ಕಿತ್ತೂರು ಅಭಿವ್ರದ್ದಿ ಪ್ರಾಧೀಕಾರ ಕಚೇರಿ ಉದ್ಘಾಟಿಸಿದ ಶಾಸಕ ಬಾಬಸಾಹೇಬ ಪಾಟೀಲ 

Ravi Talawar
ಕಿತ್ತೂರು ಅಭಿವ್ರದ್ದಿ ಪ್ರಾಧೀಕಾರ ಕಚೇರಿ ಉದ್ಘಾಟಿಸಿದ ಶಾಸಕ ಬಾಬಸಾಹೇಬ ಪಾಟೀಲ 
WhatsApp Group Join Now
Telegram Group Join Now
ಚನ್ನಮ್ಮನ ಕಿತ್ತೂರ :-  ಪಟ್ಟಣದ ತಾಲೂಕಾ ಆಡಳಿತದ  2‌ ನೇ ಮಹಡಿಯಲ್ಲಿ ಆಯುಕ್ತರು ಕಿತ್ತೂರು ಅಭಿವ್ರದ್ದಿ ಪ್ರಾಧೀಕಾರ ಕಚೇರಿಯನ್ನು   ಶಾಸಕ   ಬಾಬಸಾಹೇಬ ಪಾಟೀಲ  ಉದ್ಘಾಟಿಸಿದರು.
ಇತಿಹಾಸ ಹೊಂದಿರುವ ಕಿತ್ತೂರು ಕೋಟೆ ಹಾಗೂ ಕಿತ್ತೂರು ಇತಿಹಾಸಕ್ಕೆ ಸಂಬಂಧಪಟ್ಟ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಿ ಕಿತ್ತೂರು ಕೋಟೆಯನ್ನು ವೀಕ್ಷಿಸಲು ಬರುವ ಪ್ರೇಕ್ಷಕರನ್ನು ಕಿತ್ತೂರು ಇತಿಹಾಸದ ಬಗ್ಗೆ ಬಿಂಬಿಸುವ ಕಾರ್ಯಗಳಾಗಬೇಕು ಎಂದು ತಿಳಿಸಿದರು.
ಕಿತ್ತೂರು ಪ್ರಾಧೀಕಾರ  ಅಭಿವೃದ್ಧಿಗೆ ಸಂಬಂಧಪಟ್ಟ  ಅನುದಾನವನ್ನು ಕಿತ್ತೂರು ಇತಿಹಾಸಕ್ಕೆ ಸಂಬಂಧಪಟ್ಟ ಸ್ಥಳಗಳನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಕಾರ್ಯಗಳು ಆಗಬೇಕು. ಮುಂಬರುವ ದಿನಗಳಲ್ಲಿ ರಾಣಿ ಚನ್ನಮ್ಮಾಜಿಯ ಇತಿಹಾಸವನ್ನು ಹೆಚ್ಚಿನ ರೀತಿಯಲ್ಲಿ ಬಿಂಬಿಸುವ ಕಾರ್ಯಗಳಾಗುತ್ತವೆ. ಪ್ರಾಧಿಕಾರದ ಹಣವನ್ನು ಯಾವುದೇ ರೀತಿಯಲ್ಲಿ ಕಿತ್ತೂರು ಪಟ್ಟಣಕ್ಕೆ ಸೀಮಿತವಾದ ಕಾರ್ಯಗಳಿಗೆ ಉಪಯೋಗಿಸದೆ. ಕೇವಲ ಕಿತ್ತೂರು ಪ್ರಾಧಿಕಾರಕ್ಕೆ ಸಂಬಂಧಪಟ್ಟ ಕಾರ್ಯಗಳಿಗೆ ಮಾತ್ರ ಹಣ ಬಳಕೆಯಾಗುತ್ತಿದೆ ಎಂದು ತಿಳಿಸಿದರು.
ಕಿತ್ತೂರು ಅಭಿವ್ರದ್ದಿ ಪ್ರಾಧೀಕಾರದ ಆಯುಕ್ತರಾದಪ್ರಭಾವತಿ ಫಕೀರಪೂರ ಮಾತನಾಡಿ. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರವು ಪ್ರಾರಂಭವಾದ ದಿನಗಳಿಂದ ಇದುವರೆಗೆ ಬೈಲಹೊಂಗಲ ತಾಲೂಕಿನಲ್ಲಿ ಇದ್ದ ಪ್ರಾಧಿಕಾರ ಕಚೇರಿಯನ್ನು ಕಿತ್ತೂರು ತಾಲೂಕಿಗೆ ತರುವಲ್ಲಿ ಶಾಸಕರ ಪ್ರಯತ್ನದಿಂದ ಕಿತ್ತೂರು ಪಟ್ಟಣದಲ್ಲಿಯೇ ಕಚೇರಿಯ ಉದ್ಘಾಟನೆಯಾಗಿದ್ದು ನಮ್ಮೆಲ್ಲರಿಗೂ ಸಂತೋಷದ ವಿಷಯ. ಕಿತ್ತೂರು ಇತಿಹಾಸಕ್ಕೆ ಸಂಬಂಧಪಟ್ಟಂತೆ ಎಲ್ಲ ಕಾರ್ಯಗಳನ್ನು ಹೆಚ್ಚಿನ ಮುತವರ್ಜಿ ವಹಿಸಿ ಐತಿಹಾಸಿಕ ಕಿತ್ತೂರು ಇತಿಹಾಸವನ್ನು ಬಿಂಬಿಸುವ ಕಾರ್ಯಗಳನ್ನು ಮಾಡಲಾಗುವುದು ಎಂದು ಹೇಳಿದರು.
ಸದರಿ ಕಾರ್ಯಕ್ರಮದಲ್ಲಿ  ತಹಶೀಲ್ದಾರರಾದ ಕಲಗೌಡ ಪಾಟೀಲ, ಕಿತ್ತೂರ ಪಟ್ಟಣ ಪಂಚಾಯತಿಯ ಅಧ್ಯಕ್ಷರಾದ ಜೈಸಿದ್ಧರಾಮ ಮಾರಿಹಾಳ, ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು. ಪಟ್ಟಣ ಪಂಚಾಯತಿಯ ಸರ್ವ ಸದಸ್ಯರು, ಆಯುಕ್ತರ ಕಾರ್ಯಾಲಯದ ಹಾಗೂ ತಹಶೀಲ್ದಾರ ಕಚೇರಿ ಸಿಬ್ಬಂದಿಗಳು ಮತ್ತು ಕಿತ್ತೂರ ಹಾಗೂ ಸುತ್ತಮುತ್ತಲಿನ ಗಣ್ಯರು ಹಾಜರ ಇದ್ದರು.
WhatsApp Group Join Now
Telegram Group Join Now
Share This Article