ಮತ್ತೆ ಕನ್ನಡಕ್ಕೆ ಜಿಂಕೆಮರಿ ನಂದಿತಾ ಶ್ವೇತಾ  ಬೆನ್ನಿಗೆ ಕಿಚ್ಚ ಸುದೀಪ್ ಖಡಕ್ ಧ್ವನಿ

Ravi Talawar
ಮತ್ತೆ ಕನ್ನಡಕ್ಕೆ ಜಿಂಕೆಮರಿ ನಂದಿತಾ ಶ್ವೇತಾ  ಬೆನ್ನಿಗೆ ಕಿಚ್ಚ ಸುದೀಪ್ ಖಡಕ್ ಧ್ವನಿ
WhatsApp Group Join Now
Telegram Group Join Now
     ಜಿಂಕೆ ಮರೀನಾ, ಜಿಂಕೆ ಮರೀನಾ ಅಂತಾ ಕುಣಿದು ಫೇಮಸ್‌ ಆಗಿದ್ದ ನಂದಿತಾ ಶ್ವೇತಾ ಮತ್ತೆ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ.
      ನಂದಾ ಲವ್ಸ್‌ ನಂದಿತಾ ಸಿನಿಮಾ ಮೂಲಕ ಕನ್ನಡ ಸಿನಿಪ್ರಿಯರ ಮುಂದೆ ಬಂದಿದ್ದ ಶ್ವೇತಾ, ಆ ಬಳಿಕ ತೆಲುಗು, ತಮಿಳು ಚಿತ್ರರಂಗದತ್ತ ಮುಖ ಮಾಡಿದರು. ಇದೀಗ ಮತ್ತೊಮ್ಮೆ ನಂದಿತಾ ಶ್ವೇತಾ ಸ್ಯಾಂಡಲ್‌ವುಡ್‌ಗೆ ಕಂಬ್ಯಾಕ್‌ ಆಗುತ್ತಿದ್ದಾರೆ. ಅವರನ್ನು ‘ಹೊಂದಿಸಿ ಬರೆಯಿರಿ’ ಸಿನಿಮಾದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್‌ ಕರೆದುಕೊಂಡು ಬರುತ್ತಿದ್ದಾರೆ. ಹಾಗಂತ ಶ್ವೇತಾಗೆ ಅವರು ಆಕ್ಷನ್‌ ಕಟ್‌ ಹೇಳುತ್ತಿಲ್ಲ. ಬದಲಿಗೆ  ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಪೆಪೆ ಸಿನಿಮಾ ನಿರ್ದೇಶನ ಮಾಡಿದ್ದ ಶ್ರೀಲೇಶ್ ಎಸ್ ನಾಯರ್ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ನಂದಿತಾ ಶ್ವೇತಾ ನಾಯಕಿಯಾಗಿದ್ದಾರೆ.
     ಶ್ರೀಲೇಶ್‌ ‘ಬೆನ್ನಿ’ ಎಂಬ ಮಹಿಳಾ ಪ್ರಧಾನ ಸಿನಿಮಾ ನಿರ್ದೇಶಿಸಿದ್ದು . ಈ ಚಿತ್ರದ ಫಸ್ಟ್‌ ಝಲಕ್‌ ರಿಲೀಸ್‌ ಆಗಿದೆ. ಶ್ವೇತಾ  ಬೆನ್ನಿಯಾಗಿ ಟೈಲಟ್‌ ರೋಲ್‌ ಪ್ಲೇ ಮಾಡುತ್ತಿದ್ದಾರೆ. ತಂದೆ ಮತ್ತು ಮಗಳ ಬದುಕಿನಲ್ಲಿ ಎದುರಾಗುವ ಘಟನೆಗಳ ವಿರುದ್ಧ ನಡೆಯುವ
ಪ್ರಸ್ತುತ ಕಾಲಘಟ್ಟ ಕಥಾಹಂದರವನ್ನು ‘ಬೆನ್ನಿ’ ಹೊಂದಿದೆ. ಫಸ್ಟ್‌ ಲುಕ್‌ ಗೆ ಕಿಚ್ಚ ಖಡಕ್‌ ಆಗಿ ವಾಯ್ಸ್‌ ಕೊಟ್ಟಿದ್ದು, ರಕ್ತಸಿಕ್ತ ಅವತಾರದಲ್ಲಿ ನಂದಿತಾ ಶ್ವೇತಾ ಕಾಣಿಸಿಕೊಂಡಿದ್ದಾರೆ.
     ದಕ್ಷಿಣದ ಭಾರತದ ಪ್ರಮುಖ ನಟರು ʼಬೆನ್ನಿʼಗೆ ಜೊತೆಯಾಗಲಿದ್ದಾರೆ. ಕನ್ನಡ ಮಾತ್ರವಲ್ಲ ತೆಲುಗು, ತಮಿಳು ಹಾಗೂ ಮಲಯಾಳಂ ಈ ಚಿತ್ರ ಮೂಡಿ ಬರುತ್ತಿದೆ. ಸಂಡೇ ಸಿನಿಮಾಸ್‌ ಬ್ಯಾನರ್‌ನಡಿ ರಾಮೇನಹಳ್ಳಿ ಜಗನ್ನಾಥ್‌ ಚಿತ್ರವನ್ನು ನಿರ್ಮಿಸಿ ಪ್ರೆಸೆಂಟ್‌ ಮಾಡುತ್ತಿದ್ದಾರೆ. ಸಚಿನ್‌ ಬಸ್ರೂರ್‌ ಸಂಗೀತ, ಗುರುಪ್ರಸಾದ್ ನಾರ್ನಾದ್ ಛಾಯಾಗ್ರಹಣ, ಮನು ಶೇಡ್ಗಾರ್ ಹಾಗೂ ರಂಜನ್ ನರಸಿಂಹಮೂರ್ತಿ ಸಂಕಲನ ಸಿನಿಮಾಕ್ಕಿದೆ.

Share This Article