ಸತ್ಸಂಗದಿಂದ ಮನಸ್ಸಿಗೆ ನೆಮ್ಮದಿ: ಬಸವಗೋಪಾಲ ಶ್ರೀ

Ravi Talawar
ಸತ್ಸಂಗದಿಂದ ಮನಸ್ಸಿಗೆ ನೆಮ್ಮದಿ: ಬಸವಗೋಪಾಲ ಶ್ರೀ
WhatsApp Group Join Now
Telegram Group Join Now

ಮಹಾಲಿಂಗಪುರ : ಕಟ್ಟೆಯ ಮೇಲೆ ಕುಳಿತು ಇನ್ನೊಬ್ಬರ ಕುರಿತು ಮಾತನಾಡುತ್ತ ನಮ್ಮ ಘನತೆ, ಗೌರವಗಳನ್ನು ನಾವೇ ಹಾಳು ಮಾಡಿಕೊಳ್ಳುವುದಕ್ಕಿಂತ ದೇವರು ಮಹಾಪುರುಷರ ಕುರಿತ ಚರ್ಚೆಮಾಡಿದಲ್ಲಿ ಮನಸ್ಸಿಗೆ ನೆಮ್ಮದಿ ದೊರಕುತ್ತದೆ ಎಂದು ಬಂಡಿಗಣಿ ಬಸವಗೋಪಾಲ ನೀಲಮಾಣಿಕ ಮಠದ ಅನ್ನದಾನೇಶ್ವರ ಶ್ರೀ ಹೇಳಿದರು.

ಚಿಮ್ಮಡ ಗ್ರಾಮದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪಾದಯಾತ್ರಿಗಳ ಸ್ವಾಗತ ಹಾಗೂ ಸತ್ಸಂಗ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು ಸಾಧು ಸಂತರು, ಮಹಾನ್ ಪುರುಷರ ಕುರಿತ ಚರ್ಚೆಯಿಂದ ಜ್ಞಾನವೃಧ್ದಿಯಾಗುತ್ತದೆ, ದೇಶಪ್ರೇಮ ಬೆಳೆಯುತ್ತದೆ ಹಾಗೂ ಮಕ್ಕಳಿಗೆ ದೇಶದ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗುತ್ತದೆ. ನಾವು ಯಾರಿಗೂ ಅನ್ಯಾಯ ಮಾಡಬಾರದು ಅಣ್ಯಾಯ ಸಹಿಸಲೂಬಾರದು. ದೇಶದ ವಿಷಯ ಬಂದಾಗ ಒಗ್ಗಟ್ಟಾಗಿರಬೇಕೆಂದರು.

ಬಾವಲತ್ತಿಯ ವಿಜಯ ವೇದಾಂಗ ಶ್ರೀ ಮಾತನಾಡಿ ದೇವರು ಧರ್ಮದದಲ್ಲಿ ಜೊಳ್ಳು ಪೊಳ್ಳು ಹೋಗಿ ಗಟ್ಟಿ ಕಾಳುಗಳು ಮಾತ್ರ ಉಳಿಯಲಿವೆ. ಶರಣ ಮಹಾತ್ಮರು ನಿಜ ಭಕ್ತರಲ್ಲಿ ಯಾವತ್ತೂ ನೆಲೆಸಿರುತ್ತಾರೆಂದರು.
ಯೂಥ ಕಾಂಗ್ರೇಸ್ ಅಧ್ಯಕ್ಷ ಪ್ರವೀಣ ಪೂಜಾರಿ ಮಾತನಾಡಿ ಬಂಡಿಗಣಿ ಮಠದ ಇತಿಹಾಸ ಶ್ರೀಗಳ ಸಾರ್ವಜನಿಕ ಸೇವೆಗಳ ಕುರಿತು ವಿವರಿಸಿದರು.

ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಬಿ.ಎಸ್. ಪಾಟೀಲ, ಆರ್.ಎಂ. ಬಗನಾಳ, ಹರಳಯ್ಯ ಅಥಣಿ, ದುಂಡಪ್ಪಾ ಪಾಟೀಲ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.ಇದೇ ಸಂಧರ್ಬದಲ್ಲಿ ದಾನೇಶ್ವರ ಶ್ರೀಗಳನ್ನು ಬ್ರಹತ್ ರಥದ ಮೇಲೆ ಸಕಲ ವಾದ್ಯ ವೃಂದಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸಾವಿರಾರು ಜನ ಭಕ್ತಾಧಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದು.

 

 

WhatsApp Group Join Now
Telegram Group Join Now
Share This Article