ನೇಸರಗಿ. ಗ್ರಾಮೀಣ ಭಾಗದ ಜನರ ಮೂಲಭೂತ ಸೌಕರ್ಯಗಳಿಗೆ ಮೊದಲ ಆದ್ಯತೆ ನೀಡಿ ಕೆಲಸ ಕಾರ್ಯಗಳನ್ನು ಕೈಗೊಳ್ಳುವುದರ ಮೂಲಕ ಸಾರ್ವಜನಿಕರ ಸೇವೆಗೆ ನನ್ನ ಮೊದಲ ಆದ್ಯತೆ ನೀಡುತ್ತೇನೆ ಎಂದು ಚನ್ನಮ್ಮನ ಕಿತ್ತೂರ ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ಗ್ರಾಮದ 3 ಕಡೆಗಳಲ್ಲಿ ಜಿಲ್ಲಾ ಪಂಚಾಯತ ಅನುಧಾನದಲ್ಲಿ 65.20 ಲಕ್ಷ ರೂಪಾಯಿಗಳ ಸಿ ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ ಜನರಿಗೆ ಬೇಕಾಗಿರುವ ರಸ್ತೆ, ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಇನ್ನು ಅನೇಕ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಕೆಲಸ ಕಾರ್ಯಗಳನ್ನು ಮಾಡಲಾಗುವದೆಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಸಚಿನ ಪಾಟೀಲ, ಆಡಿವಪ್ಪ ಮಾಳನ್ನವರ, ಎ ಇ ಇ ಆರ್ ಪಿ. ಖಾನಾಪುರ, ಪಿ ಡಬ್ಲು ಡಿ ಅಧಿಕಾರಿ ಬಸವರಾಜ ಹಲಗಿ, ಬಾಳಪ್ಪ ಮಾಳಗಿ, ಗ್ರಾಂ ಪಂ ಅಧ್ಯಕ್ಷ ನಿಂಗಪ್ಪ ಮಾಳನ್ನವರ,ಎ ಪಿ ಎಮ್ ಸಿ ಮಾಜಿ ಅಧ್ಯಕ್ಷ ಬರಮಣ್ಣ ಸತ್ತೇನ್ನವರ, ಮಲ್ಲಿಕಾರ್ಜುನ ಕಲ್ಲೋಳಿ, ನಿಂಗಪ್ಪ ತಳವಾರ, ನಜೀರ ತಹಶೀಲ್ದಾರ, ಯಮನಪ್ಪ ಪೂಜೇರಿ, ಕಂಡ್ರಿ, ಸುರೇಶ ಅಗಸಿಮನಿ, ಮಹಾಂತೇಶ ಸತ್ತಿಗೇರಿ, ಸತ್ತಾರ ಮೊಖಾಸಿ, ರಾಯನಗೌಡ ಪಾಟೀಲ, ಶಿವನಪ್ಪ ಮಾದೇನ್ನವರ, ಶ್ರೀಮತಿ ಗೀತಾ ಕಂಡ್ರಿ, ಶ್ರೀಮತಿ ಸಿದ್ದವ್ವ ಚಿಗರಿ, ಶ್ರೀಮತಿ ಶಕುಂತಲಾ ಹಮ್ಮನವರ , ಅಧಿಕಾರಿ ಮಹೇಶ ಹೂಲಿ, ಗುತ್ತಿಗೆದಾರರಾದ ಮಂಜುನಾಥ ಹುಲಮನಿ, ಶಿವಾನಂದ ಮೆಟ್ಯಾಳ, ಕರೆಪ್ಪ ಠಕ್ಕನವರ,ಬಿ ಎಮ್. ಪಾಟೀಲ ಸೇರಿದಂತೆ ಗ್ರಾಮ ಪಂಚಾಯತ ಸದಸ್ಯರು, ಅಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.