ನಾಲ್ಕನೇ ಬಾರಿಗೆ ವಣ್ಣೂರ ಪಿಕೆಪಿಎಸ್ ಅಧ್ಯಕ್ಷರಾಗಿ ಬಾಳಾಸಾಹೇಬ ದೇಸಾಯಿ

Ravi Talawar
ನಾಲ್ಕನೇ ಬಾರಿಗೆ ವಣ್ಣೂರ ಪಿಕೆಪಿಎಸ್ ಅಧ್ಯಕ್ಷರಾಗಿ ಬಾಳಾಸಾಹೇಬ ದೇಸಾಯಿ
WhatsApp Group Join Now
Telegram Group Join Now
ನೇಸರಗಿ. ಸಮೀಪದ ವಣ್ಣೂರ ಗ್ರಾಮದ ಪ್ರತಿಷ್ಠಿತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ವಣ್ಣೂರ ಇದರ ಅಧ್ಯಕ್ಷರಾಗಿ  4 ನೇ ಭಾರಿಗೆ ಸಹಕಾರಿ ಮುಖಂಡ, ಬೈಲಹೊಂಗಲ ಟಿ ಎ ಪಿ ಸಿ ಎಮ್ ಎಸ್ ಇದರ ಅಧ್ಯಕ್ಷರಾದ ಬಾಳಾಸಾಹೇಬ ರು. ದೇಸಾಯಿ ಮತ್ತು ಉಪಾಧ್ಯಕ್ಷರಾಗಿ ನಾಗಪ್ಪ ಬಸಲಿಂಗಪ್ಪ. ಬಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾದರು.
    ಈ  ಆಯ್ಕೆಯಲ್ಲಿ ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕ ಮಹಾಂತೇಶ ದೊಡ್ಡಗೌಡರ ಮಾತನಾಡಿ ಈ ಭಾಗದ ರೈತರ ಅಭಿವೃದ್ಧಿಗೆ ಅಧ್ಯಕ್ಷ ಬಾಳಾಸಾಹೇಬ ದೇಸಾಯಿ ಉತ್ತಮ ಕಾರ್ಯ ಮಾಡಿದ್ದು ಅದಕ್ಕೆ ಅವರ ಬೆಂಬಲಿತರನ್ನು ಅಮೋಘವಾಗಿ ರೈತರು ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ ಎಂದರು.
    ಪಿಕೆಪಿಎಸ್ ಅಧ್ಯಕ್ಷ ಬಾಳಾಸಾಹೇಬ ದೇಸಾಯಿ ಮಾತನಾಡಿ ವಣ್ಣೂರ, ಸುನಕುಂಪಿ, ಮಾಸ್ತಮರ್ಡಿ ಗ್ರಾಮಗಳ ರೈತರ ಬೆಳವಣಿಗೆ ಸೇವೆ ಸಲ್ಲಿಸಲು  ಸದಾ ಬದ್ಧನಾಗಿದ್ದೇನೆ ಎಂದರು.
    ಈ ಸಂದರ್ಭದಲ್ಲಿ ರವಿರಾಜ ಇನಾಮದಾರ, ಕುಮಾರಗೌಡ ಪಾಟೀಲ, ಮಂಡಳ ಬಿಜೆಪಿ ಅಧ್ಯಕ್ಷ ಶ್ರೀಕರ ಕುಲಕರ್ಣಿ, ಬೈಲಹೊಂಗಲ ತಾಲೂಕ ಬಿಡಿಸಿಸಿ ಬ್ಯಾಂಕ ಸಂಯೋಜಕ ವೀರುಪಾಕ್ಷ ಗೀರಣವರ, ಸುರೇಶ ಮತ್ತಿಕೊಪ್ಪ, ಹಿರಿಯರಾದ ಬಸಲಿಂಗಪ್ಪ ಬಶೆಟ್ಟಿ, ಆನಂದ ಕಿರಗಿ, ಬಸವರಾಜ ಅಂಗಡಿ, ಹಣಮಂತ ದೊಡ್ಡಣ್ಣವರ, ರಾಮಪ್ಪ ಕೊಳವಿ, ಮಲ್ಲೇಶ ಚಿಕ್ಕೋಡಿ, ಯಲ್ಲಪ್ಪ ಚಿಕ್ಕೋಪ, ಬಾಳಪ್ಪ ದಳವಾಯಿ, ಸಿದ್ದಪ್ಪ ಅಂಗಡಿ, ಸಿದ್ದಪ್ಪ ಹಣ್ಣಿಕೇರಿ, ನಾಗಪ್ಪ ಮುತ್ತಿನವರ, ಡಿ ಎಮ್ ಶೇಬನ್ನವರ, ಅಪ್ಪಯ್ಯ ಕಸಳಿ, ಸಿದ್ದಪ್ಪ ಮಡಿವಾಳರ, ಮೆಹಬೂಬ್ ಕಿಲ್ಲೆದಾರ, ಈರಣ್ಣ ದೇಸಾಯಿ, ನಿಂಗಪ್ಪ ಹೊಸಮನಿ,ಭೀಮಪ್ಪ ಸೋಮನಟ್ಟಿ,  ಕಾರ್ಯನಿರ್ವಾಹಕ ರಮೇಶ ಹೊಸಮನಿ, ಕ್ಲಾರ್ಕ್ ಶಂಕರ ದನದ, ಆಡಳಿತ ಮಂಡಳಿ ನಿರ್ದೇಶಕರು, ಹಿರಿಯರು, ಮುಖಂಡರು, ರೈತರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article