ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿ ; ಸೂಕ್ತ ಕ್ರಮಕ್ಕೆ ಬಾಪೂಜಿನಗರ್ ವೆಂಕಟೇಶ್ ಒತ್ತಾಯ 

Sandeep Malannavar
ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿ ; ಸೂಕ್ತ ಕ್ರಮಕ್ಕೆ ಬಾಪೂಜಿನಗರ್ ವೆಂಕಟೇಶ್ ಒತ್ತಾಯ 
WhatsApp Group Join Now
Telegram Group Join Now
ಬಳ್ಳಾರಿ,ಜ.14.: ಸ್ಥಳೀಯ ಬಾಪೂಜಿ ನಗರ ಸರ್ಕಲ್‌ನಿಂದ  ಪಾತ್ರ ಬೂದಿಹಾಳ್ ರಸ್ತೆಯ ಬ್ರಿಡ್ಜ್‌ ವರೆಗೆ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿ ಕಳಪೆ ಗುಣಮಟ್ಟದ ಕೆಲಸ ನಡೆಯುತ್ತಿದೆ ಅಧಿಕಾರಗಳು ಕೂಡಲೇ ಗಮನಹರಿಸಿ ಸೂಕ್ತ ಕ್ರಮ ಕೈಗೊಂಡು ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳುವಂತೆ ನಿರ್ದೇಶಿಸಬೇಕೆಂದು ಮಾಜಿನಗರ ಸಭಾ ಸದಸ್ಯರ ಪುತ್ರ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡ ಬಾಪೂಜಿ ನಗರ ವೆಂಕಟೇಶ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
2020 ಫೆ.24 ರಂದು ಆರಂಭವಾದ ಈ ಕಾಮಗಾರಿಗೆ ಹಲವು ವರ್ಷಗಳಾದರೂ ಇನ್ನೂ ಪೂರ್ಣಗೊಳ್ಳದೆ ಅರ್ಧದಲ್ಲೇ ನಿಂತಿದ್ದು, ತೆರೆದ ಚರಂಡಿ ಹಾಗೂ ಅಪೂರ್ಣ ರಸ್ತೆ ಕೆಲಸದಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ ಎಂದು ಬಾಪೂಜಿ ನಗರದಿಂದ ಆಂದ್ರಾಳ್ ಬ್ರಿಡ್ಜ್ ರಸ್ತೆ ಕಾಮಗಾಲಿಯಲ್ಲಿ ನಡೆಯುತ್ತಿರುವ ಕಳಪೆ ಕೆಲಸದ ಬಗ್ಗೆ ಪಿಡಬ್ಲ್ಯೂಡಿ ಇಲಾಖೆಗೆ ಹಲವು ಬಾರಿ ಮೌಖಿಕವಾಗಿ ದೂರು ಸಲ್ಲಿಸಿದ್ದರೂ ಯಾವುದೇ ರೀತಿಯ ಸ್ಪಂದನೆ ಅಥವಾ ಕ್ರಮ ಕೈಗೊಳ್ಳಲಾಗಿಲ್ಲ ಎಂದು, ಸಾರ್ವಜನಿಕರ ಸುರಕ್ಷತೆಯನ್ನು ನಿರ್ಲಕ್ಷ್ಯಮಾಡುತ್ತಿರುವ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಎಂದು  ಕಾಂಗ್ರೆಸ್  ಮುಖಂಡ ಬಾಪೂಜಿ ನಗರ ವೆಂಕಟೇಶ್, ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆಯ ಎಡ-ಬಲ ಭಾಗಗಳಲ್ಲಿ ಮಣ್ಣು ಮತ್ತು ಕಲ್ಲು ಬಿಂಚುಗಳನ್ನು ಹಾಕಿ ನಿಧಾನಗತಿಯಲ್ಲಿ ಕಾಮಗಾರಿಯನ್ನುನಡೆಸಲಾಗುತ್ತಿದ್ದು. ಇದರಿಂದ ವಾಹನ ಸಂಚಾರಕ್ಕೆ  ಅಡಚಣೆ ಯಾಗುತ್ತಿದೆ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಪ್ರತಿದಿನ ಈ ರಸ್ತೆಯಲ್ಲಿ ಸಂಚರಿಸಲು ಹರಸಾಹದ ಪಡಬೇಕಿದೆ ದ್ವಿಚಕ್ರ ವಾಹನಗಳು ರಸ್ತೆಯಲ್ಲಿ ಸಾಗುವಾಗ ಜಲ್ಲಿಕಲ್ಲು ಸ್ಕಿಡ್ ಆಗಿ ಹಲವಾರು ಅಪಘಾತಗಳು ನಡೆದಿದೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು ಮತ್ತು ಆದಷ್ಟು ಶೀಘ್ರದಲ್ಲಿ ರಸ್ತೆ ಕಾಮಗಾರಿಯನ್ನು ಮುಗಿಸಲು ಗುತ್ತಿಗೆದಾರರಿಗೆ ಸೂಚಿಸಬೇಕೆಂದು ಒತ್ತಾಯಿಸಿದರು.
WhatsApp Group Join Now
Telegram Group Join Now
Share This Article