ಬಳ್ಳಾರಿ ಸೆಪ್ಟಂಬರ್ 8: ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (ಬಿಐಟಿಎಂ) ಕಾಲೇಜಿನಲ್ಲಿ ಬಿ.ಇ. ಪ್ರಥಮ ವರ್ಷದ ವಿದ್ಯಾರ್ಥಿಗಳ ಉದ್ಘಾಟನಾ ಸಮಾರಂಭ ಭವ್ಯವಾಗಿ ನೆರವೇರಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಿಷ್ಕಿಂಧ ವಿಶ್ವವಿದ್ಯಾಲಯದ ಕುಲಾಧಿಪತಿ ಮತ್ತು ಕಾಲೇಜಿನ ಅಧ್ಯಕ್ಷರಾದ ಡಾ. ಯಶವಂತ್ ಭೂಪಾಲ್ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ, “ಇಂದಿನ ಜಗತ್ತಿನ ಪ್ರಗತಿ ಇಂಜಿನಿಯರಿAಗ್ ಮತ್ತು ತಂತ್ರಜ್ಞಾನದಿAದ ಸಾಧ್ಯವಾಗಿದೆ. ಹಿಂದಿನ ದಿನಗಳಲ್ಲಿ ದೇಶವನ್ನು ನಿರ್ಮಿಸಲು ಸಿವಿಲ್ ಇಂಜಿನಿಯರಿAಗ್ ಮತ್ತು ಮೆಕಾನಿಕಲ್ ಇಂಜಿನಿಯರಿAಗ್ ಮುಖ್ಯ ಆಧಾರವಾಗಿದ್ದರೆ, ಇಂದು ಕಂಪ್ಯೂಟರ್ ಸೈನ್ಸ್ ಹಾಗೂ ಸಂಬAಧಿತ ವಿಭಾಗಗಳು ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಅಧ್ಯಯನ (ಎಐಎಂಎಲ್) ಕ್ಷೇತ್ರದಲ್ಲಿ ಮುಂಚೂಣಿಯಲ್ಲಿವೆ. ಮುಂದಿನ ನಾಲ್ಕು ವರ್ಷಗಳಲ್ಲಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಗತ್ಯ ಕೌಶಲ್ಯಗಳನ್ನು ಪಡೆದುಕೊಂಡರೆ ಅವರ ಭವಿಷ್ಯದ ಜೀವನ ಬೆಳಕಿನಿಂದ ತುಂಬಿರುತ್ತದೆ” ಎಂದು ತಿಳಿಸಿದರು.
ಟಿ.ಇ.ಹೆಚ್.ಆರ್.ಡಿ. ಟ್ರಸ್ಟ್ ಅಧ್ಯಕ್ಷ ಡಾ. ಎಸ್.ಜೆ.ವಿ. ಮಹಿಪಾಲ್ ಅವರು ಮಾತನಾಡಿ – “ಉತ್ತಮ ಜ್ಞಾನ ಮತ್ತು ಸಂಸ್ಕಾರಗಳಿAದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಬಿಐಟಿಎಂ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಪ್ರಗತಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಸಾವಿರಾರು ಮಕ್ಕಳು ನಮ್ಮ ಸಂಸ್ಥೆಗಳ ಮೇಲೆ ಭರವಸೆ ಇಟ್ಟು ವಿದ್ಯಾಭ್ಯಾಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ” ಎಂದರು.
ನಿರ್ದೇಶಕ ಶ್ರೀ ವೈ.ಜೆ. ಪೃಥ್ವಿರಾಜ್ ಭೂಪಾಲ್ ಅವರು ಸಂಸ್ಥೆಯ ಪಾಠ್ಯಕ್ರಮ ಮತ್ತು ಶಿಸ್ತುಬದ್ಧ ಕ್ಯಾಂಪಸ್ ಜೀವನದ ಮಹತ್ವವನ್ನು ಪ್ರಸ್ತಾಪಿಸಿದರು. “ಬಿಐಟಿಎಂ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಪ್ಲೇಸ್‌ಮೆಂಟ್ ಅವಕಾಶಗಳು, ಶಿಸ್ತುಬದ್ಧ ವಾತಾವರಣ ಮತ್ತು ಅಗತ್ಯ ವೃತ್ತಿಪರ ಕೌಶಲ್ಯಗಳನ್ನು ಬೆಳೆಸುವ ತರಬೇತಿ ಒದಗಿಸುತ್ತದೆ. ವಿದ್ಯಾರ್ಥಿಗಳು ಈ ಅವಕಾಶಗಳನ್ನು ಸಮರ್ಥವಾಗಿ ಉಪಯೋಗಿಸಿಕೊಂಡರೆ ಜಾಗತಿಕ ಮಟ್ಟದಲ್ಲಿ ತಮ್ಮದೇ ಆದ ಗುರುತು ಮೂಡಿಸಬಹುದು” ಎಂದು ಅವರು ಹೇಳಿದರು.
ಪ್ರಾಚಾರ್ಯರಾದ ಡಾ. ಯಡವಳ್ಳಿ ಬಸವರಾಜ್ ಅವರು ಕಾಲೇಜಿನ ಇತಿಹಾಸ, ದೃಷ್ಟಿಕೋನ, ಶೈಕ್ಷಣಿಕ ಸಾಧನೆಗಳು, ಸಂಶೋಧನಾ ಚಟುವಟಿಕೆಗಳು ಹಾಗೂ ವಿದ್ಯಾರ್ಥಿ ಬೆಂಬಲದ ಕುರಿತು ವಿವರಿಸಿ ಹೊಸ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು. “ಬಿಐಟಿಎಂ ಶೈಕ್ಷಣಿಕ ಶ್ರೇಷ್ಠತೆ, ಸಂಶೋಧನಾ ಚಟುವಟಿಕೆಗಳು ಮತ್ತು ವಿದ್ಯಾರ್ಥಿಗಳ ಯಶೋಗಾಥೆಗಳಿಂದ ಹೆಸರಾಗಿದ್ದು, ಹೊಸ ವಿದ್ಯಾರ್ಥಿಗಳಿಗೆ ಸಂಪೂರ್ಣ ಬೆಂಬಲ ನೀಡಲು ಸದಾ ಸಿದ್ಧವಾಗಿದೆ” ಎಂದು ಹೇಳಿದರು. ವಿದ್ಯಾರ್ಥಿಗಳು ಸಂಸ್ಥೆಯ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು, ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ಅಮರ್ ರಾಜ್ ಭೂಪಾಲ್, ಡಾ. ವಿ.ಜೆ. ಭರತ್, ಉಪಪ್ರಾಚಾರ್ಯ ಡಾ. ಬಿ.ಎಸ್. ಖೇಣೇದ್, ಪರೀಕ್ಷಾ ವಿಭಾಗದ ಮುಖ್ಯಸ್ಥ ಡಾ. ರಾಘವೇಂದ್ರ ಜೋಷಿ, ವಿವಿಧ ವಿಭಾಗಗಳ ಡೀನ್ಸ್, ವಿಭಾಗÀ ಮುಖ್ಯಸ್ಥರು, ಅಧ್ಯಾಪಕರು ಹಾಗೂ ಪಾಲಕರು ಹಾಜರಿದ್ದರು.
ಹೊಸ ವಿದ್ಯಾರ್ಥಿಗಳನ್ನು ಪಾಲಕರೊಂದಿಗೆ ಆತ್ಮೀಯವಾಗಿ ಸ್ವಾಗತಿಸಿದ ಈ ಕಾರ್ಯಕ್ರಮವನ್ನು ಪ್ರೊ. ಆರತಿ ಯಶಸ್ವಿಯಾಗಿ ನಿರ್ವಹಿಸಿದರು.
ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್, ಬಳ್ಳಾರ ಬಿಐಟಿಎಂನಲ್ಲಿ ಬಿ.ಇ. ಪ್ರಥಮ ವರ್ಷದ ಉದ್ಘಾಟನೆ
