ಬೈಲಹೊಂಗಲ.ಪ್ರಸಕ್ತ ಬೆಳಗಾವಿ ಜಿಲ್ಲೆಯಲ್ಲಿ ಹಾಗೂ ರಾಜ್ಯದ ತುಂಬ ಉಗ್ರ ಸ್ವರೂಪ ಪಡೆದಿರುವ ರೈತ ಸಂಘದ ಮತ್ತು ರೈತರ ಬೇಡಿಕೆಗಾಗಿ ಒಂದು ಟನ ಕಬ್ಬಿಗೆ ರೂ. 3500/- ಸರ್ಕಾರದಿಂದ ದರ ನಿಗದಿ ಮಾಡಲು ಹೋರಾಟ ಮಾಡುತ್ತಿರುವ ರೈತ ಸಂಘದ ಹೋರಾಟವು ಯೋಗ್ಯವಾಗಿದ್ದು ಅದಕ್ಕಾಗಿ ಸರ್ಕಾರ ರೈತರ ಪರವಾಗಿ ಸಿ ಎಮ್ ಸಿದ್ರಾಮಯ್ಯ ಅವರು
ತುರ್ತು ರೈತರ ಸಭೆಯನ್ನು ಕರೆದು ಅವರ ಸಮಸ್ಯೆಗೆ ಪರಿಹಾರ ನೀಡುವ ಕೆಲಸ ಸಿ ಎಮ್ ಸಿದ್ರಾಮಯ್ಯ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಮಾಡಲು ವಿನಂತಿ ಮಾಡುತ್ತೇನೆ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ಹೇಳಿದರು.
ಅವರು ಸೋಮವಾರದಂದು ಪಟ್ಟಣದ ಚನ್ನಮ್ಮ ಸರ್ಕಲ್ ಹತ್ತಿರ ರೈತರು ಆಯೋಜನೆ ಮಾಡಿರುವ ಕಬ್ಬಿಗೆ ರೂ. 3500/- ನೀಡಲು ದರ ನಿಗದಿ ಮಾಡುವಂತೆ ಸರ್ಕಾರ ಕ್ರಮ ಕೈಗೊಳ್ಳಲು ಒತ್ತಾಯಿಸಿ ಧರಣಿ ಸತ್ಯಾಗ್ರಹ ಹೋರಾಟ ಸ್ಥಳಕ್ಕೆ ಬೇಟಿ ನೀಡಿ ಮಾತನಾಡಿ ಈ ಕುರಿತು ನಾನು ಈಗಾಗಲೇ ಮುಖ್ಯ ಮಂತ್ರಿ ಸಿದ್ರಾಮಯ್ಯ ಹಾಗೂ ಸಕ್ಕರೆ ಸಚಿವ ಅವರಲ್ಲಿ ಪತ್ರದ ಮೂಲಕ ಮನವಿ ಮಾಡಿದ್ದೇನೆ. ಆದಷ್ಟು ಬೇಗ ರೈತರ ಬೇಡಿಕೆ ಈಡೇರಿಸಬೇಕು ಮತ್ತು ನಾನು ಎಂದಿಗೂ ರೈತರ ಪರವಾಗಿದ್ದೇನೆ ಎಂದರು.
ಮಾಜಿ ಶಾಸಕ ವಿ ಆಯ ಪಾಟೀಲ ಮಾತನಾಡಿ ರೈತ ಸಂಘದ ಹೋರಾಟ ಕೆಲವು ದಿನಗಳಿಂದ ಪ್ರಯೋಜನಕಾರಿಯಾಗಿ ಒಗ್ಗಟ್ಟು ಪ್ರದರ್ಶನ ಕಾಣತಾ ಇರಲಿಲ್ಲ ಆದರೆ ಪ್ರಸಕ್ತ ಹೋರಾಟ ನೋಡಿದರೆ ರೈತ ಸಂಘದಲ್ಲಿ ಚೈತನ್ಯ ಬಂದಿದೆ.ಸರ್ಕಾರದ ಈ ರೈತರ ಸಮಸ್ಯೆಗೆ ಗಮನ ಹರಿಸಿ ರೈತರ ಪರವಾಗಿ ಕೆಲಸ ಮಾಡಿ ದರ ನಿಗದಿ ಮಾಡಬೇಕು ಎಂದರು.
ಜೆ ಡಿ ಎಸ್ ಮುಖಂಡ ಶಂಕರ ಮಾಡಲಗಿ ಮಾತನಾಡಿ ಸರ್ಕಾರ ಎಚ್ಛೆಟ್ಟು ರೈತರ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವದೆಂದರು.
ಇದೆ ಸಂದರ್ಭದಲ್ಲಿ ಈ ರೈತರ ಹೋರಾಟಕ್ಕೆ ವಕೀಲರ ಸಂಘ ಬೆಂಬಲ ಸೂಚಿಸಿತು.
ಈ ರೈತ ಹೋರಾಟದಲ್ಲಿ ಶಶಿಕಾಂತ ನಾಯ್ಕ, ರೈತ ಹೋರಾಟಗಾರ, ರೈತ ಸೇವಾ ಸಂಘದ ಅಧ್ಯಕ್ಷ ಶಂಕರ ಬೋಳನ್ನವರ, ಭೀರಪ್ಪಾ ದೇಶನೂರ, ಮಲ್ಲಿಕಾರ್ಜುನ ಹುಂಬಿ, ಶಿವರಂಜನ ಬೋಳನ್ನವರ, ರಫೀಕ್ ಬಡೇಘರ, ಬಸವರಾಜ ಮೋಕಾಸಿ, ಬಸನಗೌಡ ಪಾಟೀಲ, ಬಸವರಾಜ ಉಪ್ಪಾರ, ಸುರೇಶ ವಾಲಿ, ಮಹಾಂತೇಶ ಕಮತ, ಸೋಮಪ್ಪ ಬೆಳಕೂಡ, ಬಸವರಾಜ ಹಣ್ಣಿಕೇರಿ,ಮಹಾಂತೇಶ ಗೌರಿ, ಶ್ರೀಕಾಂತ ಶಿರಹಟ್ಟಿ, ದಾಸಪ್ಪಗೌಡ ಕುಸಲಾಪುರ, ಸುರೇಶ ಹೊಳಿ, ವಕೀಲರ ಸಂಘದ ಅಧ್ಯಕ್ಷ ಎಮ್ ಆರ್ ಮೇಳವಂಕಿ, ಉಪಾಧ್ಯಕ್ಷ ಎ ಎಮ್ ಸಿದ್ರಾಮನಿ, ಪಿ ಆರ್ ಮರಕಟ್ಟಿ,ಎಮ್ ಎಮ್ ಮಠದ, ಎಮ್ ವಾಯ್ ಸೋಮಣ್ಣವರ, ಶಶಿಧರ ಚಿಕ್ಕೋಡಿ, ಬಿ ಸಿ ಸಂಗೊಳ್ಳಿ, ಸಂಗಮೇಶ ಸಂಪಗಾಂವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


