ಸಂಜೀವರಾಯನಕೋಟೆಯಲ್ಲಿ ಕರಡಿ ದಾಳಿ ರೈತನಿಗೆ ಮಾರಣಾಂತಿಕ ಗಾಯ

Ravi Talawar
ಸಂಜೀವರಾಯನಕೋಟೆಯಲ್ಲಿ ಕರಡಿ ದಾಳಿ ರೈತನಿಗೆ ಮಾರಣಾಂತಿಕ ಗಾಯ
WhatsApp Group Join Now
Telegram Group Join Now
ಬಳ್ಳಾರಿ. ಜು. 23:  ತಾಲೂಕಿನ ಸಂಜೀವನ ಕೋಟೆ ಗ್ರಾಮದಲ್ಲಿ ಜಾನುವಾರಿಗಳಿಗೆ ಹುಲ್ಲನ್ನು ಕೊಯ್ಯಲು ಜಮೀನಿಗೆ ಹೊರಟಿದ್ದ  ರೈತನ ಮೇಲೆ ಕರಡಿಗಳು ದಾಳಿ ನಡೆಸಿ ಮಾರಣಾಂತಿಕವಾಗಿ ಗಾಯಗೊಳಿಸಿವೆ. ರಾಜ (55) ಕರಡಿ ದಾಳಿಯಲ್ಲಿ ಗಾಯಗೊಂಡ ವ್ಯಕ್ತಿ ಇಂದು ಮುಂಜಾನೆ ಹೊಲದ ಕಡೆ ಹೊರಟಿದ್ದ ರಾಜ ಇವರ ಮೇಲೆ ಕುಂಬಾರ ಕುಂಟೆ ಪ್ರದೇಶದಲ್ಲಿ ಮರಿ ಕರಡಿಯೊಂದು ದಾಳಿ ನಡೆಸಿದೆ, ಪಕ್ಕದಲ್ಲಿದ್ದ ತಾಯಿ ಕರಡಿ ಸಹ ಈತನ ಮೇಲೆ ಮುಗಿಬಿದ್ದು ಮುಖಮೂತಿ ತಲೆಯನ್ನು ಕಚ್ಚಿ ಮಾಂಸ ಕಂಡವನ್ನು ಕಿತ್ತುಹಾಕಿವೆ, ಆನಂದಿ ದೂರದಲ್ಲಿದ್ದ ಹಲವು ಜನರು ಬಂದು ಕರಡಿಗಳನ್ನು ಓಡಿಸಿದ್ದಾರೆ. ಅಷ್ಟರಲ್ಲಿ ಆಗಲೇ ಆತನನ್ನು ಕಡಿದು ಗಂಭೀರವಾಗಿ ಗಾಯಗೊಳಿಸಿದ ಕರಡಿಗಳು ಜನರನ್ನು ನೋಡಿ ಗುಡ್ಡದತ್ತ  ಓಡಿ ಹೋಗಿವೆ
 ಗಂಭೀರ ಮತ್ತು ಮಾರಣಾಂತಿಕವಾಗಿ ಗಾಯಗೊಂಡ ರಾಜ ಎಂಬ ರೈತನನ್ನು   ನಗರದ ಬಿಎಂಅರ್ ಸಿ ಆಸ್ಪತ್ರೆ ಗೆ ದಾಖಲಿಸಲಾಗಿದೆ. ಕರಡಿ ದಾಳಿಗೊಳಗಾದ ವ್ಯಕ್ತಿ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
WhatsApp Group Join Now
Telegram Group Join Now
Share This Article