*ಬಳ್ಳಾರಿ: ಜುಲೈ.16.;* ತಾಲೂಕಿನ ರೂಪನಗುಡಿ ಗ್ರಾಮದ ಗಂಗಾಮತಸ್ಥರ ಜಯಣ್ಣ ತಂದೆ ತಮ್ಮಣ್ಣ ಅವರು ಹೊಲಕ್ಕೆ ಹೋಗುವ ಸಂದರ್ಭದಲ್ಲಿ ಎತ್ತಿನ ಗಾಡಿ ಆಕಸ್ಮಿಕವಾಗಿ ರಸ್ತೆ ಪಕ್ಕದಲ್ಲಿರುವ ಗ್ರೇವೆಲ್ ಗುಂಡಿಗೆ ಬಿದ್ದ ಪರಿಣಾಮ ಎತ್ತುಗಳು ಸಾವನ್ನಪ್ಪಿದ ದುರ್ಘಟನೆ ಜೂನ್ 29ರಂದು ಬೆಳಿಗ್ಗೆ 6:30ಕ್ಕೆ ಸಂಭವಿಸಿದೆ. ಘಟನೆಯಲ್ಲಿ ಗಾಡಿಯಲ್ಲಿದ್ದ ಜಯಣ್ಣ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆಯ ವಿಷಯ ತಿಳಿದ ಮಾಜಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಳ್ಳಾರಿ ಗ್ರಾಮಾಂತರ ಶಾಸಕರಾದ ಶ್ರೀ ಬಿ.ನಾಗೇಂದ್ರ ಅವರ ಸೂಚನೆ ಮೇರೆಗೆ ಅವರ ಆಪ್ತರಾದ ಗೋವರ್ಧನ ರೆಡ್ಡಿ ಅವರು ಮಂಗಳವಾರ (50,000) ಐವತ್ತು ಸಾವಿರ ರೂಪಾಯಿಗಳನ್ನು ಪರಿಹಾರ ಧನವನ್ನು ಜಯಣ್ಣ ಅವರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಶಾಸಕರ ಆಪ್ತರಾದ ನಾಗರಾಜ್, ರಾಜೇಶ್, ವಿ.ಎನ್ ಶ್ರೀನಾಥ್ ರೂಪನಗುಡಿ ಗಂಗಪ್ಪ, ಯರ್ರಿಸ್ವಾಮಿ, ರಾಮಾಂಜಿನಿ, ಶಿವಶಂಕರ್, ಹೊನ್ನೂರಸ್ವಾಮಿ, ಕೃಷ್ಣಪ್ಪ ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ನಿಂಗಪ್ಪ ಅವರು ಉಪಸ್ಥಿತರಿದ್ದರು.