ಘಟಪ್ರಭಾ: ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಮಾನವ ಬಂದುತ್ವ ವೇದಿಕೆ ಸಂಯುಕ್ತ ಆಶ್ರಯದಲ್ಲಿ ನಾಗರ ಪಂಚಮಿ ನಿಮಿತ್ತ ಘಟಪ್ರಭಾ ಕೆ.ಎಚ್.ಆಯ್ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಾಲು ಹಣ್ಣು ನೀಡುವ ಮೂಲಕ ಬಸವ ಪಂಚಮಿಯನ್ನು ಆಚರಣೆಯನ್ನು ಮಂಗಳವಾರ ದಂದು ಮಾಡಲಾಯಿತು.
ಈ ಸಂಧರ್ಭದಲ್ಲಿ ನೂರಾರು ಪ್ರಗತಿಪರರು ಸೇರಿ ಬಡ ರೋಗಿಗಳಿಗೆ ಹಾಲು ಹಣ್ಣು ವಿತರಣೆ ಮಾಡುವ ಮೂಲಕ ಬಸವ ಪಂಚಮಿ ಆಚರಣೆ ಮಾಡಿದರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗುಬ್ಬಲಗುಡ್ಡ ಮಠದ ಶ್ರೀ ಮಲ್ಲಿಕಾರ್ಜುನ ಮಹಾ ಸ್ವಾಮಿಗಳು ಮಾತನಾಡಿ ಬಸವಾದಿ ಶರಣರ ವಚನವಾದ ಕಲ್ಲು ನಾಗರ ಕಂಡರೆ ಹಾಲೆರೆಯುವರಯ್ಯಾ ನಿಜ ನಾಗರ ಕಂಡರೆ ಕೊಲ್ಲೆಂಬರಯ್ಯಾ ಎಂಬ ನಾನ್ನೂಡಿಯಂತೆ ಕಲ್ಲು ನಾಗರಕ್ಕೆ ಹಾಲೆರೆಯುವುದಕ್ಕಿಂತ ಇವತ್ತು ಬಡ ರೋಗಿಗಳಿಗೆ ಹಾಲು ವಿತರಣೆ ಕಾರ್ಯಕ್ರಮ ನಿಜವಾಗಿಯೂ ಶ್ಲಾಘನೀಯ. ನಿಮ್ಮ ಕಾರ್ಯ ಹೀಗೆಯೆ ಬಸವಣ್ಣನವರ ಹಾಕಿಕೊಟ್ಟ ಮಾರ್ಗದಲ್ಲಿ ಯುವಕರು ಸಾಗಬೇಕು ಎಂದು ಹೇಳಿದರು.
ಮಾನವ ಬಂದುತ್ವ ವೇದಿಕೆಯ ಕಾಡೇಶ ತಳಗೇರಿ ಮಾತನಾಡಿ ಲಿಂಗಾಯತ ಧರ್ಮ ಶ್ರೇಷ್ಠ ಧರ್ಮ ಜಾತ್ಯಾತೀತ ಧರ್ಮದ ಇದರ ಗುರುಗಳಾದ ಅಣ್ಣ ಬಸವಣ್ಣನವರು ಹೇಳಿದಂತೆ ನಮ್ಮಲ್ಲಿ ನಂಬಿಕೆ ಇರಬೇಕು ಮೂಢನಂಬಿಕೆ ಇರಬಾರದು ಬಸವಣ್ಣನವರ ವಚನಗಳು ಇಂದಿಗೂ ಪ್ರಸ್ತುತ ಇವರು ಹಾಕಿಕೊಟ್ಟ ಮಾರ್ಗದಲ್ಲಿ ಮಾನವ ಬಂದುತ್ವ ವೇದಿಕೆಯ ಸಂಸ್ಥಾಪಕರಾದ ಶ್ರೀ ಸತೀಶ್ ಜಾರಕಿಹೊಳಿಯವರು ಮೂಢನಂಬಿಕೆ ವಿರುದ್ಧ ಹಮ್ಮಿಕೊಂಡ ಅಪೌಷ್ಟಿಕತೆ ಹೊಂದಿರುವ ರೋಗಿಗಳಿಗೆ ಬಡ ಮಕ್ಕಳಿಗೆ ಹಾಲು ಹಣ್ಣು ಹಂಚುವ ಕಾರ್ಯಕ್ರಮ ರಾಜ್ಯಾದ್ಯಂತ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಹೊಸಮಠದ ವಿರೂಪಾಕ್ಷ ಮಹಾ ಸ್ವಾಮಿಗಳು, ಮಾರುತಿ ವಿಜಯನಗರ, ರಾಮಣ್ಣಾ ಹುಕ್ಕೇರಿ, ಪುಟ್ಟು ಖಾನಾಪೂರೆ, ಸುಧೀರ ಜೊಡಟ್ಟಿ, ಶ್ರೀಕಾಂತ್ ತಳವಾರ, ಗಣುಸಿಂಗ ರಜಪೂತ, ಪ್ರಕಾಶ ಡಾಂಗೆ, ಮುತ್ತಣ್ಣಾ ಹತ್ತರವಾಟ, ಅರ್ಜುನ ವಿನಾಯಕ ಕಟ್ಟಿಕಾರ, ಗಂಡವಗೋಳ, ರಮೇಶ್ ತುಕ್ಕಾನಟ್ಟಿ, ಸಲೀಮ ಕಬ್ಬೂರ, ಅಪ್ಪಾಸಾಬ ಮುಲ್ಲಾ, ಮಲ್ಲಿಕಾರ್ಜುನ ಪತ್ತಾರ, ಬಿ.ಎನ್.ಸಿಂದೆ, ಕಲ್ಲೊಳೆಪ್ಪಾ ಗಾಡಿವಡ್ಡರ, ಶೆಟ್ಟೆಪ್ಪಾ ಗಾಡಿವಡ್ಡರ, ರಾಜು ವಗ್ಬೆಳಮರಡಿ, ರಾಜು ದೊಡಮನಿ, ಸುನೀಲ್ ಕೊಟಬಾಗಿ, ವಿನೋದ ಮೇತ್ರಿ, ಶಂಕರ ಕಂಬಾರ, ಪ್ರವೀಣ್ ತುಕ್ಕಾನಟ್ಟಿ, ಕೆಂಪಯ್ಯಾ ಪುರಾಣಿP, ಗಜಪ್ಪಾ ಗಾಡಿವಡ್ಡರ, ಶಾನೂರ ಹತ್ತಿವಾಲೆ, ರಾಜು ಮುತ್ತೆಣ್ಣವರ, ಸುನೀಲ್ ಬೆಳಮರಡಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು. ಕಾರ್ಯಕ್ರಮವನ್ನು ರೆಹಮಾನ್ ಮೊಕಾಶಿ ರವಿ ನಾವಿ ಮಾನವ ಬಂದುತ್ವ ವೇದಿಕೆಯ ಶಿವಲಿಂಗ ಕೊಟಬಾಗಿ ಆಯೋಜಿಸಿದ್ದರು.