ರೈತ ಹುತಾತ್ಮ ದಿನಾಚರಣೆಯ ಅಂಗವಾಗಿ ಬಸವಣ್ಣನವರಿಗೆ ಮಾಲಾರ್ಪಣೆ

Ravi Talawar
ರೈತ ಹುತಾತ್ಮ ದಿನಾಚರಣೆಯ ಅಂಗವಾಗಿ ಬಸವಣ್ಣನವರಿಗೆ ಮಾಲಾರ್ಪಣೆ
WhatsApp Group Join Now
Telegram Group Join Now
ಬಳ್ಳಾರಿ,ಜು.22..: ೧೯೮೩ ರಲ್ಲಿ ಮಹದಾಯಿ ನೀರಾವರಿ ಹೋರಾಟಕ್ಕಾಗಿ ನರಗುಂದ, ನವಲಗುಂದ ಭಾಗದಲ್ಲಿ ಆರಂಭಗೊAಡ ರೈತ ಹೋರಾಟವು, ಬರಗಾಲ ಪೀಡಿತ ರೈತರಲ್ಲೇ ಕರವಸೂಲಿ, ಬ್ಯಾಂಕುಗಳ ಸಾಲ ಮರುಪಾವತಿಗೆ ಒತ್ತಾಯ, ಕರೆಂಟ್ ಮೀಟರ್ ಜಾರ್ಜ್ ಗಳಿಗೆ ಒತ್ತಾಯ, ರೈತರ ದನ ಕರುಗಳು, ದವಸ ಧಾನ್ಯಗಳ   ಜಪ್ತಿ , ಈ ರೀತಿಯಾಗಿ ಸರ್ಕಾರವು ರೈತರ ಮೇಲೆ ಮಾಡುತ್ತಿರುವ ದೌರ್ಜನ್ಯವನ್ನು ಖಂಡಿಸಿ ೧೯೮೩ ರಲ್ಲಿ ಸರ್ಕಾರದ ವಿರುದ್ಧ ರೈತರು ಉಗ್ರ ಹೋರಾಟವನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ರೈತರ ಹೋರಾಟವನ್ನು ಹತ್ತಿಕ್ಕಲು ಸರ್ಕಾರವು ರೈತರ ಮೇಲೆ ಗೋಲಿಬಾರ್ ಮಾಡಿದಾಗ, ಅನೇಕ ರೈತರು ಗೋಲಿಬಾರಿಗೆ ಬಲಿಯಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತುಂಗಭದ್ರಾ ರೈತ ಸಂಘ ತಿಳಿಸಿದೆ.
ಹುತಾತ್ಮರಾದ ರೈತರಿಗೆ, ಶಾಂತಿ ಕೋರುವುದಕ್ಕಾಗಿ ಈ ದಿನ ಬಳ್ಳಾರಿ ನಗರದ ಮೋತಿ ಸರ್ಕಲ್ ನಲ್ಲಿರುವ ಬಸವಣ್ಣನ ಹಸಿರು ಶಾಲು ಹಾಕಿ ಮಾಲಾರ್ಪಣೆ ಮಾಡಿ ಹುತಾತ್ಮ ರೈತರ ಸ್ಮರಣೆ ಮಾಡಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಎಂ. ಮಹೇಶ್ವರ ಸ್ವಾಮಿ, ಡಾ. ಪುರುಷೋತ್ತಮ್ ಗೌಡ, ಕೊಳೂರು ಚಂದ್ರಶೇಖರ ಗೌಡ, ಗೌರಿಶಂಕರ ಸ್ವಾಮಿ , ಎಣ್ಣೆ ಎರಿಸ್ವಾಮಿ, ಬಂಡೆಗೌಡರು, ಆರ್. ಎಸ್. ಎಮ್. ಚನ್ನಬಸಯ್ಯಸ್ವಾಮಿ, ನಾಗರಾಜ ಸ್ವಾಮಿ, ಶಿವಶಂಕರಗೌಡ, ವೀರಭದ್ರಯ್ಯ ಸ್ವಾಮಿ, ಹಾಗೂ ಇತರೆ ರೈತರು.
WhatsApp Group Join Now
Telegram Group Join Now
Share This Article