ಬಸವೇಶ್ವರ ಕೋ ಆಪರೇಟಿವ್ ಬ್ಯಾಂಕ್‌ಗೆ ರಮೇಶ ಕಳಸಣ್ಣವರ ಅಧ್ಯಕ್ಷ ಮತ್ತು ಗಿರೀಶ್ ಬಾಗಿ ಉಪಾಧ್ಯಕ್ಷ

Ravi Talawar
ಬಸವೇಶ್ವರ ಕೋ ಆಪರೇಟಿವ್ ಬ್ಯಾಂಕ್‌ಗೆ ರಮೇಶ ಕಳಸಣ್ಣವರ ಅಧ್ಯಕ್ಷ ಮತ್ತು ಗಿರೀಶ್ ಬಾಗಿ ಉಪಾಧ್ಯಕ್ಷ
WhatsApp Group Join Now
Telegram Group Join Now

ಬೆಳಗಾವಿ: ಬೆಳಗಾವಿ ಶ್ರೀ ಬಸವೇಶ್ವರ ಕೋ-ಆಪರೇಟಿವ ಬ್ಯಾಂಕ್‌ಗೆ ನೂತನ ಅಧ್ಯಕ್ಷರಾಗಿ ರಮೇಶ ಕಳಸಣ್ಣವರ ಮತ್ತು ಉಪಾಧ್ಯಕ್ಷರಾಗಿ ಗಿರೀಶ ಬಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ಬ್ಯಾಂಕಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳನ್ನು ಭರ್ತಿ ಮಾಡಲು ಬ್ಯಾಂಕಿನ ಆಡಳಿತ ಕಚೇರಿಯಲ್ಲಿ ಮಂಗಳವಾರ ಬೆಳಗಾವಿ ಶ್ರೀ ಬಸವೇಶ್ವರ ಕೋ-ಆಪರೇಟಿವ ಬ್ಯಾಂಕ್‌ ರಿಟರ್ನಿಂಗ ಅಧಿಕಾರಿ, ಸಹಕಾರ ಸಂಘಗಳ ಹಿರಿಯ ನಿರೀಕ್ಷಕ ಜಿ ಎಸ್ ಪಾಟೀಲ ಅವರು ಚುನಾವಣಾ ಪ್ರಕ್ರಿಯೆ ನೆರವೇರಿಸಿದರು.

ಆಯ್ಕೆ ನಂತರ ಮಾತನಾಡಿದ ರಮೇಶ್ ಮತ್ತು ಗಿರೀಶ್ ಅವರು ನಿರ್ದೇಶಕ ಮಂಡಳಿ ಹಾಗೂ ಸದಸ್ಯರ ಸಲಹೆ, ಸಹಕಾರದೊಂದಿಗೆ ಪಾರದರ್ಶಕ ಆಡಳಿತ ನಡೆಸುವುದಾಗಿ ಭರವಸೆ ನೀಡಿದರು.

ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಇಬ್ಬರನ್ನೂ ಬ್ಯಾಂಕಿನ ನಿರ್ದೇಶಕರು ಹಾಗೂ ವ್ಯವಸ್ಥಾಪನಾ ಮಂಡಲಿ ಅಧ್ಯಕ್ಷರಾದ ಬಿ.ಬಿ.ಕಗ್ಗಣಗಿ, ನಿರ್ದೇಶಕರಾದ ಪಿ.ಎಮ್.ಬಾಳೇಕುಂದ್ರಿ, .ಆರ್.ಎಸ್.ಸಿದ್ದಣ್ಣವರ, ಬಿ.ವಿ.ಝೊಂಡ, ಬಿ.ವಿ.ಉಪ್ಪಿನ, ಎಸ್.ಎಸ್. ಹೇರೆಕರ, ಡಿ.ಎಂ.ಕುಡಚಿ, ಎಸ.ಆರ್.ಶಿವಣ್ಣವರ, ಎಸ.ಕೆ.ಪಾಟೀಲ, ಸಿ.ಎಚ್. ಕಟ್ಟಿಮನಿ ಮತ್ತು ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಆರ್.ಎಸ.ಚೊಣ್ಣದ ಹಾಗೂ ಜನರಲ್ ಮ್ಯಾನೇಜgï ಎಸ್.ಎಸ್ ವಾಲಿ, ಪ್ರಭಾರ ಮುಖ್ಯ ಶಾಖಾ ವ್ಯವಸ್ಥಾಪಕ ಆರ್.ಯು.ತೆಲಸಂಗ ಹಾಗೂ ಸಿಬ್ಬಂದಿ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ನಮ್ಮ ಬ್ಯಾಂಕಿನ ನಿರ್ದೇಶಕಿ  ದೀಪಾ ಕುಡಚಿ ಅವರ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ಮಧ್ಯಪ್ರದೇಶ ರಾಜ್ಯದ ಭೊಪಾಲದಲ್ಲಿರುವ ಪಂಡಿತ ದೀನ ದಯಾಲ ವಿಶ್ವವಿದ್ಯಾಲಯವು ಅವರಿಗೆ ಏಪ್ರಿಲ್ 24ರಂದು ಗೌರವ ಡಾಕ್ಟರೇಟ್ ಪದವಿ ನೀಡಿ ಸನ್ಮಾನಿಸಿದ ನಿಮಿತ್ತ  ಸಂಸ್ಥೆಯ ಪರವಾಗಿ ಅಭಿನಂದಿಸಲಾಯಿತು.

ಬ್ಯಾಂಕಿನ ನಿರ್ದೇಶಕರಾದ ಪ್ರಕಾಶ ಮಲ್ಲಪ್ಪಾ ಬಾಳೇಕುಂದ್ರಿ ಅವರು ಸಾಮಾಜದ ಏಳಿಗೆ ಹಾಗೂ ಶ್ರೇಯೋಭಿವೃದ್ಧಿಗಾಗಿ ಮಾಡಿದ ಸೇವೆಯನ್ನು ಪರಿಗಣಿಸಿ  ಜ್ಞಾನಯೋಗಿ ವಿದ್ಯಾ ಸಂಸ್ಥೆ(ರಿ) ಧಾರವಾಡ ಸಂಸ್ಥೆಯು ಜೂನ್ 15 ರಂದು ಅವರಿಗೆ ಗಾಣಿಗ ರತ್ನ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದ ನಿಮಿತ್ತ ಸಂಸ್ಥೆಯ ಪರವಾಗಿ  ಅಭಿನಂದಿಸಲಾಯಿತು.

ಬ್ಯಾಂಕಿನ ನಿರ್ದೇಶಕ ಹಾಗೂ ಬ್ಯಾಂಕಿನ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷರಾದ ಬಾಳಪ್ಪಾ ಕಗ್ಗಣಗಿ ಅವರು ಬೆಳಗಾವಿ ಜಿಲ್ಲಾ ಸಹಕಾರ ಯುನಿಯನ್ ಸಂಸ್ಥೆಯ ಐದು ವರ್ಷಗಳ ಅವಧಿಗೆ ಜೂನ್ 21 ರಂದು ಜರುಗಿದ ಆಡಳಿತ ಮಂಡಳಿ ಚುನಾವಣೆಯಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳ ವಿಭಾಗದಲ್ಲಿ ಏಕೈಕ ಉಮೇದುವಾರರಾಗಿ ಸ್ಪರ್ಧೆಯಲ್ಲಿ ಇರುವುದರಿಂದ ಅವರು ಜೂನ್ 22ರಂದು ಅವಿರೋಧವಾಗಿ ಆಯ್ಕೆ ಆಗಿದ್ದರು. ಹೀಗಾಗಿ ಅವರನ್ನು ಸಂಸ್ಥೆಯ ಪರವಾಗಿ ಅಭಿನಂದಿಸಲಾಯಿತು. ಬ್ಯಾಂಕಿನ ನಿರ್ದೇಶಕಿ ಎಸ್.ಎಸ್.ಹೇರೆಕರ ವಂದಿಸಿದರು.

WhatsApp Group Join Now
Telegram Group Join Now
Share This Article