ನೇಸರಗಿ. ನೇಸರಗಿ ಜಿಲ್ಲಾ ಪಂಚಾಯತ ಕ್ಷೇತ್ರವಾಗಿದ್ದು ಈ ಭಾಗದ ದೇವಸ್ಥಾನ, ಮೂಲಭೂತ ಸೌಕರ್ಯ, ಗುಣಮಟ್ಟದ ರಸ್ತೆ ನಿರ್ಮಾಣ, ನೀರಾವರಿ ಯೋಜನೆ ಇನ್ನೂ ಅನೇಕ ಕೆಲಸ ಕಾರ್ಯಗಳಿಗೆ ಸದಾ ನಾನು ಕೆಲಸ ಕಾರ್ಯ ಮಾಡುವದಾಗಿ ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ಶನಿವಾರದಂದು ಗ್ರಾಮದ ಶ್ರೀ ವೀರಭದ್ರಶ್ವರ ದೇವಸ್ಥಾನದ ಕಲ್ಯಾಣ ಮಂಟಪ ಕಾಮಗಾರಿಗೆ ನೀರಾವರಿ ಇಲಾಖೆಯಿಂದ ರೂ 48,50,000/- ಗಳ ಕಟ್ಟಡ ಕಾಮಗಾರಿ ಪೂಜೆ,12 ಲಕ್ಷ ರೂಪಾಯಿಗಳ ಅನುಧಾನದ ಶ್ರೀ ಕಲ್ಮೇಶ್ವರ ದೇವಸ್ಥಾನದಿಂದ ಶ್ರೀ ಮಾರುತಿ ದೇವಸ್ಥಾನದವರೆಗೆ ಸಿ ಸಿ ರಸ್ತೆ,15 ಲಕ್ಷ ರೂಪಾಯಿಗಳ ಅನುಧಾನದ ಶಿವಶಕ್ತಿ ಮೆಡಿಕಲ್ ದಿಂದ ಸರ್ಕಾರಿ ಪ್ರೌಢಶಾಲೆ ವರೆಗೆ ಸಿ ಸಿ ರಸ್ತೆ ನಿರ್ಮಾಣ, 20 ಲಕ್ಷ ರೂಪಾಯಿ ಅನುಧಾನದ 4 ನೇ ವಾರ್ಡ್ನಲ್ಲಿ ಸಿ ಸಿ ರಸ್ತೆ ನಿರ್ಮಾಣ,5 ಲಕ್ಷ ರೂ ಅನುಧಾನದ ಸರ್ಕಾರಿ ಪ್ರೌಢಶಾಲೆ ದುರಸ್ಥಿ, 5 ಲಕ್ಷ ರೂ ಅನುಧಾನದ ಶ್ರೀ ಮಾರುತಿ ದೇವಸ್ಥಾನ ಕಲ್ಯಾಣ ಮಂಟಪ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ನಾನು ಚುನಾವಣೆಯಲ್ಲಿ ತಮಗೆ ಮಾತು ಕೊಟ್ಟಂತೆ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಹಂತ ಹಂತವಾಗಿ ಸರಾಗವಾಗಿ ಕೆಲಸ ಮಾಡುತ್ತಿದ್ದು ಇಂದು ನೇಸರಗಿ ಗ್ರಾಮದಲ್ಲಿ ರಸ್ತೆ, ಶಾಲೆ, ದೇವಸ್ಥಾನ, ಮುಲಸೌಕರ್ಯ ಅಭಿವೃದ್ಧಿಗೆ ಸುಮಾರು 1 ಕೋಟಿ ಅನುದಾನದ ಕಾಮಗಾರಿ ಪ್ರಾರಂಭವಾಗಲಿದ್ದು ನನಗೆ ಹೆಮ್ಮ ಅನಿಸುತ್ತದೆ ಎಂದರು.ನೀರಾವರಿ ಯೋಜನೆಗಳಿಂದ ವಂಚಿತ ಈ ಭಾಗಕ್ಕೆ ಚೆನ್ನವೃಷಬೇಂದ್ರ ಏತ್ ನೀರಾವರಿ ಯೋಜನೆಯನ್ನು ಶೀಘ್ರದಲ್ಲಿ ಪ್ರಾರಂಭಿಸಿ ರೈತರ ಉನ್ನತಿಗೆ ಶ್ರಮಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಶ್ರೀ ವೀರಭದ್ರಶ್ವರ ದೇವಸ್ಥಾನ ಕಮಿಟಿ, ಶ್ರೀ ಮಾರುತಿ ದೇವಸ್ಥಾನ ಕಮಿಟಿ ವತಿಯಿಂದ ಶಾಸಕ ಬಾಬಾಸಾಹೇಬ ಪಾಟೀಲ ಅವರನ್ನು ಆತ್ಮೀಯವಾಗಿ ಸತ್ಕರಿಸಲಾಯಿತು.
ಪಿ ಕೆ ಪಿ ಎಸ್ ಅಧ್ಯಕ್ಷ ಆರ್ ಎಮ್ ಯತ್ತಿನಮನಿ ಮಾತನಾಡಿ ದೇವಸ್ಥಾನ ಅನುಧಾನ ಸಿಗುವಲ್ಲಿ ಶಾಸಕರ ಪಾತ್ರ ದೊಡ್ಡದು ಎಂದರು.
ಯುವ ಮುಖಂಡ ಸಚಿನ ಪಾಟೀಲ ಮಾತನಾಡಿ ಎಲ್ಲ ಕೆಲಸ ಕಾರ್ಯ ಮಾಡಲು ಶಾಸಕರು ಉತ್ಸುಕರಾಗಿದ್ದು ಮುಂದಿನ ದಿನಗಳಲ್ಲಿ ಈ ಭಾಗದ ಅಭಿವೃದ್ಧಿಗೆ ಶ್ರಮದಿಂದ ಕೆಲಸ ಮಾಡುತ್ತಾರೆ ಎಂದರು.
ಸಾನಿಧ್ಯ ವಹಿಸಿದ್ದ ಗಾಳೇಶ್ವರ ಮಠದ ಚಿದಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಾ. ಎಸ್ ಬಿ. ಗೆಜ್ಜಿ, ಎಸ್ ವಿ. ಸೋಮನ್ನವರ , ಅಡಿವಪ್ಪ ಮಾಳನ್ನವರ, ಮಾಜಿ ಜಿ ಪಂ ಸದಸ್ಯ ನಿಂಗಪ್ಪ ಅರಿಕೇರಿ ,ಮಲ್ಲಿಕಾರ್ಜುನ ಮದನಬಾವಿ, ಮಲ್ಲಪ್ಪ ಮಾಳಣ್ಣವರ, ಗ್ರಾ ಪಂ ಅಧ್ಯಕ್ಷ ವೀರಭದ್ರ ಚೋಭಾರಿ, ಬಾಳಪ್ಪ ಮಾಳಗಿ,ಮಾಜಿ ಎ ಪಿ ಎಮ್ ಸಿ ಅಧ್ಯಕ್ಷ ಬರಮಣ್ಣ ಸತ್ತೇನ್ನವರ, ಸೋಮನಗೌಡ ಪಾಟೀಲ, ಗುರು ತುಬಚಿ, ಬಸವರಾಜ್ ಹಿರೇಮಠ, ನಜೀರ ತಹಶೀಲ್ದಾರ, ಮಂಜುನಾಥ ಹುಲಮನಿ, ಬಸನಗೌಡ ಚಿಕ್ಕನಗೌಡ್ರ,ಸಿದ್ದಪ್ಪ ಇಂಚಲ, ಶೇಖಣ್ಣ ಕಾರಜೋಳ, ಶಂಕರ ತಿಗಡಿ, ಮಲ್ಲಪ್ಪ ಗುಜನಟ್ಟಿ, ಬಸಪ್ಪ ಕಗ್ಗಣಗಿ,ದೇಮಪ್ಪ ಗುಜನಟ್ಟಿ,ಸುಕಾಲಯ್ಯ ಚರಂಟಿಮಠ, ಸುರೇಶ ಅಗಸಿಮನಿ, ಚನಗೌಡ ಪಾಟೀಲ, ಗೋಪಾಲ ಪೂಜೇರಿ, ಗುರುಪಾದಯ್ಯ ಚರಂತಿಮಠ,ಮಲ್ಲಪ್ಪ ಯತ್ತಿನಮನಿ,ಬಸವರಾಜ ಚಿಕ್ಕನಗೌಡ್ರ, ಯಮನಪ್ಪ ಪೂಜೇರಿ, ಸಿದ್ದಿಕ್ ಭಾಗವಾನ, ರಾಮು ಚೋಭಾರಿ ಸೇರಿದಂತೆ ಗ್ರಾಮದ ಹಿರಿಯರು,ಎಲ್ಲ ಸಮಾಜದ ಮುಖಂಡರು, ಗ್ರಾ ಪಂ ಸದಸ್ಯರು, ಗ್ರಾಮಸ್ಥರು, ಶ್ರೀ ವೀರಭದ್ರಶ್ವರ ದೇವಸ್ಥಾನ ಕಮಿಟಿ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.