ಬೆಳಗಾವಿ: ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ೮೯೨ ನೆಯ ಜಯಂತಿಯ ನಿಮಿತ್ತವಾಗಿ ವಿಶ್ವಶಾಂತಿಗಾಗಿ ಬೆಳಗಾವಿ ನಗರದಲ್ಲಿ ಮೇ 4(ಇಂದು)ಭವ್ಯ ಮರವಣಿಗೆಯನ್ನು ಆಯೋಜಿಸಲಾಗಿದೆ. ಸಂಜೆ ೪-೦೦ ಗಂಟೆಗೆ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಿಂದ ಪ್ರಾರಂಭವಾಗಿ ಶನಿವಾರಖೂಟ, ಗಣಪತಿಗಲ್ಲಿ, ಮಾರುತಿ ಬೀದಿ,ರಾಮದೇವಗಲ್ಲಿ,ಸಮಾದೇವಿಗಲ್ಲಿ ಕಾಲೇಜ್ ರಸ್ತೆಯ ಮೂಲಕ ಲಿಂಗರಾಜ ಮಹಾವಿದ್ಯಾಲಯ ಆವರಣದಲ್ಲಿ ಮಹಾಪ್ರಸಾದದೊಂಡಿಗೆ ಮುಕ್ತಾಯವಾಗಲಿದೆ. ಈ ಮೆರವಣಿಗೆಯಲ್ಲಿ ವಿವಿಧ ಮಠಾಧೀಶರು,ಜನಪ್ರತಿನಿಧಿಗಳು,ನ್ಯಾಯವಾದಿಗಳು,ವ್ಯಾಪಾರಿ ಬಂಧುಗಳು ಸಾರ್ವಜನಿಕರು ವಿವಿಧ ಜಿಲ್ಲೆಗಳಿಂದ ಬರುತ್ತಿರುವ ಬಸವಾಭಿಮಾನಿಗಳು ಕುಟುಂಬಸಮೇತರಾಗಿ ಭಾಗವಹಿಸಲಿದ್ದಾರೆ.
ಕಾರಣ ಸರ್ವರೂ ಈ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿರಿ, ಅಭೂತಪೂರ್ವ ಮೆರಬಣಿಗೆಯ ಮಾಡೋಣ ಬೆಳಗಾವಿಯಲ್ಲಿ ಜಾತಿ ಧರ್ಮ, ಪರಿತಗಳನ್ನು ಒದಗಿಟ್ಟು ಸರ್ವ ಜಾತಿ,ಧರ್ಮಗಳ ಸಮಾಜ ಬಾಂಧವರು ಭಾಗವಹಿಸುತ್ತಿದ್ದಾರೆ. ನೀವು ಬನ್ನಿ ನಿಮ್ಮವರನ್ನು ಕರೆತನ್ನಿ ಎಂದು ಬಸವಜಯಂತಿ ಉತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.