ವ್ಯಾಪಾರ ಅಭಿವೃದ್ಧಿ ಸೇವಾ ಪೂರೈಕೆದಾರರ ಸೌಲಭ್ಯ ಅರಿವು ಹೊಂದಿ

Ravi Talawar
ವ್ಯಾಪಾರ ಅಭಿವೃದ್ಧಿ ಸೇವಾ ಪೂರೈಕೆದಾರರ ಸೌಲಭ್ಯ ಅರಿವು ಹೊಂದಿ
WhatsApp Group Join Now
Telegram Group Join Now


ಬಳ್ಳಾರಿ,ನ.20ವ್ಯಾಪಾರ ಅಭಿವೃದ್ಧಿ ಸೇವಾ ಪೂರೈಕೆದಾರರ ಸೌಲಭ್ಯಗಳ ಕುರಿತು ಅರಿವು ಹೊಂದಬೇಕು ಎಂದು ಲೀಡ್ ಬ್ಯಾಂಕ್‌ನ ಜಿಲ್ಲಾ ಮುಖ್ಯ ವ್ಯವಸ್ಥಾಪಕರು ಹಾಗೂ ಶಾಖಾ ವ್ಯವಸ್ಥಾಪಕ ಗಿರೀಶ್ ವಿ.ಕುಲಕರ್ಣಿ ಅವರು ಹೇಳಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಸರ್ಕಾರ, ಜಿಲ್ಲಾ ಕೈಗಾರಿಕಾ ಕೇಂದ್ರ, ವತಿಯಿಂದ ಆರ್‌ಎಎಂಪಿ ಯೋಜನೆಯಡಿ ವ್ಯಾಪಾರ ಅಭಿವೃದ್ಧಿ ಸೇವಾ ಪೂರೈಕೆದಾರರು ಯೋಜನೆ ಕುರಿತು ನಗರದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಒಂದು ದಿನದ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೆಎಸ್‌ಎಫ್‌ಸಿಯ ಡಾ.ಚಂದ್ರಪ್ಪ ಎಂ.ಎಸ್ ಅವರು ವ್ಯಾಪಾರ ಅಭಿವೃದ್ಧಿ ಸೇವಾ ಪೂರೈಕೆದಾರರು ಕುರಿತು ಮಾತನಾಡಿದರು.

ಕಾರ್ಯಾಗಾರದಲ್ಲಿ ವ್ಯಾಪಾರ ಅಭಿವೃದ್ಧಿ ಸೇವಾ ಪೂರೈಕೆದಾರರು (ಬಿ.ಡಿ.ಎಸ್.ಪಿ) ಸೌಲಭ್ಯಗಳು, ಯಶಸ್ಸಿನ ಕಥೆಗಳ ಬಗ್ಗೆ ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಉಪನಿರ್ದೇಶಕ ಬಿ.ಜಿ.ರಂಗನಾಥ್, ಸಿ.ಬಿ. ಆರ್ಸೆಟ್ ನಿರ್ದೇಶಕ ರಾಜಾಸಾಬ್ ಹೆಚ್.ಇ., ಸಂಪನ್ಮೂಲ ವ್ಯಕ್ತಿ ಪ್ರಸನ್ನ, ಸಿಡಾಕ್ ತರಬೇತಿ ಅಧಿಕಾರಿ ವಿನೋದ್ ಕುಮಾರ್, ಆರ್‌ಸೆಟ್‌ಇ ತರಬೇತಿ ಅಧಿಕಾರಿ ಜಡೇಪ್ಪ ಸೇರಿದಂತೆ ಉದ್ದಿಮೆದಾರರು ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article