ಸಂಘಟನೆಗಳಿಂದ  ರಾಜ್ಯಕ್ಕೆ, ಬಡವರಿಗೆ ಸಹಕಾರವಾಗಲಿ: ಬಾಬಾಸಾಹೇಬ ಪಾಟೀಲ 

Ravi Talawar
ಸಂಘಟನೆಗಳಿಂದ  ರಾಜ್ಯಕ್ಕೆ, ಬಡವರಿಗೆ ಸಹಕಾರವಾಗಲಿ: ಬಾಬಾಸಾಹೇಬ ಪಾಟೀಲ 
WhatsApp Group Join Now
Telegram Group Join Now
ನೇಸರಗಿ: ಯಾವುದೇ ಸಂಘಟನೆಗಳು ಹೆಸರಿಗಾಗಿ ಮಾತ್ರ ಸಂಘಟನೆ ಮಾಡದೇ ರಾಜ್ಯದ ಬೆಳವಣಿಗೆ, ಬಡವರ ಅಭಿವೃದ್ಧಿಗೆ ಬೆಳಕಾಗುವ ಸಂಘಟನೆಗಳಾಗಿ ಕೆಲಸ ಮಾಡಿದರೆ ಅಂತಹ ಸಂಘಟನೆಗಳನ್ನು ಜನರು ಪ್ರೀತಿಸುತ್ತಾರೆ. ಆದರೆ ವೈಯಕ್ತಿಕ ಹೆಸರಿಗೆ, ಲಾಭಕ್ಕೆ ಮಾಡುವ ಸಂಘಟನೆಗೆ ಜನ ಮನ್ನಣೆ ನೀಡುವದಿಲ್ಲ ಅದಕ್ಕಾಗಿ ರಾಜ್ಯದ ಬೆಳವಣಿಗೆಗೆ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ನೀಡುವ ಸಂಘಟನೆಗಳಾಗಿ ಬಡವರ ಕಣ್ಣಿರೋರೆಸುವ ಕೆಲಸ ಮಾಡಬೇಕೆಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ  ಹೇಳಿದರು.
    ಅವರು ರವಿವಾರದಂದು  ಸಮೀಪದ ಮೇಕಲಮರಡಿ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಅವರದಲ್ಲಿ 69 ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ನಿಮಿತ್ಯವಾಗಿ ಜಯ ಕರ್ನಾಟಕ ಸಂಘಟನೆ ವತಿಯಿಂದ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯೆಕ್ತಿಗಳಿಗೆ  ಡಾ. ಪುನೀತ್ ರಾಜಕುಮಾರ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅನೇಕ ಮಹನೀಯರ ಹೋರಾಟದ ಪಲವಾಗಿ ಮೈಸೂರು ರಾಜ್ಯ ಇದ್ದದ್ದು ಕರ್ನಾಟಕ ರಾಜ್ಯವಾಗಿ ಈಗ 67 ವರ್ಷ ಕಳೆದವು. ಬೆಳಗಾವಿ ಮರಾಠಿ ಪ್ರಭಾವ ಕಡಿಮೆ ಮಾಡಿ ಕನ್ನಡತನ ಬೆಳಯಲು ಕನ್ನಡ ಸಂಘಟನೆಗಳ ಪಾತ್ರ ದೊಡ್ಡದು, ಹಾಗೆಯೇ ಮೇಕಲಮರಡಿ ಗ್ರಾಮದಲ್ಲಿ ಕಳೆದ 13 ವರ್ಷಗಳಿಂದ ರಾಜ್ಯೋತ್ಸವ ಆಚರಿಸಿ, ಸಾಧಕರಿಗೆ ಸತ್ಕರಿಸಿ, ವಿನೂತನ ಕಾರ್ಯಕ್ರಮ ಆಯೋಜನೆ ಮಾಡಿ ಬೆಳಕು ಚೆಲ್ಲುತಿರುವ ಕಾಶಿಮ ಜಮಾದರ ಹಾಗೂ ಜಯ ಕರ್ನಾಟಕ ಸಂಘಟನೆ ಸದಸ್ಯರಿಗೆ ನಾನು ಸದಾ ಸಹಾಯ ಸಹಕಾರ ನೀಡುತ್ತೇನೆ. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ, ಉನ್ನತ ವಿದ್ಯಾಭ್ಯಾಸಕ್ಕೆ ಸಂಘಟನೆಯೊಂದಿಗೆ ಶ್ರಮಿಸುತ್ತೇನೆ. ಮಳೆ ಆಧಾರಿತ ನೇಸರಗಿ ಭಾಗದಲ್ಲಿ ಮುಂದಿನ ದಿನಗಳಲ್ಲಿ ನೀರಾವರಿಗೆ ಒತ್ತು ನೀಡುತ್ತೇನೆ. ಈ ಭಾಗದಲ್ಲಿ ಯಾರು ಶಿಕ್ಷಣದಿಂದ ವಂಚಿತರಗಬಾರದು,ಪಾಲಕರು ತಮ್ಮ ಮಕ್ಕಳಿಗೆ, ಅಸ್ತಿ, ಬಂಗಾರ, ಬೆಳ್ಳಿ ಮಾಡದೇ ಉತ್ತಮ ಬೆಳವಣಿಗೆ ಒಳ್ಳೆಯ ಶಿಕ್ಷಣ ನೀಡಬೇಕು ಎಂದರು.
    ಕೆ ಪಿ ಸಿ ಸಿ ಸದಸ್ಯ ಹಾಗೂ ಮಾಜಿ ಜಿ ಪಂ ಸದಸ್ಯ ಶ್ರೀಮತಿ ರೋಹಿಣಿ ಪಾಟೀಲ ಮಾತನಾಡಿ ದೇವರ ಮಗ, ಕೊಡುಗೈ ಧಾನಿ, ಕನ್ನಡದ ಕಣ್ಮಣಿ ಡಾ. ಪುನೀತ ರಾಜಕುಮಾರ ಹೆಸರಲ್ಲಿ ಸೇವಾ ಪ್ರಶಸ್ತಿ ನೀಡುತ್ತಿರುವದು ಖುಷಿ ತಂದಿದೆ. ಪತಿ ಬಾಬಾಸಾಹೇಬರು ಸಿ ಎಮ್ ಸಿದ್ರಾಮಯ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕ್ಕಾಗಿತ್ತು ಅದನ್ನು ರದ್ದು ಮಾಡಿ ಕ್ಷೇತ್ರದ ಜನರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶೋಭೆ ತಂದಿದ್ದಾರೆ. ಅನೇಕ ವ್ರಧಾಶ್ರಮ, ವಸತಿ ನಿಲಯ, ಶಾಲೆಗಳನ್ನು ಯಾರಿಗೆ ತಿಳಿಸದೇ ಬಡವರ ಪರ, ಸಮಾಜಮುಖಿ ಕೆಲಸ ಮಾಡಿ ಇಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ ಸಾಧನೆ ಅಮರವಾಗಿದೆ  ಎಂದರು.
   ಕಾರ್ಯಕ್ರಮದಲ್ಲಿ ನೇಸರಗಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ನಿಂಗಪ್ಪ ಅರಿಕೇರಿ, ರೈತ ಮುಖಂಡ ರವಿ ಸಿದ್ದಮನವರ,ಪಿ ಎಸ್ ಐ ವಾಯ್ ಎಲ್ ಶೀಗಿಹಳ್ಳಿ ದೇಶದ, ರಾಜ್ಯದ ಅನೇಕ ಮಹಾನುಭಾವರ ಹೋರಾಟ ಗ್ರಾಮದ ವೀರ ಯೋಧ ಯಶವಂತ ಕೋಲಕಾರ ಸಾಧನೆ ಜಯ ಕರ್ನಾಟಕ ಸಂಘಟನೆಯ ಕಾರ್ಯಗಳ ಬಗ್ಗೆ ಕೊಂಡಾಡಿದರು.
    ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಕಾಶಿಮಸಾಬ್ ಜಮಾದಾರ ಮಾತನಾಡಿ ಕಳೆದ 13 ವರ್ಷಗಳಿಂದ ಸಂಘಟನೆ ವಿನೂತನ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಬೆಳ್ಳಿಗ್ಗೆ ರಂಗೋಲಿ ಸ್ಪರ್ಧೆ ನೆರವೇರಿದ್ದು, ಪ್ರತಿಭಾವಂತರಿಗೆ ಪುರಸ್ಕಾರ ನೀಡಲಾಗುತ್ತಿದ್ದು ಮುಂದೆ ನಮ್ಮ ಸಂಘಟನೆ ಪಧಾಧಿಕಾರಿಗಳ, ಸದಸ್ಯರ, ಗ್ರಾಮಸ್ಥರ ಬೆಂಬಲದಿಂದ ಇನ್ನೂ ಹೆಚ್ಚಿನ ಮಟ್ಟದ  ಕಾರ್ಯಕ್ರಮ ನಡೆಸಲಾಗುವದು ಎಂದರು.
   ಕಾರ್ಯಕ್ರಮದಲ್ಲಿ ಮಾಜಿ ಗ್ರಾ ಪಂ ಅಧ್ಯಕ್ಷ ರಾಜು ಹಣ್ಣಿಕೇರಿ, ಪೌಜಿ ಹವಾಲ್ದಾರ್,ಶಿವನಗೌಡ ಪಾಟೀಲ, ಡಿ ಎಸ್ ಎಸ್ ರಾಜ್ಯಾಧ್ಯಕ್ಷರಾದ ಸುರೇಶ ರಾಯಪ್ಪಗೋಳ, ರಮೇಶ ರಾಯಪ್ಪಗೋಳ,ರಫೀಕ್ ಬಡೇಘರ, ನಾಗಪ್ಪ ಮೇಟಿ, ಡಾ. ಪ್ರಕಾಶ ಹಾಲ್ಯಾಳ, ಶಶಿಧರ ಪಾಟೀಲ, ಸಂತೋಷ ಕೊಳವಿ, ನಾಗರಾಜ ಯರಗುದ್ದಿ  ಜಯ ಕರ್ನಾಟಕ   ಸಂಘಟನೆ ಉಪಾಧ್ಯಕ್ಷ ಚಂದ್ರಕಾಂತ ಕಡಕೋಳ, ಕಾರ್ಯದರ್ಶಿ ಮಂಜುನಾಥ ಹೊಸಮನಿ,ಸಂಘಟನೆ ಸದಸ್ಯರು, ಮೇಕಲಮರಡಿ ಗ್ರಾಮದ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಇದೆ ಸಂದರ್ಭದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಡಾ ಪುನೀತ್ ರಾಜಕುಮಾರ ಸೇವಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದ  ನಿರೂಪಣೆಯನ್ನು ಐ ಬಿ ದುಪದಾಳ ಶಿಕ್ಷಕರು, ನಾಗಮ್ಮ ಚರಂಟಿಮಠ ನೆರವೇರಿಸಿದರು.
WhatsApp Group Join Now
Telegram Group Join Now
Share This Article