ಎಮ್ ಕೆ ಹುಬ್ಬಳ್ಳಿ: ಕ್ಷೇತ್ರದ ಗ್ರಾಮಗಳ ದೇವಾಲಯದ ಅಭಿವೃದ್ಧಿಗೆ ಮತ್ತು ದೇವಸ್ಥಾನ ಕಟ್ಟಡ ಕಾಮಗಾರಿಗೆ ಅನುಧಾನ ನೀಡಲಾಗುತ್ತಿದ್ದು ಎಲ್ಲ ವಿಭಾಗಗಳಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುವದೆಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.ಅ
ವರು ಬುಧವಾರದಂದು ಸಮೀಪದ ಹೊಳಿಹೊಸೂರ ಗ್ರಾಮದಲ್ಲಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಯೋಜನೆಯ 4202-04-101-0-02 ಲೆಕ್ಕ ಶೀರ್ಷಿಕೆಯಲ್ಲಿ ನಿರ್ಮಿಸುತ್ತಿರುವ 3 ಕೋಟಿ ರೂಪಾಯಿಗಳ ಅನುಧಾನದಲ್ಲಿ ಶ್ರೀ ಗ್ರಾಮದೇವಿ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಈ
ಸಂದರ್ಭದಲ್ಲಿ ಹೊಳಿಹೊಸೂರ ಗ್ರಾಮದ ಮುಖಂಡರು, ಹಿರಿಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.