ಬೆಳಗಾವಿ. ಬರುವ ದಿ. 7 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ದಲಿತ ಸಂಘರ್ಷ ಸಮಿತಿಗಳು ಮತ್ತು ದಲಿತ ಮಹಿಳಾ ಒಕ್ಕೂಟಗಳು ಸೇರಿಕೊಂಡು ಇಂಡಿಯಾ ಮೈತ್ರಿಕೂಟ ಒಕ್ಕೂಟವನ್ನು ಬೆಂಬಲಿಸಲು ತೀರ್ಮಾನಿಸಲಾಗಿದೆ ಎಂದು ಡಿ ಎಸ್ ಎಸ್ (ಆಂತರಿಕ ಶಿಸ್ತು ತರಬೇತಿ )ಜಿಲ್ಲಾ ಸಂಘಟನಾ ಸಂಚಾಲಕರಾದ ಬಸವರಾಜ ತಳವಾರ ಹೇಳಿದರು.
ಅವರು ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಬಿಜೆಪಿ ಒಕ್ಕೂಟದ ಸರ್ಕಾರವು ಸಂವಿದಾನದ ಆಶಯಗಳನ್ನು ಗಾಳಿಗೆ ತೂರಿ ಪ್ರಜಾಪ್ರಭುತ್ವವನ್ನು ನಾಶ ಮಾಡಲು ಹೊರಟಿದ್ದು ಕೈಗಾರಿಕೆ, ಉದ್ದಿಮೆ ಖಾಸಗಿಕರ, ನಿರುದ್ಯೋಗ ಸೃಷ್ಟಿ, ಐಡಿ, ಇನ್ಕಮ್ ಟ್ಯಾಕ್ಸ್ ವಿರೋಧ ಪಕ್ಷದ ನಾಯಕರ ಮೇಲೆ ಧಾಳಿ, ಧರ್ಮಧಾರಿತ ರಾಜಕಾರಣ, ರೈತರ, ಕಾರ್ಮಿಕರ ಹಿತಾಶಕ್ತಿ ಬದಲಾವಣೆ, ರೈತ ಹೋರಾಟಗಾರ ಮೇಲೆ ಕ್ರಮ, ಅಲ್ಪಸಂಖ್ಯಾತ ಮೀಸಲಾತಿ ಕಡಿತ, ಸಂವಿಧಾನ ಬದಲಾವಣೆ ಹೇಳಿಕೆ, ಕಾಂಗ್ರೆಸ್ ಇಲ್ಲದಂತೆ ಮಾಡುತ್ತೇವೆ ಎಂಬ ಹೇಳಿಕೆ, ಬೆಲೆ ಏರಿಕೆ, ಇನ್ನು ಅನೇಕ ಇದ್ದು ದಲಿತರ ಬಾಳು ಉದ್ದಾರ ಆಗಬೇಕಾದರೆ ಇಂಡಿಯಾ ಒಕ್ಕೂಟದ ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿಗಳಾದ ಮೃನಾಲ್ ಹೆಬ್ಬಾಳಕರ್ ಮತ್ತು ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ದಲಿತ ಸಂಘರ್ಷ ಸಮಿತಿ ಬೆಂಬಲ ಸುಚಿಸುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕರಾದ ದುರಗಪ್ಪ ಮೇಲಿನಮನಿ, ರವಿದ್ರ ಸಣ್ಣಕ್ಕಿ, ಪ್ರಕಾಶ್ ಮರಡಿ, ಬಾಬು ಕಾಂಬ್ಳೆ, ಮಲ್ಲೇಶ್ ಕಾಂಬ್ಳೆ, ರಮೇಶ ಮುಶಣ್ಣವರ ಶಿವರಾಮ್ ತಳವಾರ ಸೇರಿದಂತೆ ಅನೇಕರು ಇದ್ದರು.