ನೇಸರಗಿ. ವಿಶ್ವ ಗುರು ಅಣ್ಣ ಬಸವಣ್ಣ ಅವರ ಜಯಂತಿ ಪ್ರಯುಕ್ತ ನೇಸರಗಿ ಗ್ರಾಮದಲ್ಲಿ ಬೃಹತ್ ಬೈಕ್ ರ್ಯಾಲಿ ಏರ್ಪಡಿಸಲಾಗಿತ್ತು. ಬೆಳಿಗ್ಗೆ 10 ಘಂಟೆಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಹೊರಟ ಭವ್ಯ ಬೈಕ್ ಹಾಗೂ ಟ್ರ್ಯಾಕ್ಟರ್ ರ್ಯಾಲಿ ಅತೀ ಅದ್ದೂರಿಯಿಂದ ಬಜಾರ ಪೇಟೆ, ಕರ್ನಾಟಕ ಚೌಕ, ಬಸ್ ಸ್ಟ್ಯಾಂಡ, ಎ ಪಿ ಎಮ್ ಸಿ ಮುಖಾಂತರ ಶ್ರೀ ಚನ್ನವೃಷಬೇಂದ್ರ ದೇವರಕೊಂಡ ಅಜ್ಜನವರ ದೇವಸ್ಥಾನದಲ್ಲಿ ಶ್ರೀ ವಿಶ್ವಗುರು ಅಣ್ಣ ಬಸವಣ್ಣ ಅವರ ಜಯಂತಿಯನ್ನು ಎಲ್ಲ ಸಮಾಜದ ಮುಖಂಡರ, ರೈತಾಪಿ ಜನರ ಸಮ್ಮುಖದಲ್ಲಿ ಆಚರಿಸಲಾಯಿತ್ತು. ಈ ಸಂದರ್ಭದಲ್ಲಿ ಗ್ರಾಮದ ಸರ್ವ ಜನಾಂಗದ ಮುಖಂಡರು, ಗ್ರಾಮ ಪಂಚಾಯತ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.