ನೇಸರಗಿ. ಭಾರತ ದೇಶ ಗ್ರಾಮಗಳ ದೇಶ ಅಗಿದ್ದು ರೈತರು, ಬಡವರ ಮೂಲ ಕೇಂದ್ರ ಅಗಿದ್ದು ಅದಕ್ಕಾಗಿ ಆ ಗ್ರಾಮಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿ ಅಲ್ಲಿನ ರಸ್ತೆ, ಚರಂಡಿ, ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸತತವಾಗಿ ಪ್ರಯತ್ನ ಮಾಡುತ್ತೇನೆ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಹೇಳಿದರು.
ಅವರು ಬುಧವಾರದಂದು ಕಿತ್ತೂರು ಮತಕ್ಷೇತ್ರದ ಮುರಕಿಭಾವಿ ಗ್ರಾಮದಲ್ಲಿ ಪಿ ಡಬ್ಲು ಡಿ ರಸ್ತೆಯಿಂದ ಮುಖ್ಯ ಕಾಲೋನಿವರೆಗೆ 22 ಲಕ್ಷ ರೂಪಾಯಿಗಳ ಅನುಧಾನದ ಸಿ ಸಿ ರಸ್ತೆ ಕಾಮಗಾರಿ, ಹಣಬರಹಟ್ಟಿ ಕ್ರಾಸ್ ನಿಂದ ಹಣಬರಹಟ್ಟಿ ಗ್ರಾಮದವರೆಗೆ 1 ಕೋಟಿ ರೂಪಾಯಿಗಳ ಅನುಧಾನದಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣ ಕಾಮಗಾರಿ, ಹಾಗೂ ಹಣಬರಹಟ್ಟಿ ಪ್ರಗತಿ ಕಾಲನಿ ಯೋಜನೆಯಡಿಯಲ್ಲಿ 8 ಲಕ್ಷ ರೂಪಾಯಿಗಳ ಸಿ ಸಿ ರಸ್ತೆ ನಿರ್ಮಾಣ ಕಾಮಗಾರಿ, ಮತ್ತು ವಣ್ಣೂರ ಗ್ರಾಮದ ವಿಠ್ಠಲ ಮಂದಿರದ ಹತ್ತಿರ ಚರಂಡಿ ನಿರ್ಮಾಣಕ್ಕೆ 7 ಲಕ್ಷ ರೂಪಾಯಿಗಳ ಅನುಧಾನದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಸಚಿನ ಪಾಟೀಲ, ಅಡಿವಪ್ಪ ಮಾಳನ್ನವರ, ರವಿ ಸಿದ್ದಮ್ಮಣ್ಣವರ,ಮಂಜುನಾಥ ಹುಲಮನಿ, ಮನೋಜ ಕೆಳಗೇರಿ, ಬಸವರಾಜ ಚಿಕ್ಕನಗೌಡರ, ಸುರೇಶ ಅಗಸಿಮನಿ, ಕಾಶಿಮ ಜಮಾದಾರ, ಈರಪ್ಪ ಉಳವಿ, ಗಂಗಪ್ಪ ಉಳವಿ, ಸಂತೋಷ ಉಳವಿ, ಈರನಗೌಡ ಪಾಟೀಲ, ಬಾಬು ಸೋಮನಟ್ಟಿ, ಬಸಪ್ಪ ಬಾಗೇವಾಡಿ, ಯಲ್ಲಪ್ಪ ಮುದ್ದನವರ, ಬಸವನೆಪ್ಪ ಗೌಡರ, ಭರತೇಶ ಮಲ್ಲಾಪೂರ್, ದೊಡ್ಡಗೌಡ ಪಾಟೀಲ, ಶಿದ್ರಾಮ್ ಬಿರಾಪುರ, ಶಿವಾನಂದ ರುದ್ರನಾಯ್ಕರ, ಬಸಪ್ಪ ರಾಮದುರ್ಗ, ವಿಠ್ಠಲ ಸುರಣ್ಣವರ, ಹುಸೇನ್ ಕಿಲ್ಲೆದಾರ, ಪುಂಡಲೀಕ ಕೋಲಕಾರ, ರಾಮಸಿದ್ದ ಕಡಬಿ, ಯಮನಪ್ಪ ಕೋಲಕಾರ, ಶಿವಪುತ್ರ ಗೌಡರ, ಹೊನ್ನನಾಯ್ಕ ಪಾಟೀಲ, ವೀರಪ್ಪ ಗೋಡಬೆ,ಮಾಯಾದ್ರಿ ಪೂಜೇರಿ, ಎ ಇ ಇ ರಾಮಣ್ಣ ಕೆ, ಎ ಇ ರಾಘವೇಂದ್ರ ಆರ್ ಕೆ ಸೇರಿದಂತೆ ಮುರಕಿಭಾವಿ, ಹಣಬರಹಟ್ಟಿ, ವಣ್ಣೂರ ಗ್ರಾಮಗಳ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.