ಸಚಿವ ಸತೀಶ್ ಜಾರಕಿಹೊಳಿ ರಾಜ್ಯದ ಸಿಎಂ ಆಗಲೆಂದು ಹಾರೈಸಿದ ಬಸವ ಪ್ರಕಾಶ ಸ್ವಾಮೀಜಿ

Ravi Talawar
ಸಚಿವ ಸತೀಶ್ ಜಾರಕಿಹೊಳಿ ರಾಜ್ಯದ ಸಿಎಂ ಆಗಲೆಂದು ಹಾರೈಸಿದ ಬಸವ ಪ್ರಕಾಶ ಸ್ವಾಮೀಜಿ
WhatsApp Group Join Now
Telegram Group Join Now

ಗೋಕಾಕ: ಐತಿಹಾಸಿಕ ಕ್ಷೇತ್ರ ಬಸವಕಲ್ಯಾಣದಲ್ಲಿ ಅಕ್ಟೋಬರ್  10 ರಿಂದ ಮೂರು ದಿನಗಳ ಕಾಲ ನಡೆಯಲಿರುವ 24ನೇ ಕಲ್ಯಾಣ ಪರ್ವ ಉತ್ಸವದ ಬೃಹತ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ಕೂಡಲ ಸಂಗಮ ಧರ್ಮ ಪೀಠದ ಶ್ರೀ ಬಸವ ಪ್ರಕಾಶ ಸ್ವಾಮೀಜಿ ನೇತೃತ್ವದಲ್ಲಿ ಲಿಂಗಾಯತ ಸಮಾಜದ ಮುಖಂಡರು ಆಹ್ವಾನಿಸಿದರು.

ನಗರದ ಹಿಲ್‌ ಗಾರ್ಡನ್‌ ಕಚೇರಿಯಲ್ಲಿ ಬಸವ ಧರ್ಮ ಪೀಠ, ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾ ಸಭೆ, ಬಸವ ಪರ ಸಂಘಟನೆಗ ಮುಖಂಡರು ಬಸವಕಲ್ಯಾಣದಲ್ಲಿ ಅ. 10 ರಿಂದ ಮೂರು ದಿನಗಳ ಕಾಲ ನಡೆಯಲಿರುವ 24ನೇ ಕಲ್ಯಾಣ ಪರ್ವ ಉತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಬೇಕೆಂದು ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ಕೋರಿದರು.

ಇನ್ನು ಇದೇ ವೇಳೆ ಮಾತನಾಡಿದ ಕೂಡಲ ಸಂಗಮ ಧರ್ಮ ಪೀಠದ ಶ್ರೀ ಬಸವ ಪ್ರಕಾಶ ಸ್ವಾಮೀಜಿ, ಬಸವಕಲ್ಯಾಣ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ 108 ಅಡಿ ಗುರು ಬಸವಣ್ಣವರ ಭವ್ಯ ಮೂರ್ತಿಯನ್ನು ನೋಡಲು ಲೋಕೋಪಯೋಗಿ ಇಲಾಖೆ ವತಿಯಿಂದ 40 ಅಡಿ ಸೇತುವೆ, 3 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿ ಅನುಕೂಲ ಕಲ್ಪಿಸಿದ್ದಾರೆ. ಆದಕಾರಣ ಸಚಿವ ಸತೀಶ್ ಜಾರಕಿಹೊಳಿ ಅವರು ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗಲೆಂದು ಹಾರೈಸಿದರು.

ಇದೇ ವೇಳೆ ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ಕೂಡಲ ಸಂಗಮ ಧರ್ಮ ಪೀಠದ ಶ್ರೀ ಬಸವ ಪ್ರಕಾಶ ಸ್ವಾಮೀಜಿ ನೇತೃತ್ವದಲ್ಲಿ ಬಸವ ಧರ್ಮ ಪೀಠ, ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾ ಸಭೆ, ಬಸವ ಪರ ಸಂಘಟನೆಗಳ ಮುಖಂಡರು ಸತ್ಕರಿಸಿದರು.

WhatsApp Group Join Now
Telegram Group Join Now
Share This Article