ಈ ಬಾರಿ ಕರಾಳ ದಿನಾಚರಣೆಗೆ ಅವಕಾಶ ಇಲ್ಲ: ಜಿಲ್ಲಾಧಿಕಾರಿ ಖಡಕ್ ಆದೇಶ

Ravi Talawar
ಈ ಬಾರಿ ಕರಾಳ ದಿನಾಚರಣೆಗೆ ಅವಕಾಶ ಇಲ್ಲ: ಜಿಲ್ಲಾಧಿಕಾರಿ ಖಡಕ್ ಆದೇಶ
WhatsApp Group Join Now
Telegram Group Join Now

ಬೆಳಗಾವಿ, ಅಕ್ಟೋಬರ್ 08: ಬಾರಿ ಕರಾಳ ದಿನಾಚರಣೆಗೆ ಅವಕಾಶ ಇಲ್ಲ ಎಂದು ಡಿಸಿ ಮೊಹಮ್ಮದ್ ರೋಷನ್ ಕಡಕ್ ಆದೇಶ ಹೊರಡಿಸಿದ್ದಾರೆ.

ರಾಜ್ಯೋತ್ಸವದ ಸಂದರ್ಭದಲ್ಲಿ ಆಗಮಿಸುವ ಮಹಿಳೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಿ ಅವರಿಗಾಗಿಯೇ ಮೀಸಲಿಡುವುದು. ಐದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇರುವುದರಿಂದ ಹೆಲಿಕಾಪ್ಟರ್ ಮೂಲಕ ಪುಷ್ಪ ವೃಷ್ಟಿ ಮಾಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.

ಕನ್ನಡ ಪರ ಸಂಘಟನೆಗಳ ಕ್ರಿಯಾಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಶಿಫಾರಸ್ಸು ಮಾಡಲು ಒಮ್ಮತದ ನಿರ್ಧರಿಸಲಾಗಿದೆ.

ಅತ್ಯುತ್ತಮ ಕಲಾರೂಪಕಗಳಿಗೆ ಪ್ರಥಮ, ದ್ವಿತೀಯ, ತೃತೀಯ ಮತ್ತು ಸಮಾಧಾನಕರ ಬಹುಮಾನ ನೀಡಲು ನಿರ್ಧಾರ, ಕನ್ನಡ ಹೋರಾಟಗಾರರು ಮತ್ತು ಮಾಧ್ಯಮದ ತಲಾ ಐದು ಸಾಧಕರನ್ನು ಗುರುತಿಸಿ ಸತ್ಕರಿಸಲು ಸಿಇಓ ಜಿಲ್ಲಾ ಪಂಚಾಯತ ಅವರ ಅಧ್ಯಕ್ಷತೆಯಲ್ಲಿ ಉಪಸಮಿತಿ ಪುನರ್ ರಚಿಸಲು ತೀರ್ಮಾನಿಸಲಾಗಿದೆ. ಅಂದು ರಾತ್ರಿ 11 ಗಂಟೆಯವರೆಗೂ ಮೆರವಣಿಗೆಗೆ ನಿರ್ಧಾರ ತೆಗೆದುಕೊಳ್ಳುಲಾಗಿದೆ.

ಸಾಧಕರ ಸತ್ಕಾರ ಸಂದರ್ಭದಲ್ಲಿ ಕೇವಲ ಪ್ರಮಾಣ ಪತ್ರ ನೀಡಲಾಗುತ್ತಿದೆ ಅದರ ಬದಲಿಗೆ ಪ್ರಮಾಣ ಪತ್ರದ ಫೋಟೋ ಫ್ರೇಮ್ ಹಾಗೂ ಬೆಳ್ಳಿಯ ಫಲಕ ನೀಡಲು ಮನವಿ ಮಾಡಲಾಗಿದೆ.

ದೀಪಾವಳಿ ರಾಜ್ಯೋತ್ಸವ ಒಂದೇ ದಿನ ಇರುವುದರಿಂದ ಭವ್ಯ ಮೆರವಣಿಗೆಗೆ 3ನೇ ತಾರೀಖು ಮೆರವಣಿಗೆ‌ ಮಾಡಲು ಮನವಿ ಹಾಗೂ ಅದರಂತೆ ಪೋಲಿಸ್ ಇಲಾಖೆಯ ಒಪ್ಪಿಗೆಯಂತೆ ಡಿಸಿ ನಿರ್ಧಾರ ತೆಗೆದುಕೊಂಡಿದ್ದಾರೆ.

WhatsApp Group Join Now
Telegram Group Join Now
Share This Article