ಬಲೂಚಿಸ್ತಾನ್: ಬಲೂಚಿಸ್ತಾನ್ ಬುಧವಾರ ಪಾಕಿಸ್ತಾನದಿಂದ ಸ್ವಾತಂತ್ರ್ಯ ಘೋಷಿಸಿಕೊಂಡಿದೆ. ಬಲೂಚಿಸ್ತಾನ್ ಪ್ರತಿನಿಧಿ ಮಿರ್ ಯಾರ್ ಬಲೂಚ್ ಬುಧವಾರ ಈ ಪ್ರಕಟಣೆ ಮಾಡಿದ್ದಾರೆ. ಈ ಪ್ರದೇಶದಲ್ಲಿ ದಶಕಗಳ ಹಿಂಸಾಚಾರ, ಬಲವಂತದ ಕಣ್ಮರೆಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಎಕ್ಸ್ ಹ್ಯಾಂಡಲ್ ಪೋಸ್ಟ್ನಲ್ಲಿ, ಬಲೂಚಿಸ್ತಾನ್ನ ಜನರು ತಮ್ಮ “ರಾಷ್ಟ್ರೀಯ ತೀರ್ಪು” ನೀಡಿದ್ದಾರೆ ಮತ್ತು ಜಗತ್ತು ಇನ್ನು ಮುಂದೆ ಮೌನವಾಗಿರಬಾರದು ಎಂದು ಅವರು ಇದೇ ವೇಳೆ ಮನವಿ ಮಾಡಿದ್ದಾರೆ.
‘‘ತುಮ್ ಮಾರೋಗೆ ಹಮ್ ನೆಕ್ಲೆಂಗಿ, ಹಮ್ ನಸಲ್ ಬಚಾನಿ ನೆಕ್ಲಿ ಹೈ, ಆವೋ ಹಮಾರಾ ಸಾಥ್ ದೋ’’ ಪಾಕಿಸ್ತಾನ ಆಕ್ರಮಿತ ಬಲೂಚಿಸ್ತಾನ್ನಾದ್ಯಂತ ಬಲೂಚಿಸ್ತಾನ್ ಜನರು ಬೀದಿಗಿಳಿದಿದ್ದಾರೆ. ಇದು ಬಲೂಚಿಸ್ತಾನ್, ಪಾಕಿಸ್ತಾನವಲ್ಲ. ಜಗತ್ತು ಇನ್ನು ಮುಂದೆ ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ ಎಂದು ಎಕ್ಸ್ ಹ್ಯಾಂಡಲ್ ನಲ್ಲಿ ಬರೆಯಲಾಗಿದೆ. ಭಾರತೀಯ ನಾಗರಿಕರು, ವಿಶೇಷವಾಗಿ ಮಾಧ್ಯಮಗಳು, ಯೂಟ್ಯೂಬರ್ಗಳು ಮತ್ತು ಬುದ್ಧಿಜೀವಿಗಳು ಬಲೂಚಿಸ್ತಾನ್ಗಳನ್ನು ಪಾಕಿಸ್ತಾನದ ಸ್ವಂತ ಜನರು ಎಂದು ಕರೆಯುವುದನ್ನು ನಿಲ್ಲಿಸುವಂತೆ ಅವರು ಇದೇ ವೇಳೆ ಒತ್ತಾಯಿಸಿದ್ದಾರೆ.