ನೇಸರಗಿ: ಶ್ರೀ ಕೃಷ್ಣ ಪಾರಿಜಾತ ಕಲಾ ಪ್ರದರ್ಶನ ತನ್ನ ಬಾಲ್ಯದ ಅವಧಿಯಲ್ಲಿ ರೂಡಸಿಕೊಂಡು ಜಿಲ್ಲೆಯ ಜಾತ್ರೆಗಳಲ್ಲಿ ಶ್ರೀಕೃಷ್ಣ ಪಾರಿಜಾತ ಕಲೆ ತೋರಿಸಿದ ಹೆಮ್ಮೆ ಬರಮಣ್ಣ ಸತ್ತೇನ್ನವರ ಅವರಿಗೆ ಸಲ್ಲುತ್ತದೆ ಎಂದು ಸೋಮೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಶಕರು, ಪಿಕೆಪಿಎಸ್ ಅಧ್ಯಕ್ಷರಾದ ಆರ್ ಎಮ ಯತ್ತಿನಮನಿ ಹೇಳಿದರು.
ಅವರು ಮಂಗಳವಾರದಂದು ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಇತೀಚೆಗೆ ರಾಜ್ಯ ಮಟ್ಟದ ಬಯಲಾಟ್ ಅಕೆಡಿಮೆ ಪ್ರಶಸ್ತಿ ಪಡೆದ ಪ್ರಯುಕ್ತ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಯುವ ಮುಖಂಡ ಸಚಿನ ಪಾಟೀಲ ಮಾತನಾಡಿ ಬೆಳಗಾವಿ ಜಿಲ್ಲೆಯಲ್ಲಿ ಶ್ರೀ ಕೃಷ್ಣ ಪಾರಿಜಾತ ಜನರಿಗೆ ಪರಿಚಯ ಮಾಡಿದ ವ್ಯಕ್ತಿ, ತನ್ನ ಸ್ವಂತ ಖರ್ಚಿನಿಂದ ಜನರಿಗೆ ಸವಿರುಚಿ ತೋರಿಸಿದ್ದರು ಎಂದರು.
ಹಿರಿಯರಾದ ಎಮ್ ವಾಯ ಸೋಮಣ್ಣವರ ಮಾತನಾಡಿ ಬರಮಣ್ಣ ಒಬ್ಬ ಹುಟ್ಟು ಪಾರಿಜಾತ ಕಲಾವಿದ ಅವರಿಗೆ ಪ್ರಶಸ್ತಿ ದೊರಕಿರುವದು ನಮ್ಮ ಹೆಮ್ಮೆ ಎಂದರು.
ಈ ಸಂದರ್ಭದಲ್ಲಿ ಅಡಿವಪ್ಪ ಮಾಳಣ್ಣವರ ಎಸ್ ವಿ ಸೋಮಣ್ಣವರ, ಬಾಳಪ್ಪ ಮಾಳಗಿ, ಬಸನಗೌಡ ಚಿಕ್ಕನಗೌಡ್ರ, ಮಲ್ಲಪ್ಪ ಮಾಳಣ್ಣವರ, ಜಗದೀಶ ಗೆಜ್ಜಿ, ಸೋಮನಗೌಡ ಪಾಟೀಲ, ಗುರು ತುಬಚಿ, ನಿಂಗಪ್ಪ ತಳವಾರ ಸೇರಿದಂತೆ ಎಲ್ಲ ಸಮಾಜದ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.