ಬಸವಣ್ಣನವರು ಕಾಯಕ, ದಾಸೋಹ, ಸಮಾನತೆಯ ಹರಿಕಾರರು: ತೋಂಟದ ಸಿದ್ಧರಾಮ ಶ್ರೀಗಳು

Ravi Talawar
ಬಸವಣ್ಣನವರು ಕಾಯಕ, ದಾಸೋಹ, ಸಮಾನತೆಯ ಹರಿಕಾರರು: ತೋಂಟದ ಸಿದ್ಧರಾಮ ಶ್ರೀಗಳು
WhatsApp Group Join Now
Telegram Group Join Now

ಗದಗ,ಏಪ್ರಿಲ್​ 08:  : ಬಸವಾದಿ ಶಿವಶರಣರು ಜಾತಿ, ವರ್ಗ, ವರ್ಣ, ಲಿಂಗಭೇದವನ್ನು ತೊಡೆದು ಹಾಕಿ ಸರ್ವಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಬೇಕೆಂದು
ಕನಸು ಕಂಡಿದ್ದರು. ಬಸವಣ್ಣನವರು ಕಾಯಕ, ದಾಸೋಹ, ಸಮಾನತೆಯ ಹರಿಕಾರರು ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೬೮೭ನೆಯ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ, ಜಾಗತಿಕ ಇತಿಹಾಸದಲ್ಲಿ ದಾಖಲೆಯಾಗುವಂತಹ ವಿನೂತನ ಸಮಾಜೋಧಾರ್ಮಿಕ ಚಳುವಳಿಯನ್ನು ಬಸವಾದಿ ಶಿವಶರಣರು ನಡೆಸಿದರು. ಸಾಮಾಜೋಧಾರ್ಮಿಕ ಚಳುವಳಿ ಜಾಗತಿಕ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂತಹ ಕಾಲಘಟ್ಟ. ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ನಮ್ಮ ಕೂಡಲಸಂಗನ ಶರಣರೇ ಕುಲಜರು ಎಂದು ಉಲ್ಲೇಖಿಸಿ ಮಾತನಾಡಿದ ಶ್ರೀಗಳು ಸಮಾಜದಲ್ಲಿ ಸಕಲ ಜೀವಿಗಳಲ್ಲಿ ಶ್ರೇಷ್ಠತೆಯನ್ನು ಬಯಸುವ ಪ್ರತಿಯೊಬ್ಬ ವ್ಯಕ್ತಿಯೂ ಶರಣರೇ. ಎನಗಿಂತ ಕಿರಿಯರಿಲ್ಲ, ಶಿವಭಕ್ತಿರಿಗಿಂತ ಹಿರಿಯರಿಲ್ಲ ಎಂದು ಬಸವಣ್ಣನವರು ಎಲ್ಲರಲ್ಲಿಯೂ ಸಮಾನತೆಯನ್ನು ಕಂಡಿದ್ದಾರೆ ಎಂದು ಶ್ರೀಗಳು ಹೇಳಿದರು.

ಡಾ. ರಮೇಶ ಕಲ್ಲನಗೌಡರ ಪ್ರಾಚಾರ್ಯರು, ಸ.ಪ್ರ.ದ. ಮಹಾವಿದ್ಯಾಲಯ, ಮುಳಗುಂದ ಅವರು ಉಪನ್ಯಾಸ ನೀಡಿ, ೧೨ ನೇ ಶತಮಾನ ಜಗತ್ತಿನಲ್ಲಿ ಅದ್ಭುತ ಕ್ರಾಂತಿಗೆ ಸಾಕ್ಷಿಯಾದ ಕಾಲ. ವಿಶ್ವಗುರು ಬಸವಣ್ಣನವರು ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರು. ಅತ್ಯಂತ ಪ್ರಿತ್ಯಾಧಾರದಿಂದ ಡೋಹರ ಕಕ್ಕಯ್ಯನವರನ್ನು ಬಸವಣ್ಣನವರು ತಮ್ಮ ವಚನಗಳಲ್ಲಿ ಸ್ಮರಿಸಿದ್ದಾರೆ.

ಬಸವಾದಿ ಶಿವಶರಣರು ಕಾಯಕ, ದಾಸೋಹ, ಸಮಾನತೆ ತತ್ತ್ವಗಳನ್ನು ಸಾರಿದ್ದಾರೆ. ಡೋಹರ ಕಕ್ಕಯ್ಯನವರು ದಾಸೋಹಂಭಾವಿಗಳು, ಕಾಯಕನಿಷ್ಠರು ಆಗಿದ್ದರು ಎಂದು ಮಾತನಾಡಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಸದಸ್ಯರಾಗಿ ನೇಮಕಗೊಂಡ ನಿಮಿತ್ತ ಡಾ. ಅರ್ಜುನ ಗೊಳಸಂಗಿ ಸಾಹಿತಿಗಳು ಹುಲಕೋಟಿ, ಕರ್ನಾಟಕ ಜಾನಪದ ಅಕಾಡೆಮಿಗೆ ಸದಸ್ಯರಾಗಿ ನೇಮಕಗೊಂಡ ನಿಮಿತ್ತ ಶಂಕ್ರಣ್ಣ ಸಂಕಣ್ಣವರ ಜಾನಪದ ಕಲಾವಿದರು ಕೊತಬಾಳ, ಕರ್ನಾಟಕ ಬಂಜಾರ ಅಕಾಡೆಮಿಗೆ ಸದಸ್ಯರಾಗಿ
ನೇಮಕಗೊಂಡ ನಿಮಿತ್ತ ಶ್ರೀಮತಿ ಸಾವಿತ್ರಿಬಾಯಿ ಲಮಾಣಿ ಜನಪದ ಕಲಾವಿದರು ಪಾಪನಾಶಿ ತಾಂಡೆ ಅವರನ್ನು ಶ್ರೀಗಳು ಸಂಮಾನಿಸಿದರು. ಮೋಹನ ಗಜಾಕೋಶ ಕಾರ್ಯದರ್ಶಿ ಡೋಹರ ಸಮಾಜ ಗದಗ ಅವರು ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು.

ಶ್ರೀಮತಿ ಸುಮತಿ ಮುರಗೋಡ ಪಿ.ಪಿ.ಜಿ. ಸಂಗೀತ ಮಹಾವಿದ್ಯಾಲಯ ಗದಗ ವಚನಸಂಗೀತ ಹಾಡಿದರು. ಗುರುನಾಥ ಸುತಾರ ತಂಡದವರು ತಬಲಾ ಮತ್ತು
ಹಾರ್ಮೋನಿಯಂ ಸಾಥ್ ನೀಡಿದರು. ಧರ್ಮಗ್ರಂಥ ಪಠಣವನ್ನು ಶ್ರೀಗಿರಿ ಗಜಾನನ ವೆರ್ಣೇಕರ, ವಚನ ಚಿಂತನೆಯನ್ನು ಪೂಜಾ ಗಜಾನನ ವೆರ್ಣೇಕರಮಾಡಿದರು.

ಶಿವಾನುಭವದ ದಾಸೋಹ ಭಕ್ತಿಸೇವೆಯನ್ನು ವಹಿಸಕೊಂಡಿದ್ದ  ಚನ್ನಬಸಪ್ಪ ಅಂಗಡಿ ಗದಗ ಅವರನ್ನು ಪೂಜ್ಯರು ಸಂಮಾನಿಸಿದರು.  ಸರ್ವರನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.

ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ವಿ. ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ಸಹಕಾರ್ಯದರ್ಶಿ ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ಶಿವಾನುಭವ ಸಮಿತಿ ಚೇರಮನ್‌ರಾದ ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article