ಸತ್ಸಂಗದಿಂದ ಸುಂದರ ಬದುಕು: ಪ್ರಭು ಮಹಾರಾಜ

Ravi Talawar
ಸತ್ಸಂಗದಿಂದ ಸುಂದರ ಬದುಕು: ಪ್ರಭು ಮಹಾರಾಜ
WhatsApp Group Join Now
Telegram Group Join Now
ಮುಗಳಖೋಡ [೧೯] ಇಂದು  ಸುಂದರವಾಗಿ ಕಳೆಯಬೇಕಾದ ಮಾನವ  ಅತಿಆಸೆಯಿಂದ ಜಡತ್ವದಡೆಗೆ ಸಾಗಿ ನೆಮ್ಮದಿಯನ್ನೆ ಕಳೆದುಕೊಳ್ಳುತ್ತಿದ್ದಾನೆ, ಸಾಂಪ್ರದಾಯದ ನೀತಿ ನಿಯಮಗಳಂತೆ ಸತ್ಸಂಗದಲ್ಲಿ ಭಾಗಿಯಾಗಿ ಸುಂದರ ಜೀವನ ಕಳೆಯಲು ಸಾಧ್ಯವಿದೆ ಎಂದು ಇಂಚಗೇರಿ ಸಂಪ್ರದಾಯದ ಪ್ರಭು ಮಹಾರಾಜರು ಹೇಳಿದರು.
ಪಟ್ಟಣದಲ್ಲಿ ಬುಧವಾರದಂದು ಇಂಚಗೇರಿ ಸಂಪ್ರದಾಯದ ಶಿವಪ್ರಭು ಮಹಾರಾಜರ ಉಪದೇಶ ದಿಂದ ಪಾವನರಾದ  ಲಿಂ ಗುರುಲಿಂಗಪ್ಪಾ ಲಿಂ ನಿಲಮ್ಮ ಲಿಂ ಪ್ರಭು ಜಂಬಗಿಯವರ  ಪುಣ್ಯಸ್ಮರನೋತ್ಸವದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ ಸಾಂಪ್ರದಾಯದ  ಜೀವನುದ್ದಕ್ಕೂ ಪರೋಪಕಾರ ಪರಪುಣ್ಯವನ್ನು ಮಾಡಿಕೊಂಡು ಯಾರು ತಮ್ಮ ಕಾಯಕ ಮಾಡಿಕೊಂಡಿರುತ್ತಾರೆಯೋ ಅಂತವರು ಮಾತ್ರ ಪುಣ್ಯಸ್ಮರನೋತ್ಸವ ಆಚರಿಸಿಕೊಳ್ಳುತ್ತರೆ.
ಅಂತಹ ಸ್ಥಾನ ಪಡೆದ ಜಂಬಗಿಯವರ ಈ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗಿಯಾದ ನೀವು ಪುಣ್ಯದ ಕಾಯಕ ಮಾಡಿ ಗುರು ಕೃಫೆಗೆ ಪಾತ್ರರಾಗಿರಿ ಎಂದು ಆರ್ಶೀವಚನ ನೀಡಿದರು. ಅರವಿಂದ ವಕೀಲ ಮಹಾರಾಜರು, ಸಂಗಪ್ಪ ಬಾಗೇವಾಡಿ,ಪರಸಪ್ಪ ಹಿಪ್ಪರಗಿ, ಮಾತೋಶ್ರೀ ನೂರಜಾನ ಬಾಹನ ದಾಸಭೋದ ವಾಚನ ಮಾಡಿದರು.
, ಸಂಗಪ್ಪ ಜಂಬಗಿ, ಮಹಾದೇವ ಕುಲಕರ್ಣಿ,ಶಿವಜ್ಜಾ ಜಂಬಗಿ,ಕೃಷ್ಣ ಕುಲಕರ್ಣಿ, ವಿನೋಭಾ ಜಂಬಗಿ,ಗಿರಮಲ್ಲ ಮುಧೋಳ, ಸಿದ್ದಪ್ಪ ಜತ್ತಿ, ಶ್ರೀಶೈಲ ಹೊಸಪೇಟಿ, ಅಪ್ಪಾಸಾಹೇಬ ಯರಡೆತ್ತಿ,, ಮುತ್ತಪ್ಪ ಹುಕ್ಕೇರಿ,ಪರಪ್ಪ ಜಂಬಗಿ , ಮಲ್ಲಪ್ಪ ಜಂಬಗಿ, ಶ್ರೀಶೈಲ ಮುಧೋಳ, ಜ್ಞಾನೇಶ್ವರ ಅಳಗವಾಡಿ, ಪರಪ್ಪ ಕುಲಿಗೋಡ, ಶಿವಪುತ್ರ ಯಡವಣ್ಣವರ, ಗೋಪಾಲ ಯಡವಣ್ಣವರ, ಮಹಾದೇವ ಬಾಳೋಜಿ, ಮುಕುಂದ ಯಡವಣ್ಣವರ, ಶ್ರೀಕಾಂತ ಕ ಬಡಿಗೇರ , ಶಿವಪ್ಪ ಜಂಬಗಿ, ಹಾಗೂ ಸಕಲ ಸಂಪ್ರದಾಯದ ಸದ್ಭಕ್ತರು ಇದ್ದರು.
WhatsApp Group Join Now
Telegram Group Join Now
Share This Article