ದೆಹಲಿ, ಜೂ.8: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಸಂಜೆ 6 ಗಂಟೆಗೆ ಮೂರನೇ ಬಾರಿ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ದೇಶ ನಾಯಕರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ಈಗಾಗಲೇ ಬಾಂಗ್ಲಾದೇಶ ಪ್ರಧಾನಿ ಸೇರಿದಂತೆ ಅನೇಕರಿಗೆ ಪ್ರಮಾಣ ವಚನದ ಆಹ್ವಾನ ಹೋಗಿದೆ.
ಇದೀಗ ಬಾಂಗ್ಲಾದೇಶ ಪ್ರಧಾನಿ ಶೇಖಾ ಹಸೀನಾ ಅವರು ದೆಹಲಿ ಬಂದಿದ್ದಾರೆ ಎಂದು ಹೇಳಲಾಗಿದೆ. ಭಾರತದ ನೆರೆಯ ರಾಷ್ಟ್ರ ಬಾಂಗ್ಲಾ, ಅನೇಕ ವಿಚಾರಗಳಿಗೆ ಭಾರತ ಜತೆಗೆ ರಾಜತಾಂತ್ರಿಕ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದೆ.
ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಹಿಂದೆ ಚೀನಾದ ಮಾತು ಕೇಳಿ ಭಾರತದ ಜತೆಗೆ ಸಂಬಂಧವನ್ನು ಮುರಿದುಕೊಂಡಿತ್ತು.
ಇದರಿಂದ ಹೇಳಿಕೊಳ್ಳಲಾಗಷ್ಟು ನಷ್ಟವನ್ನು ಮಾಲ್ಡೀವ್ಸ್ ಅನುಭವಿಸಿತ್ತು. ಇದೀಗ ಇದನ್ನು ಸರಿಪಡಿಸಿಕೊಳ್ಳಲು ಪ್ರಯತ್ನವನ್ನು ಮಾಡುತ್ತಿದೆ. ಈ ಸಮಾರಂಭ ಮುನ್ನಡಿಯನ್ನು ಹಾಕಲಿದೆ ಎಂದು ಹೇಳಲಾಗಿದೆ. ಮಾಲ್ಡೀವ್ಸ್ ಅಧ್ಯಕ್ಷ ಆದ ನಂತರ ಮೊಹಮ್ಮದ್ ಮುಯಿಝು ಭಾರತದ ಮೊದಲು ಭೇಟಿಯಾಗಿದೆ.