ಪಾಲಕರ ಕನಸನ್ನು ನನಸು ಮಾಡುವಂತೆ ವಿದ್ಯಾಭ್ಯಾಸ ಮಾಡಿ: ಬಾಬಾಸಾಹೇಬ ಪಾಟೀಲ

Ravi Talawar
ಪಾಲಕರ ಕನಸನ್ನು ನನಸು ಮಾಡುವಂತೆ ವಿದ್ಯಾಭ್ಯಾಸ ಮಾಡಿ: ಬಾಬಾಸಾಹೇಬ ಪಾಟೀಲ
WhatsApp Group Join Now
Telegram Group Join Now
ನೇಸರಗಿ: ನಿಮ್ಮ ತಂದೆ ತಾಯಿಗಳು  ನಿಮ್ಮ ಶಿಕ್ಷಣ ಕಲಿಕೆಗೆ  ತೊಂದರೆ ಅನುಭವಿಸಿ ಆದರೂ ಇವರು ನಮ್ಮ ಮಕ್ಕಳು ಚೆನ್ನಾಗಿ ಓದುತ್ತಿದ್ದಾರೆ ಅವರು ಮುಂದೆ ಚೆನ್ನಾಗಿ ಜೀವನ ನಡೆಸುತ್ತಾರೆ, ಸಮಾಜದಲ್ಲಿ ಬೆಳವಣಿಗೆ ಹೊಂದಿ ನಮಗೆ ಕೀರ್ತಿ ತರುತ್ತಾರೆ ಎಂಬ ಪಾಲಕರ ನಂಬಿಗೆಗೆ ಮೋಸ ಮಾಡದಿರಿ ಎಂದು ಚನ್ನಮ್ಮನ ಕಿತ್ತೂರ ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ಶನಿವಾರದಂದು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಇದರ ಕಾಲೇಜ ಅಭಿವೃದ್ಧಿ ಸಮಿತಿಯ ಹೊಸ ಸಮಿತಿಯ ಪ್ರಥಮ ಸಭೆಯನ್ನು ಉದ್ದೇಸಿಸಿ ಮಾತನಾಡಿ ಶಾಲೆಗೆ ಬೇಕಾಗ ಆಧುನಿಕ ತಂತ್ರಜ್ಞಾನ, ವಿಡಿಯೋ ಹಾಲ್, ಸಂಯೋಜನೆ ಹಾಲ್, ಉತ್ತಮ ಸಭಾಂಗಣ, ಸಭೆಯ ಹಾಲ್, ಪಿಠೋಪಕರಣ ಇನ್ನೂ  ಅನೇಕ ಕೆಲಸಗಳಿಗೆ ಅನುಮೋದನೆ ನೀಡಿದ್ದು ಬರುವ ದಿನಗಳಲ್ಲಿ ಸರ್ಕಾರಿ ಪ್ರಾಥಮಿಕ, ಪ್ರೌಢ, ಪಿ ಯು ಸಿ, ಪ್ರಥಮ ದರ್ಜೆ ಸರ್ಕಾರಿ  ಶಿಕ್ಷಣ ಸಂಸ್ಥೆಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗಿಂತ ಉನ್ನತ ಮಟ್ಟದಲ್ಲಿ ಬದಲಾವಣೆ ತರುವ ಕನಸಿದ್ದು ಹಂತ ಹಂತವಾಗಿ ಜಾರಿಗೆ ತರಲಾಗುವದು. ಇಂದಿನ ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮಿತವಾಗಿ ಬಳಕೆ ಮಾಡಿಕೊಳ್ಳಿ, ಶಿಕ್ಷಕರು ಭೋಧನೆ ಸದುಪಯೋಗಪಡಿಸಿಕೊಂಡು ಶ್ರಮಪಟ್ಟು ವ್ಯಾಸಂಗ ಮಾಡಿದರೆ ನೀವು ಜೀವನದಲ್ಲಿ ಮುಂದೆ ಬರಲು ಸಾಧ್ಯ. ಮತ್ತು ಕನ್ನಡ ಜೊತೆ ಆಂಗ್ಲ ಮಾಧ್ಯಮ ಬಳಕೆ ಮಾಡಿಕೊಂಡು ತಮ್ಮ ಮುಂದಿನ ಕಾರ್ಯ ಜೀವನ ಯಶಸ್ವಿಯಾಗುತ್ತದೆ. ವಿದ್ಯಾಭ್ಯಾಸ ಸಂದರ್ಭದಲ್ಲಿ ಒತ್ತು ಕೊಟ್ಟು ವ್ಯಾಸಂಗ ಮಾಡದಿದ್ದರೆ  ಮುಂದಿನ ದಿನಗಳಲ್ಲಿ ಬಸ್ ನಿಲ್ದಾಣಗಳಲ್ಲಿ ಅಲೆದಾಡುವ ಪರಿಸ್ಥಿತಿ ನಿರ್ಮಾಣಕ್ಕೆ ಹೋಗದಿರಿ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಕಾಲೇಜು ಪ್ರಾಂಶುಪಾಲರಾದ ಡಾ. ಫಕ್ಕಿರಗೌಡ ಗದ್ದಿಗೌಡರ ಮಾತನಾಡಿ ಪ್ರಸಕ್ತ ಶಾಸಕರು ಶಿಕ್ಷಣ ಪ್ರೇಮಿಗಳಾಗಿದ್ದು ನಮ್ಮ ಸುದೈವ, ಅವರನ್ನು ಬೆಟ್ಟಿಯದಾಗ ಕಾಲೇಜಿಗೆ ಸಂಬಂದಿಸಿದ ಕೆಲಸ ಕಾರ್ಯಗಳನ್ನು ಮಾಡಿಕೊಟ್ಟಿದ್ದಾರೆ. ಪ್ರತಿಯೊಂದು ಕೆಲಸಗಳನ್ನು ಅವರು ಗಮನಕ್ಕೆ ತಂದಾಗ ನಿಗದಿತ ಅವದಿಯೊಳಗೆ ಮಾಡುವ ನೇರ ಮಾತು ಹೇಳಿದ್ದಾರೆ ಎಂದರು.
ಈ  ಕಾರ್ಯಕ್ರಮದಲ್ಲಿ ಕಾಲೇಜು ಸುಧಾರಣೆ ಸಮಿತಿ ಉಪಾಧ್ಯಕ್ಷರಾದ ಆಡಿವಪ್ಪ ಮಾಳನ್ನವರ, ಯುವ ಮುಖಂಡರಾದ ಸಚಿನ ಪಾಟೀಲ, ಮಾಜಿ ಜಿ ಪಂ. ಸದಸ್ಯರು, ನೇಸರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಪ್ಪ ಅರಿಕೇರಿ, ಬಾಳಪ್ಪ ಮಾಳಗಿ,ಬಸವರಾಜ ಚಿಕ್ಕನಗೌಡರ, ಸುರೇಶ ಕಂಡ್ರಿ, ಕಾಲೇಜು ಸುಧಾರಣೆ ಸಮಿತಿ ಸದಸ್ಯರಾದ ನಿಂಗಪ್ಪ ತಳವಾರ, ಚನಗೌಡ ಪಾಟೀಲ, ನಜೀರ ತಹಶೀಲ್ದಾರ, ರಾಯನಗೌಡ ಪಾಟೀಲ, ವಿನಾಯಕ ಮಾಸ್ತಮರಡಿ, ಸುರೇಶ ಲೆಂಕನಟ್ಟಿ, ಯಮನಪ್ಪ ಪೂಜೇರಿ,, ಮಂಜು ಮದೆನ್ನವರ, ಪುಂಡಲೀಕ ಹಮ್ಮನವರ, ಅನ್ವರ ಮನಿಯಾರ, ಸುನಿಲ ಪಿಸೆ, ಶ್ರೀಮತಿ ಉಷಾ ನವಲಗಟ್ಟಿ, ಶ್ರೀಮತಿ ಸಿದ್ದವ್ವ ಚಿಗರಿ, ಕಾಲೇಜು ಭೋದಕ ಭೋದಕೇತ್ತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article