ನೇಸರಗಿ. ರಾಮಾಯಣ ಬರೆದ ಮಹಾಕವಿ, ಋಷಿ ವಾಲ್ಮೀಕಿ ಅವರಿಂದ ರಾಮನನ್ನು ನಾವು ಇಂದು ಪೂಜಿಸಿ, ಆರಾಧಿಸುತ್ತಿದ್ದು ಅವರ ಹೆಸರಲ್ಲಿ ವಾಲ್ಮೀಕಿ ಭವನ್ ನಿರ್ಮಾಣ ಮಾಡುವದು ಹೆಮ್ಮೆಯ ವಿಷಯ ಅದಕ್ಕಾಗಿ ಅವರ ಆದರ್ಶ ಜೀವನದಂತೆ ಎಲ್ಲ ಸಮಾಜದವರು ಒಂದಾಗಿ ಬಾಳಿ ಉತ್ತಮ ಸಮಾಜ ನಿರ್ಮಿಸಿ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ಸಮೀಪದ ಮೋಹರೆ ಗ್ರಾಮದಲ್ಲಿ 20 ಲಕ್ಷ ರೂಪಾಯಿಗಳ ಅನುಧಾನದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ವಾಲ್ಮೀಕಿ ಭವನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಸಚಿನ ಪಾಟೀಲ, ನೇಸರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಪ್ಪ ಅರಿಕೇರಿ, ಅಡಿವಪ್ಪ ಮಾಳಣ್ಣವರ, ಅಬ್ಬಾಸ ಪಿರಜಾದೆ, ರಮೇಶ ಮೇಲಿನಮನಿ, ಫಕೀರಪ್ಪ ಹಣ್ಣಿಕೇರಿ, ಯಲ್ಲಪ್ಪ ತಳವಾರ, ದೊಡ್ಡಪ್ಪ ತಳವಾರ, ನಾಗಪ್ಪ ತಳವಾರ, ಭೋರಪ್ಪ ತಳವಾರ, ಬಸಪ್ಪ ಮಾರಿಹಾಳ, ಮಂಜುನಾಥ ಹುಲಮನಿ, ನಜೀರ ತಹಶೀಲ್ದಾರ, ಮಲ್ಲಿಕಾರ್ಜುನ ಕಲ್ಲೋಳಿ, ಬಸವರಾಜ ಚಿಕ್ಕನಗೌಡ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.