ಬಳ್ಳಾರಿ, ಜ.27: ವಾರದಲ್ಲಿ ಐದು ದಿನ ಕೆಲಸ ಎರಡು ದಿನ ರಜೆ ನೀಡಬೇಕೆಂದು ಆಗ್ರಹಿಸಿ ರಾಷ್ಟ್ರೀಕೃತ ಬ್ಯಾಂಕ್ ನೌಕರರು ಇಂದು ಮುಷ್ಕರ ನಡೆಸಿದರು.
ನಗರದ ಬೃಹತ್ ಪ್ರತಿಭಟನೆ ಮೂಲಕ ಎಸ್ ಬಿ ಐ ಬ್ಯಾಂಕ್ ಪ್ರಧಾನ ಕಚೇರಿ ಅವರಣಕ್ಕೆ ಬಂದ ನೌಕರರು ಕಳೆದ ಹತ್ತು ವರ್ಷದಿಂದ ತಮ್ಮ ಈ ಬೇಡಿಕೆ ಈಡೇರಿಸದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು. ಬೇಡಿಕೆ ಈಡೇರೋವರೆಗೂ ನಮ್ಮ ಹೋರಾಟ ನಿಲ್ಲೋದಿಲ್ಲ ಎಂದರು.
ಜೊತೆಗೆ ರಾಷ್ಟ್ರೀಕೃತ ಬ್ಯಾಂಕ್ ಗಳ ಖಾಸಗಿಕರಣ ಕೈ ಬಿಡಬೇಕು. ಹಗಲಿರುಳು ಎನ್ನದೇ ಕೇಂದ್ರ ಸರ್ಕಾರದ ಎಲ್ಲಾ ಯೋಜನೆ ಅನುಷ್ಠಾನ ಮಾಡ್ತೇವೆ ನಾವು. ಜನರ ಸೇವೆ ಒದಗಿಸೋದ್ರಲ್ಲಿ ನಾವು ಬ್ಯಾಂಕ್ ನವರು ಮೊದಲೇ ಸಾಲಿನಲ್ಲಿ ನಿಲ್ಲುತ್ತೇವೆ ನಮ್ಮ ನೌಕರರ ಕೆಲಸದ ಭದ್ರತೆಗೆ ಒತ್ತು ನೀಡಬೇಕು. ನಿರಂತರವಾಗಿ ಸೇವೆ ಮಾಡುವ ನಮ್ಮನ್ನು ಕಡೆಗಣಿಸುತ್ತಿರೋ ಹಿನ್ನೆಲೆ ಹೋರಾಟ ಅನಿವಾರ್ಯವಾಗಿದೆ ಎಂದರು.
ಪ್ರತಿಭಟನೆಯಲ್ಲಿ ಸಂಘಟನೆಯ ಮುಖ್ಯ ಸಚೇತಕರಾದ ಸೂರಜ್ ಆರ್.ಹೆಚ್. ಆರ್ ಘನ ಮಲ್ಲಿ ಮತ್ತು ಅಶೋಕ್, ಡಿ.ರಾಮಕೃಷ್ಣ, ಧರ್ಮೇಂದ್ರ, ರವಿ ಸರ್, ಪ್ರತಾಪ್, ಶಿವರಾಜ್, ಎಸ್ ಮಂಜುಳ, ಪ್ರವೀಣ್ ಕುಮಾರ್ , ಸಿಐಟಿಯು ನ ಮುಖಂಡ ಸತ್ಯಬಾಬು, ಗ್ರಾಮೀಣ ಬ್ಯಾಂಕ್ ನ ನೌಕರರ ಸಂಘದ ಮುಖಂಡರಾದ ಶರಣ ಗೌಡ ಪಾಟೀಲ್ , ಪ್ರದೀಪ, ಜನಾರ್ಧನ, ಕೆ ಈರಣ್ಣ, ವಿ ಟಿ ನಾಗೇಶ್, ನಿಸಾರ್ ಅಹಮ್ಮದ್ ಮೊದಲಾದವರು ಪಾಲ್ಗೊಂಡಿದ್ದರು.


