ಬಾಗಲಕೋಟೆ : ಮಾರ್ಚ ೨೩ : ಬಾಗಲಕೋಟೆ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಸೋಮವಾರದಂದು ಒಟ್ಟು ೧೩ ಅಭ್ಯರ್ಥಿಗಳಿಂದ ೧೯ ನಾಮಪತ್ರ ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ಸಂತೋಷ ಜಗಲಾಸರ ತಿಳಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿಯಿಂದ ವೀರಭದ್ರಯ್ಯ ಚರಂತಿಮಠ ೩ ನಾಮಪತ್ರ ಸಲ್ಲಿಸಿದೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಉಮೇಶ ಮೇಟಿ ೪ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರದಿಂದ ಶಿವಪ್ಪ ಪಡಸಲಗಿ ಎರಡು ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರರಿಂದ ಯಂಕಪ್ಪ ಕಮತಗಿ, ಅಬ್ದುಲ್ ರಜಾಕ್ ಬಾಳೀಕಾಯಿ, ಆಯುಬಖಾನ ಲಾಲಸಾಬ ಬಾಗೇವಾಡಿ, ಪರಶುರಾಮ ನೀಲನಾಯಕ, ಬಾಬುಷಾ ರೊಳ್ಳಿ, ಪ್ರಶಾಂತ ರಾವ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಿಂದ ಗೋವಿಂದರಾಜ ಬಳ್ಳಾರಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ನಾಗರಾಜ ಕಲಕುಟಗರ, ಜನತಾ ಚಳುವಳಿ ಭಾರತ ಪಕ್ಷದಿಂದ ತೇಜೋರಾಮ ಶೆಟ್ಟಿ, ಆಲ್ ಇಂಡಿಯಾ ಜನರಕ್ಷಾ ಪಾರ್ಟಿಯಿಂದ ಸಿದ್ದಪ್ಪಗೋಡಿ ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮಾರ್ಚ ೨೦ ರಂದು ೫ ಅಭ್ಯರ್ಥಿಗಳಿಂದ ೭ ನಾಮಪತ್ರ ಸಲ್ಲಿಕೆಯಾಗಿದ್ದವು. ಇಲ್ಲಿವರೆಗೆ ಒಟ್ಟು ೧೮ ಅಭ್ಯರ್ಥಿಗಳಿಂದ ಒಟ್ಟು ೨೬ ನಾಮಪತ್ರಗಳು ಸಲ್ಲಿಕೆಯಾಗಿರುತ್ತವೆ.


