ಕಿತ್ತೂರು ನಾಡಿನ ಅಭಿವೃದ್ಧಿಯ ಹರಿಕಾರ, ಹೆಮ್ಮೆಯ ಶಾಸಕ ಬಾಬಾಸಾಹೇಬ ಪಾಟೀಲ 

Ravi Talawar
ಕಿತ್ತೂರು ನಾಡಿನ ಅಭಿವೃದ್ಧಿಯ ಹರಿಕಾರ, ಹೆಮ್ಮೆಯ ಶಾಸಕ ಬಾಬಾಸಾಹೇಬ ಪಾಟೀಲ 
WhatsApp Group Join Now
Telegram Group Join Now

ಚನ್ನಮ್ಮನ ಕಿತ್ತೂರು: ಭಾರತ ದೇಶದ ಪ್ರಥಮ ಹೋರಾಟಗಾರ್ತಿ ತಾಯಿ ಚನ್ನಮ್ಮಾಜಿಯ ಬ್ರಿಟಿಷರ ವಿರುದ್ಧ ಹೋರಾಡಿ ಗೆದ್ದ ಮಹಿಳೆಯ  ನಾಡು, ಸಂಗೊಳ್ಳಿ ಬಂಟ ರಾಯಣ್ಣನ ಪರಾಕ್ರಮ ಸಾರುವ ಕಿತ್ತೂರು ಚನ್ನಮ್ಮನ ಕ್ಷೇತ್ರದ ಹೆಮ್ಮೆಯ ಶಾಸಕ ಬಾಬಾಸಾಹೇಬ ಪಾಟೀಲ ಅವರು ಕಳೆದ ಎರಡುವರೆ ವರ್ಷಗಳ ಹಿಂದೆ ಶಾಸಕರಾಗಿ ಆಯ್ಕೆ ಆಗಿ, ಕ್ಷೇತ್ರದ ಆರು ಜಿಲ್ಲಾ ಪಂಚಾಯತ  ಕ್ಷೇತ್ರಗಳಾದ ನೇಸರಗಿ, ನಾಗನೂರ, ಸಂಪಗಾಂವ, ಕಾದ್ರೊಳ್ಳಿ, ಖೋದಾನಪುರ  ಕ್ಷೇತ್ರಗಳ  ಮೂಲಭೂತ ಸೌಕರ್ಯಗಳಾದ ರಸ್ತೆ, ಗ್ರಾಮೀಣ ರಸ್ತೆ, ವಠಾರ ರಸ್ತೆ, ಒಳಚರಂಡಿ ವ್ಯವಸ್ಥೆ, ಎಲ್ಲ ಗ್ರಾಮಗಳಿಗೆ ದೇವಸ್ಥಾನ ಅಭಿವೃದ್ಧಿಗೆ, ಸಮುದಾಯ ಭವನ ನಿರ್ಮಾಣಕ್ಕೆ ಸಾಕಷ್ಟು ಅನುಧಾನ ಒದಗಿಸಿದ್ದಾರೆ ಶಾಸಕ ಬಾಬಾಸಾಹೇಬ ಪಾಟೀಲ ಅವರು. ನೇಸರಗಿ ಭಾಗದ ಬಹು ದಿನಗಳ ಯೋಜನೆ ಶ್ರೀ ಚನ್ನವೃಷಬೆಂದ್ರ ಯಾತ ನೀರಾವರಿಗೆ 200 ಕೋಟಿ ರೂಪಾಯಿಗಳ ಅನುಧಾನ ಒದಗಿಸಿ ಕಾಮಗಾರಿ ಪ್ರಾರಂಭವಾಗಲು ಶ್ರಮಿಸಿದ್ದಾರೆ. ನೇಸರಗಿ ಗ್ರಾಮದಿಂದ ಜತ್ತ ಜಂಬೋಟಿ ಬೈಲವಾಡ ವರೆಗೆ ಕೆಲಸ ಪ್ರಗತಿಯಲಿದೆ. ನೇಗಿನಹಾಳ ಸಂಪಗಾಂವ ರಸ್ತೆ, ಇನ್ನು ಅನೇಕ ಗ್ರಾಮಗಳ ರಸ್ತೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಮನವಲಿಸಿ ಕೆಲಸ ತಂದಿದ್ದಾರೆ.

ಶಿಕ್ಷಣ ಪ್ರೇಮಿ ಶಾಸಕ ಬಾಬಾಸಾಹೇಬ ಪಾಟೀಲ :ಕ್ಷೇತ್ರದ ಅನೇಕ ಅಂಗನವಾಡಿ ನೂತನ  ಶಾಲಾ ಕಟ್ಟಡ ನಿರ್ಮಾಣ, ದುರಸ್ತಿಗೆ  ಹೆಚ್ಚಿನ ಆಸಕ್ತಿ ವಹಿಸಿ  ಕೆಲಸ ಮಾಡಿದ್ದಾರೆ. ಪ್ರಾಥಮಿಕ ಶಾಲಾ ಕಟ್ಟಡ, ಗಣಕೀಕರಣ ಶಿಕ್ಷಣ, ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ.ಪ್ರೌಢ ಶಿಕ್ಷಣ ಹಾಗೂ ಪದವಿ ಹಾಗೂ ಪದವಿ ಪೂರ್ವ ಕಾಲೇಜು ಅಭಿವೃದ್ಧಿಗೆ ನಿರಂತರವಾಗಿ ಕಾರ್ಯ ಮಾಡಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಕ್ಷೇತ್ರದಲ್ಲಿ ಶಿಕ್ಷಣ ಜಾಗ್ರತಿ ಅಭಿಯಾನ ನಡೆಸಿ,ಶಿಕ್ಷಣದಿಂದ ದೇಶದ ಅಭಿವೃದ್ಧಿ ಎಂಬಂತೆ ತಮ್ಮ ಹುಟ್ಟುಹಬ್ಬದ ದಿನದಂದು ಎಲ್ಲ ಶಾಲಾ ವಿದ್ಯಾರ್ಥಿಗಳಿಗೆ ನೋಟ ಬುಕ್ ಪೆನ್ನು, ಬ್ಯಾಗ್ ವಿತರಿಸಿ ಶಿಕ್ಷಣ ಪ್ರೇಮಿ ಆಗಿದ್ದಾರೆ ಬಾಬಾಸಾಹೇಬ ಪಾಟೀಲರು.
 ಚನ್ನಮ್ಮನ ಕಿತ್ತೂರು ಪಟ್ಟಣದ ಅಭಿವೃದ್ಧಿಗೆ ಒತ್ತು ಕೊಟ್ಟ ಧಣಿ ಬಾಬಾಸಾಹೇಬರ :ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ  30 ಕೋಟಿ ಅನುಧಾನ ತರುವಲ್ಲಿ ಪ್ರಮುಖ ಪಾತ್ರ ವಹಿಸಿ ಟೀಮ್ಸ್ ಪಾರ್ಕ್ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. 5.94 ಕೋಟಿ ರೂಪಾಯಿಗಳ ಅನುಧಾನದಲ್ಲಿ ರಸ್ತೆ ಅಗಲೀಕರಣ, ರಸ್ತೆ ನಿರ್ಮಾಣ, ಕೋಟೆ ದೀಪಾಲಂಕಾರ, ತಾಲೂಕಾ ಮಟ್ಟದ ಹಲವು ಕಚೇರಿಗಳ ಪ್ರಾರಂಭ ಮಾಡಲು ನಿರಂತರ ಶ್ರಮ ವಹಿಸಿದ್ದಾರೆ. ಹೋದ ವರ್ಷ ಪ್ರತಿಷ್ಠೆಯ ಕಿತ್ತೂರು ಉತ್ಸವಕ್ಕೆ 5 ಕೋಟಿ ಅನುಧಾನ, ಪ್ರಸಕ್ತ ವರ್ಷ ರಂಗು ರಂಗಿನ ಕಿತ್ತೂರು ಉತ್ಸವಕ್ಕೆ 5 ಕೋಟಿ ರೂಪಾಯಿಗಳ ಅನುಧಾನ ತಂದು ಬರುವ ಅಕ್ಟೋಬರ್ 23,24,25 ರಂದು ನಡೆಯುವ ಕಿತ್ತೂರು ಉತ್ಸವಕ್ಕೆ ಕ್ಷಣಗಣನೆ ನಡೆಯುತ್ತಿದ್ದು, ಉತ್ಸವದಲ್ಲಿ ನಾಡಿನ, ದೇಶದ ಕಲಾವಿಧರು ಆಗಮಿಸಲಿದ್ದಾರೆ. ಕೋಟೆ ಆವರಣ ಒಳಗಡೆ ಬೃಹತ್ ಸಭಾಂಗಣ, ಸಾರ್ವಜನಿಕರಿಗೆ ಊಟದ ವ್ಯವಸ್ಥೆ, ಮಾಧ್ಯಮ ಕೊಠಡಿ, ಕಲಾವಿದರ ಕೊಠಡಿ ಹೀಗೆ ಅದ್ದೂರಿ ಕಿತ್ತೂರು ಉತ್ಸವಕ್ಕೆ ಹಗಲಿರುಳು ಶ್ರಮಿಸುತ್ತಿದ್ದಾರೆ.
 ಶಾಸಕರಿಗೆ ಪತ್ನಿ ರೋಹಿಣಿ ಪಾಟೀಲ ಸಾಥ್: ಬಾಬಾಸಾಹೇಬ ಪಾಟೀಲ ಅವರು ಶಾಸಕರಾಗಲು ಅತೀ ಹೆಚ್ಚು ಪರಿಶ್ರಮ ಪಟ್ಟವರು ಅವರ ಧರ್ಮಪತ್ನಿ ಶ್ರೀಮತಿ ರೋಹಿಣಿ ಪಾಟೀಲ ಎಂದರೆ ತಪ್ಪಾಗದು  ಶಾಸಕರಾದ ನಂತರ ಪತಿಯ ಎಲ್ಲ ಕಾರ್ಯಗಳಿಗೆ ಸಹಾಯ ಸಹಕಾರ ನೀಡಿ, ಕ್ಷೇತ್ರದ ತುಂಬೆಲ್ಲ ಸಂಚರಿಸಿ ಮಹಿಳೆಯರೊಂದಿಗೆ ಬೆರೆತು, ಅವರಿಗೆ ಸ್ಪಂದಿಸಿ ಕೆಲಸ ಕಾರ್ಯ ಮಾಡಿ ಪತಿ ಬಾಬಾಸಾಹೇಬರಿಗೆ ಬೆನ್ನುಲುಬಾಗಿ ಕಾರ್ಯ ಮಾಡಿ ಜನರ ಪ್ರೀತಿಯ ಅಕ್ಕನಾಗಿ ಕೆ ಪಿ ಸಿ ಸಿ ಸದಸ್ಯರಾಗಿ ಸಮಾಜದ ಅನೇಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಶ್ರೀಮತಿ ರೋಹಿಣಿ ಪಾಟೀಲ.
 ಅಣ್ಣ ಬಾಬಾಸಾಹೇಬರ ನೆರಳಲ್ಲಿ ಜಿಲ್ಲಾ ಸಹಕಾರಿ ರಂಗದಲ್ಲಿ ಬೆಳೆಯುತ್ತಿರುವ ಸಹೋದರ ನಾನಾಸಾಹೇಬ ಪಾಟೀಲ.ಅಣ್ಣ ಬಾಬಾಸಾಹೇಬ ಪಾಟೀಲ ಅವರು ಶಾಸಕರಾಗುವ ಮೊದಲು ಮತ್ತು ನಂತರ ಅಣ್ಣನ ನೆರಳಿನಲ್ಲಿ ಸರಳ ವ್ಯಕ್ತಿತ್ವವನ್ನು ಹೊಂದಿ ಸಜ್ಜನರಾಗಿ ಕ್ಷೇತ್ರದಲ್ಲಿ ಗುರುತಿಸಿಕೊಂಡು ಅಣ್ಣನ ಕೆಲಸ ಕಾರ್ಯಗಳಿಗೆ ಸದಾ ಬೆನ್ನೆಲುಬಾಗಿ ನಿಂತು ಸಹಕಾರಿ ಕ್ಷೇತ್ರದಲ್ಲಿ ಗುರುತಿಸಿಕೊಂಡು ದಿ 19 ರಂದು ನಡೆದ ಜಿದ್ದಾಜಿದ್ದಿನ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ಚುನಾವಣೆಯಲ್ಲಿ   ಮುನ್ನಡೆ ಸಾದಿಸಿ ಒಂದು ಮತದ ಮುನ್ನಡೆಯೊಂದಿಗೆ ಚನ್ನಮ್ಮನ ಕಿತ್ತೂರು ತಾಲೂಕಿನ ಪ್ರಥಮ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾಗಿ ಆಯ್ಕೆ ಅಗಲಿದ್ದಾರೆ ನಾನಾಸಾಹೇಬ ಪಾಟೀಲ ಅವರು.
WhatsApp Group Join Now
Telegram Group Join Now
Share This Article