ಬೆಳಗಾವಿ: 12ನೇ ಶತಮಾನದ ಮಾನವತಾವಾದಿ ಬಸವಾದಿ ಶರಣರು ನೀಡಿದ ವಚನ ಸಾಹಿತ್ಯ ಜಾತಿರಹಿತ ಸಮಾನತೆಯ ಸಮಾಜದ ನಿರ್ಮಾಣಕ್ಕೆ ದಾರಿ ದೀಪವಾಗಿದೆ ಎಂದು ಮಾರಿಹಾಳ ಪಿಕೆಪಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ಮಾದಮ್ಮನವರ ಹೇಳಿದರು.
ಸಮೀಪದ ಮಾರಿಹಾಳ ಗ್ರಾಮದಲ್ಲಿ ಶ್ರಾವಣ ಮಾಸದ ಭಜನಾ ಸಪ್ತಾಹ ಮುಕ್ತಾಯದ ಅಂಗವಾಗಿ ವಾಲ್ಮೀಕಿ ಭಜನಾ ಮಂಡಳದಿಂದ,
ಗುಡದಮ್ಮ ದೇವಿ ದೇವಸ್ಥಾನದಲ್ಲಿ ಮಂಗಳವಾರ ನಡೆದ ವಚನ ಭಜನಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ಅಪ್ಪ ಬಸವಣ್ಣ ಅಂದು ಜಾತಿ, ಮತ ಪಂತಗಳ ಅಸಮಾನತೆ ಹೋಗಲಾಡಿಸಲು ಹೋರಾಡಿದ ಮಾಹನ ಮನವತಾವಾದಿ, ಪ್ರಜಾಪ್ರಭುತ್ವದ ಹರಿಕಾರ ಅವರು ಮಾನವಿಯ ಮೌಲ್ಯಗಳನ್ನು ಎತ್ತಿ ಹಿಡಿದು ಮಹಿಳಾ ಸ್ವಾತಂತ್ರ್ಯ ನೀಡಿದ ಸಮಾಜೋದ್ದಾರಕ ಅಂತಹ ಶರಣರ ವಚನಗಳನ್ನ ಇಂದಿನ ಯುವ ಪಿಳಿಗೆಗೆ ಮುಟ್ಟಿಸಲು ವಚನ ಭಜನಾ ಸ್ಪರ್ಧೆಯನ್ನು ವಾಲ್ಮೀಕಿ ಭಜನಾ ತಂಡ ನಡೆಸುತ್ತಿರುವದು ಶ್ಲಾಘನೀಯ ಎಂದರು.
ಯುವ ಮುಖಂಡ ಯುವರಾಜ ಜಾಧವ, ಮಾರಿಹಾಳ ಗ್ರಾಪಂ ಅಧ್ಯಕ್ಷೆ ಗಿರಿಜಾ ಪಾಟೀಲ ಮಾತನಾಡಿ, ಸಂಸ್ಕೃತಿಗಳನ್ನೆ ಮರೆತು ನರ ಮಾನವರ ಬಲಿ ಪಡೆಯುತಿದ್ದ ವಾಲ್ಮೀಕಿ, ಗುರುವಿನ ಅನುಗ್ರಹದಿಂದ ಜೀವನದಲ್ಲಿ ಪರಿವರ್ತೆನೆಗೊಂಡು ಹಿಂದೂ ಮಹಾನ ಗ್ರಂಥ ರಾಮಯಣ ಬರೆದು ಮಹರ್ಷಿ ಆದರು.
ಅವರು ನಡೆದ ಬಂದ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಾಗಿದೆ, ಶಾಂತಿ ಸಹಬಾಳ್ವೆಯ ಜೀವನಕ್ಕಾಗಿ ಭಜನೆ ಕಿರ್ತನೆ, ಪುರಾಣಗಳ ಪಠಣ ಮತ್ತು ಶ್ರವಣ ಮಾಡಿದಾಗ ಮಾನವನ ಬದುಕು ಸಾರ್ಥಕವಾಗುತ್ತೆದೆ ಎಂದರು.
ವಚನ ಭಜನಾ ಸ್ಪರ್ಧೆಯಲ್ಲಿ ವಿವಿಧ ಸ್ಥಳಗಳಿಂದ 24ಭಜನಾ ತಂಡ ಭಾಗವಹಿಸಿದ್ದವು. ಅಂತಿಮವಾಗಿ ತಿಗಡಿ ಬಸವೇಶ್ವರ ಭಜನಾ ಸಂಘ ಪ್ರಥಮ
ದ್ವಿತೀಯ ಬಹುಮಾನ ಕಲ್ಮೇಶ್ವರ ಭಜನಾ ಸಂಘ ಯರಗುದ್ದಿ, ತೃತೀಯ ಶಿವಬಸವ ಭಜನಾ ಸಂಘ ಸಿಂಧೊಳ್ಳಿ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ವೇದಮೂರ್ತಿ ಅಡವಯ್ಯ ಅಲ್ಲಯ್ಯನವರಮಠ, ಗುಡದಮ್ಮ ದೇವಸ್ಥಾನದ ಟ್ರಸ್ಟ ಅಧ್ಯಕ್ಷ. ರಾಮಪ್ಪ ಹನ್ನೂರ, ಹೊನ್ನಪ್ಪ ತಿಳ್ಳಿ, ನಾಗೇಶ ದಳವಾಯಿ, ಕಲ್ಲಪ್ಪ ಹಳ್ಳಿ, ಗುಡದಪ್ಪ ಗೊರವ, ಬಸವರಾಜ ಕುಳ್ಳನ್ನವರ, ಬಸವಣೆಪ್ಪ ಬಾಲನಾಯಕ, ಕುಶಪ್ಪ ಗೊರವ, ಬಸವರಾಜ ಕುಳ್ಳನ್ನವರ, ಬಸವಣೆಪ್ಪ ಬಾಲನಾಯಕ, ಲಗಮ್ಮಪ್ಪ ತಳವಾರ, ಬಸವರಾಜ ಗೊರವ, ಸುರೇಶ ಹನ್ನೂರ,ಕುಶಪ್ಪ ಗೊರವ ಸೇರಿದಂತೆ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು.