ನಾಗನೂರು: ಮೃದು ಹೃದಯಿ ಬಸವಣ್ಣನವರು ಸಮಾಜದಲ್ಲಿ ತುಂಬಿರುವ ಮೂಡಾಚಾಗಳನ್ನು ಕಿತ್ತೆಸೆಯಲು ತಾವೆ ಕೆಳಗಿಳಿದು ಎನಗಿಂತ ಕಿರಿಯರಿಲ್ಲ ಎಂದು ಸಮಾಜವನ್ನು ಮೇಲೆತ್ತಿದ ಮನುಕುಲೋಧ್ಧಾರಕರು ಎಂದು ಸುನಂದಾ ಎಮ್ಮಿ ಹೇಳಿದರು.
ಶ್ರೀ ಶಿವಬಸವೇಶ್ವರ ಟ್ರಸ್ಟ್ , ಚಿನ್ನಮ್ಮ ,ಬ, ಹಿರೇಮಠ ವೃಧ್ಧಾಶ್ರಮ ದೇವರಾಜ್ ಅರಸ ಬಡಾವಣೆ ಬಸವನ ಕುಡಚಿ ಬೆಳಗಾವಿ ಆಶ್ರಮದಲ್ಲಿ ಬುಧವಾರ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಇವರು ಶ್ರಾವಣ ಮಾಸದ ಮನೆ ಮನೆಗಳಲ್ಲಿ ಮನ ಮನಂಗಗಳಿಗೆ ವಚನ ಕಾರ್ಯಕ್ರಮದ ನಿಮಿತ್ತವಾಗಿ ಶರಣೆ ಪ್ರೇಮಾ ಪುರಾಣಿಕ ಮಠ ಮತ್ತು ಶರಣ ಡಾ, ಆನಂದ ಪುರಾಣಿಕ ಮಠ ಇವರು ಇಲ್ಲಿ ಉಪನ್ಯಾಸ ಮತ್ತು ಪ್ರಸಾದ ವ್ಯವಸ್ಥೆಯನ್ನು ಮಾಡಿದ್ದರು.
ಷಟಸ್ಥಲ ಧ್ವಜಾರೋಹಣದ ನಂತರ ಇಂದಿನ ಉಪನ್ಯಾಸವನ್ನು ಶರಣೆ ಸುನಂದಾ ಎಮ್ಮಿ ಅವರು ಅಪ್ಪ ಬಸವಣ್ಣನವರ ಸಾಮಾಜಿಕ ಕಳಕಳಿ ಕುರಿತು ಮಾತನಾಡಿದರು.
ಹನ್ನೆರಡನೇ ಶತಮಾನದಲ್ಲಿ ಸಾಮಾಜಿಕ ಪರಿಸ್ಥಿತಿಗಳು ತುಂಬಾ ಚಿಂತಾಜನಕ ವಾಗಿದ್ದವು. ಅಸ್ಪೃಶ್ಯತೆ , ಲಿಂಗ ಭೇದ, ವೃತ್ತಿ ಭೇದ, ಮೇಲು ಕಿಳುಗಳ ತಾರತಮ್ಯವನ್ನು ಕಂಡು, ಮೃದು ಹೃದಯಿ ಬಸವಣ್ಣನವರು ಸಮಾಜದಲ್ಲಿ ತುಂಬಿರುವ ಮೂಡಾಚಾಗಳನ್ನು ಕಿತ್ತೆಸೆಯಲು ತಾವೆ ಕೆಳಗಿಳಿದು ಎನಗಿಂತ ಕಿರಿಯರಿಲ್ಲ ಎಂದು ಸಮಾಜವನ್ನು ಮೇಲೆತ್ತಿದ ಮನುಕುಲೋಧ್ಧಾರಕರು, ಅಪ್ಪನೂ ನಮ್ಮ ಮಾದಾರ ಚೆನ್ನಯ್ಯ ಬೊಪ್ಪನು ನಮ್ಮ ಡೊಹರ ಕಕ್ಕಯ್ಯನು ಎಂದು ಸಾಮರಸ್ಯ ಮೇರದವರು, ಅಂತಃಕರಣವಳ್ಳ ಬಸವಣ್ಣನವರು ಜಾತಿ ಕುಲ, ಸೂತಕಗಳ ತೊಡೆದು ಹಾಕಿ ಸರ್ವರಿಗೂ ಸಮಬಾಳು ಕೊಟ್ಟವರು ಮಹಾ ಮಾನವತಾವಾದಿ ಬಸಣ್ಣನವರಿಗೆ ಬಸವಣ್ಣವರೆ ಸಾಟಿ. ಅವರ ಹೃದಯ ಸದಾ ಸಮಾಜಕ್ಕಾಗಿ ಮಿಡಿಯುತ್ತಿತ್ತೆಂದು ಎಳೆ ಎಳೆಯಾಗಿ ವಚಗನಳ ವಿಶ್ಲೇಷಣೆ ಮಾಡುತ್ತಾ ತುಂಬಾ ಸುಂದರವಾಗಿ ಮಾತನಾಡಿದರು.
ಅಧ್ಯಕ್ಷರು ಎಸ್ ಜಿ ಸಿದ್ನಾಳರು ಮಾತನಾಡಿದರು ಜಾಗತಿಕ ಲಿಂಗಾಯತದ ಅಧ್ಯಕ್ಷರು ಬಸವರಾಜ ರೊಟ್ಟಿ ಅವರು ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಒಂದಾಗಿ ಚಂದಾಗಿ ಸಾಮಾಜಿಕ ಕೆಲಸಗಳನ್ನು ಮಾಡುವುದು ಅವಶ್ಯವಾಗಿದೆ ಎಂದು ಹೇಳಿದರು.
ಶರಣರಾದ ಅಶೋಕ್ ಮಳಗಲಿ, ಬೆಂಡಿಗೇರಿ ಅವರು ಉಪಸ್ಥಿತರಿದ್ದರು ಶರಣ ಕಟ್ಟಿಮನಿ ಅವರು ನಿರೂಪಣೆ ಮಾಡಿದರು, ಶರಣೆಯರಾದ ಶೈಲೇಜಾ ಮುನವಳ್ಳಿ ಮತ್ತು ಸುನಿತಾ ನಂದೆಣ್ಣವರ ಪ್ರಾರ್ಥನೆ ನಡೆಸಿಕೊಟ್ಟರು, ಕಾರ್ಯದರ್ಶಿ ಶಂಕರ ಶೆಟ್ಟಿ ಹಾಗೂ ಎಲ್ಲ ಶರಣ ಶರಣೆಯರು ಆಶ್ರಮದ ಎಲ್ಲ ಶರಣ ಶರಣೆಯರು ಉಪಸ್ಥಿತರಿದ್ದರು.