ಬಳ್ಳಾರಿ :03. ಬಸವಣ್ಣನವರ ವಚನಗಳು ಮತ್ತು ಶರಣ ಸಂಸ್ಕೃತಿಯನ್ನು ಮನೆಮನೆಗೆ ಕೊಂಡೊಯ್ಯಲು ಸೆ.1ರಿಂದ ಸೆ.31ರವರೆಗೆ 30 ದಿನಗಳ ಕಾಲ ರಾಜ್ಯದಲ್ಲಿ ಬಸವ ಸಂಸ್ಕೃತಿ ಅಭಿಯಾನ, ಒಂದು ರಥೋತ್ಸವ ಮೆರವಣಿಗೆ ಬಸವಕಲ್ಯಾಣದಿಂದ ಬೆಂಗಳೂರುವರೆಗೆ ನಡೆಯಲಿದೆ, ಭಾರತ ಇದೆ ಸೆಪ್ಟಂಬರ್.6ರಂದು ಆದೋನಿ ಮಾರ್ಗವಾಗಿ ಬಳ್ಳಾರಿಗೆ ಆಗಮಿಸಲಿದೆ ಎಂದು ಎಸ್.ಪನ್ನರಾಜ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು. ಶರಣ ಸಂಸ್ಕೃತಿಯನ್ನು ಜಾಗತಿಕಗೊಳಿಸಲು ಬಸವಣ್ಣನವರ ಹುಟ್ಟೂರಾದ ಬಸವನಬಾಗೇವಾಡಿಯಿಂದ ಬಸವ ಸಂಸ್ಕೃತಿ ಅಭಿಯಾನವನ್ನು ಆರಂಭಿಸಲಾಗುತ್ತದೆ. ಸೆಪ್ಟೆಂಬರ್ 6 ರಂದು ಬಳ್ಳಾರಿಯ ಸಂಗನಕಲ್ಲು ರಸ್ತೆಯ ಕೆಆರ್‌ಎಸ್ ಕಲ್ಯಾಣ ಮಂಟಪದ ಹತ್ತಿರ ರಥಯಾತ್ರೆಯನ್ನು ಆಹ್ವಾನಿಸಲಾಗುವುದು, ಅಲ್ಲಿಂದ ನೂರಾರು ಬೈಕ್‌ಗಳೊಂದಿಗೆ ರ್ಯಾಲಿಯ ಮೂಲಕ ನಗರದ ಅಧಿದೇವತೆ ದುರ್ಗಮ್ಮ ದೇವಸ್ಥಾನ. ರಾಯಲ್ ಸರ್ಕಲ್, ಮೋತಿ ಸರ್ಕಲ್‌ಗೆ ಆಗಮಿಸಿ ಅಲ್ಲಿ ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆಯನ್ನು ಮಾಡಲಾಗುವುದು ಎಂದರು. ನಂತರ ವಾಲ್ಮೀಕಿ ವೃತ್ತಕ್ಕೆ ತೆರಳಿ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆಯನ್ನು ನೆರವೇರಿಸಿ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯಲ್ಲಿ ಹಮ್ಮಿಕೊಂಡಿರುವ ವೇದಿಕೆ ಕಾರ್ಯಕ್ರಮಕ್ಕೆ ರಥೋತ್ಸವವನ್ನು ಕೊಂಡೊಯ್ದು, ನಂತರ ವೇದಿಕೆ ಕಾರ್ಯಕ್ರಮ ನಡೆಸಲಾಗುವುದು ಎಂದು ಅವರು ವಿವರಿಸಿದರು.
ಸಂಜೆ ದುರ್ಗಮ್ಮ ದೇವಸ್ಥಾನದಿಂದ ಹೊರಟ ರಥೋತ್ಸವ ಮೆರವಣಿಗೆ ಬಸವಭವನ ತಲುಪುವುದು ಅಲ್ಲಿ ಶರಣರ ಸಾಹಿತ್ಯ ವಚನ ಮತ್ತು ಸಂಸ್ಕೃತಿಯ ಬಗ್ಗೆ ಶರಣರ ನುಡಿಯೇ ಗತಿ ಸೋಪಾನ ವಿಷಯವಾಗಿ ಮಹಾಂತ ಪ್ರಭು ಸ್ವಾಮಿಗಳು, ಶರಣ ಧರ್ಮದ ನಿಜಾಚರಣೆಗಳು ವಿಷಯದ ಕುರಿತು ಪ್ರೇಮಕ್ಕ ಅಂಗಡಿ ಭೈಲಹೊಂಗಲ ಇವರು ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ. ಸಾಣೆಹಳ್ಳಿಯ ಶಿವಸಂಚಾರ ತಂಡದಿಂದ ಜಂಗಮದೊಳಗೆ ನಾಟಕ ಪ್ರದರ್ಶನ ಇರಲಿದೆ ಎಂದರು.