ರಾಜ್ಯಕ್ಕೆ 05ನೇ ರ‍್ಯಾಂಕ್ ಪಡೆದ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿನಿ ಗಂಗವ್ವ ಸುಣಧೋಳಿ

Ravi Talawar
ರಾಜ್ಯಕ್ಕೆ 05ನೇ ರ‍್ಯಾಂಕ್ ಪಡೆದ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿನಿ ಗಂಗವ್ವ ಸುಣಧೋಳಿ
WhatsApp Group Join Now
Telegram Group Join Now
ಬೆಳಗಾವಿ, ಏ.11: ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕಿನಲದಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ನಿಲಯಗಳಲ್ಲಿನ ಒಟ್ಟು-1804 ವಿದ್ಯಾರ್ಥಿಗಳು ದ್ವಿತಿಯ ಪಿ.ಯು.ಸಿ ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ ಶೇ.90% ಕ್ಕೂ ಮೇಲ್ಪಟ್ಟು ಹೆಚ್ಚಿನ ಅಂಕ ಪಡೆದು 306, ಶೇ.80% ಕ್ಕೂ ಕ್ಕೂ ಮೇಲ್ಪಟ್ಟು ಹೆಚ್ಚಿನ ಅಂಕ ಪಡೆದು 508 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಅತ್ಯುತ್ತಮ ಸಾಧನೆಗೈದಿರುತ್ತಾರೆ.
ಪರೀಕ್ಷೆಗೆ ಹಾಜರಾದ ಇಲಾಖೆಯ ವಿದ್ಯಾರ್ಥಿನಿಲಯಗಳ ಒಟ್ಟು-1804 ವಿದ್ಯಾರ್ಥಿಗಳಲ್ಲಿ 1741 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಒಟ್ಟು 96.51% ರಷ್ಟು ಫಲಿತಾಂಶವನ್ನು ಪಡೆಯಲಾಗಿರುತ್ತದೆ ಎಂದು ಕು.ಶಿವಪ್ರಿಯಾ ಕಡೇಚೂರ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಗಂಗವ್ವ ಸುಣಧೋಳಿ ರಾಜ್ಯಕ್ಕೆ 5ನೇ ರ್‍ಯಾಂಕ್: ಸವದತ್ತಿ ತಾಲೂಕಿನ ಮೆಟ್ರಿಕ್ ನಂತರದ ಬಾಲಕಿಯರ ನಿಲಯ ಮುನವಳ್ಳಿ ವಿದ್ಯಾರ್ಥಿನಿಯಾದ ಕು.ಗಂಗವ್ವ ಸುಣಧೋಳ್ಳಿ ಇವರು 600ಕ್ಕೆ 592 ಅಂಕ ಪಡೆದು ಶೇ.99% ಪ್ರತಿಶತ ಗಳಿಸಿ ರಾಜ್ಯಕ್ಕೆ ಐದನೆ ರ‍್ಯಾಂಕ್ ಪಡೆದು ಇಲಾಖೆಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.
ಅದರಂತೆ, ವಿದ್ಯಾರ್ಥಿನಿಲಯಗಳಲ್ಲಿದ್ದು ವ್ಯಾಸಂಗ ಮಾಡಿ ಜಿಲ್ಲೆಗೆ ಪ್ರಥಮ ಐದು ಸ್ಥಾನ ಪಡೆದ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿರುತ್ತದೆ.
   
ಕು.ಗಂಗವ್ವ ಸುಣದೋಳ್ಳಿ
(592) 99%
ಮೆ.ನಂ ಬಾಲಕಿಯರ ವಿ.ನಿ ಮುನವಳ್ಳಿ ತಾ||ಸವದತ್ತಿ ಕು. ಆಶ್ಮಾ ಶಾನೂರಖಾನ
(588) 98%
ಮೆ.ನಂ ಬಾಲಕಿಯರ ವಿ.ನಿ ಮಜಲಟ್ಟಿ-2 ತಾ||ಚಿಕ್ಕೋಡಿ ಕು. ವಿಶ್ವನಾಥ ಕ ವಡ್ರಾಳಿ (586) 97.67%
ಮೆ.ನಂ ಬಾಲಕರ ವಿ.ನಿ ಮಜಲಟ್ಟಿ ತಾ||ಚಿಕ್ಕೋಡಿ
ಕು.ರೇಣುಕಾ ಬಸಪ್ಪ ನಾಗೋಜಿ
(585) 97.50%
ಮೆ.ನಂ ಬಾಲಕಿಯರ ವಿ.ನಿ ಮಜಲಟ್ಟಿ-1 ತಾ||ಚಿಕ್ಕೋಡಿ ಕು.ವಿಠ್ಠಲ ಭೀ ಗಡ್ಡೇದಾರ
(585) 97.50%
ಮೆ.ನಂ ಬಾಲಕರ ವಿ.ನಿ ಮಜಲಟ್ಟಿ ತಾ||ಚಿಕ್ಕೋಡಿ
ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿದ್ದುಕೊಂಡು ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ‌ ಅಭಿನಂದಿಸಿದ್ದಾರೆ ಎಂದು ಇಲಾಖೆಯ ಜಿಲ್ಲಾ ಅಧಿಕಾರಿ ಶಿವಪ್ರಿಯಾ ಕಡೇಚೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article