ನೇಸರಗಿ. ಕನ್ನಡ ನಾಡು ನುಡಿ ರಕ್ಷಣೆಗೆ ಕೇವಲ ನವೆಂಬರ 1 ರಂದು ಮಾತ್ರ ಆಚರಣೆ ಮಾಡಿ ಸಂಭ್ರಮ ಆಚರಣೆ ಮಾಡದೆ ಪ್ರತಿ ದಿನವು ತಾಯಿ ಭುವನೇಶ್ವರಿಯ ಆಚರಣೆ ಮಾಡಿ ಕನ್ನಡ ರಾಜ್ಯೋತ್ಸವವನ್ನು ಅರ್ಥ ಪೂರ್ಣವಾಗಿ ಆಚರಣೆ ಮಾಡಬೇಕೆಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ಇತ್ತಿಚ್ಚೆಗೆ ಸಮೀಪದ ಮೇಕಲಮರಡಿ ಗ್ರಾಮದಲ್ಲಿ ಜಯ ಕರ್ನಾಟಕ ಸಂಘಟನೆ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಆಯೋಜನೆ ಮಾಡಲಾಗಿದ್ದ ಮಕ್ಕಳ ಕಾರ್ಯಕ್ರಮ, ಆರ್ಕೆಸ್ಟ್ರಾ, ರಸಮಂಜರಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ಯುವಕರು ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಾ ಬಂದಿದ್ದು ಈ ಯುವಕರಿಗೆ ನಾನು ಸಹಾಯ, ಸಹಕಾರ ಮಾಡಲು ಸಿದ್ದನಾಗಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಚಿತ್ರನಟ, ಕಲಾವಿದ ಸಿ ಕೆ ಮೆಕ್ಕೇದ ಮಾತನಾಡಿ ಯುವಕರಲ್ಲಿ ರಾಜ್ಯ ಮಾತೆ ಭುವನೇಶ್ವರಿ ತಾಯಿಯ ಅಭಿಮಾನ, ಪ್ರೀತಿ ನಿರಂತರವಾಗಿ ಇರಬೇಕು ಎಂದರು.
ಕಾರ್ಯಕ್ರಮದಲ್ಲಿ ಕ ಸಾ ಪ ಮಾಜಿ ಜಿಲ್ಲಾ ಅಧ್ಯಕ್ಷ ಮೋಹನ ಪಾಟೀಲ, ಡಿ ಎಸ್ ಎಸ್ ರಾಜ್ಯಾಧ್ಯಕ್ಷ ಸುರೇಶ ರಾಯಪ್ಪಗೋಳ, ಡಾ. ಪ್ರಕಾಶ ಹಳ್ಯಾಳ,ನೇಸರಗಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಸೋಮಣ್ಣವರ, ಪತ್ರಕರ್ತ ರವಿ ಹುಲಕುಂದ, ಸಂಘಟನೆ ಅಧ್ಯಕ್ಷ ಕಾಶಿಮ ಜಮಾದಾರ, ಉಪಾಧ್ಯಕ್ಷ ಚಂದ್ರಕಾಂತ ಕಡಕೋಳ, ಕಾರ್ಯದರ್ಶಿ ಮಂಜುನಾಥ ಹೊಸಮನಿ ಮೋಹರೆ ಸೈನಿಕರ ಸಂಘದ ಸನಗೌಡ ದೇವರದವರ, ಗೌಡಪ್ಪ ಯರಡಾಲ, ಪತ್ರಕರ್ತ ಬಸವರಾಜ್, ರಾಜು ಯರಡಾಲ ಕಾರ್ಯಕ್ರಮದ ನಿರೂಪಣೆಯನ್ನು ಪತ್ರಕರ್ತ ಮಹಾಂತೇಶ ಹಿರೇಮಠ ನೇರವೇರಿಸಿದರು.ಕಾರ್ಯಕ್ರಮದಲ್ಲಿ ಜಯ ಕರ್ನಾಟಕ ಸಂಘಟನೆ ಸದಸ್ಯರು, ಗ್ರಾಮದ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.


