಅವರು ಮಾದಿಗ ಜನಾಂಗಕ್ಕೆ ಕರೆ ನೀಡಿದರು. ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿದ್ದರೂ ಈಗಾಗಲೇ ಸುಮಾರು 80ರಷ್ಟು ಜಾತಿ ಅಳಿದು ಹೋಗಿವೆ, ಪರಿಶಿಷ್ಟ ಜಾತಿಯಲ್ಲಿ 101 ಉಪ ಜಾತಿಗಳಿವೆ ಎಂದು ಬ್ರಿಟಿಷ್ ಕಾಲದ ಮಿಲ್ಲರ್ ನಡೆಸಿದ್ದ ಜಾತಿ ಜನಗಣತಿಯನ್ನು ಈಗಲೂ ಹಾಗೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ, ಆ ಸಂದರ್ಭದಲ್ಲಿ ಬೇಡಿ ಜಂಗಮ, ಹಲಾಲ್ ಕೋರ, ಚಾಂಡಾಳ ಜಾತಿಗಳು ಸೇರಿದಂತೆ ಅನೇಕ ಜಾತಿಗಳು ಈಗಾಗಲೇ ನಶಿಸಿಹೋಗಿವೆ ನಶಿಸಿ ಹೋದ ಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ಕೈ ಬಿಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಮುಂದುವರೆದು ಮಾತನಾಡಿದ ಅವರು ಈಗಾಗಲೇ ನಶಿಸಿ ಹೋದ ಬೇಡಿ ಜಂಗಮ ಜಾತಿಯೆಂದು ವೀರಶೈವ ಜನಾಂಗ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಳ್ಳುತ್ತಿದೆ, ಇದು ಅಕ್ಷಮ್ಯ ಅಪರಾಧವಾಗಿದೆ, ಇವರು ವೀರಶೈವ ಜನಾಂಗಕ್ಕೆ ಸೇರಿದ್ದು ಪುರೋಹಿತ ವೃತ್ತಿಯನ್ನು ಮಾಡುತ್ತಿದ್ದಾರೆ ಮತ್ತು ಮೇಲ್ವರ್ಗದ ಜಾತಿಗೆ ಸೇರಿದವರಾಗಿದ್ದಾರೆ ಆದರೂ ಸಹ ಇವರು ಪರಿಶಿಷ್ಟ ಜಾತಿ ಎಂದು ಜಾತಿ ಪ್ರಮಾಣ ಪತ್ರ ಪಡೆದು ನಮ್ಮ ಅನ್ನವನ್ನು ಕಸಿದುಕೊಳ್ಳುತ್ತಿದ್ದಾರೆ ಬೇಡಿ ಜಂಗಮ ಎಂದು ಸುಳ್ಳು ಹೇಳಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡವರಿಗೆ ಮತ್ತು ಮಂಜೂರು ಮಾಡಿದವರಿಗೆ ಜೈಲು ಶಿಕ್ಷೆ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಜನಸಂಖ್ಯೆಗೆ ಅನುಗುಣವಾಗಿ ಮಾದಿಗರಿಗೆ ಒಳ ಮೀಸಲಾತಿಯನ್ನು ನೀಡಬೇಕು ಆಂಧ್ರ ಪ್ರದೇಶದಲ್ಲಿ ಮಂದಕೃಷ್ಣ ಮಾದಿಗ ಅವರ ಹೋರಾಟಕ್ಕೆ ಮಣಿದು ಅಲ್ಲಿನ ಸರ್ಕಾರ ಒಳಾಮಿಸಲಾತಿಯನ್ನು ಜಾರಿಗೊಳಿಸಿರುತ್ತದೆ, ಅದೇ ಪ್ರಕಾರ ರಾಜ್ಯದಲ್ಲಿಯೂ ಸಹ ನಾಗಮೋಹನ್ ದಾಸ್ ಅವರ ವರದಿಯ ಅನುಗುಣವಾಗಿ ಆದಷ್ಟು ಬೇಗ ಜೂನ್ ಒಳಗಡೆ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ್, ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎ ಮಾನಯ್ಯ, ಕೆಪಿಸಿಸಿ ಸದಸ್ಯ ಎಲ್ ಮಾರೆಣ್ಣ, ಸಂಗನಕಲ್ಲು ವಿಜಯ್ ಕುಮಾರ್, ಏಕೆ ಗಂಗಾಧರ, ಸಿದ್ದೇಶ್, ಎರುಕುಲ ಸ್ವಾಮಿ, ಏನ್ ಡಿ ವೆಂಕಮ್ಮ, ವೆಂಕಟೇಶ್ ಹೆಗಡೆ ಸೇರಿದಂತೆ ಹಲವಾರು ಜನ ಮಾದಿಗ ಜನಾಂಗದ ಮುಖಂಡರು ಹಾಗೂ ಇತರರಿದ್ದರು.