ನೇಸರಗಿ. ರಾಮನ ಬಲಗೈ ಬಂಟ ಶ್ರೀ ಆಂಜನೇಯ,ಎಲ್ಲ ಜನಾಂಗದ ಭಕ್ತರ ಆರಾಧ್ಯ ದೈವ ಶ್ರೀ ಮಾರುತಿ ದೇವಸ್ಥಾನ ನಿರ್ಮಿಸುತ್ತಿರುವದು ಹೆಮ್ಮೆಯ ವಿಷಯ ಆಗಿದ್ದು ಮಂದಿರ ನಿರ್ಮಾಣಕ್ಕೆ ನಾನು ಸದಾ ಸಹಕಾರ ನೀಡುತ್ತೇನೆ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ಸಮೀಪದ ಸಂಪಗಾಂವ ಗ್ರಾಮದಲ್ಲಿ ಸುಮಾರು 48.50 ಲಕ್ಷ ರೂಪಾಯಿಗಳ ಸರ್ಕಾರದ ಅನುಧಾನದಲ್ಲಿ ಮತ್ತು ಗ್ರಾಮಸ್ಥರ ಸಹಯೋಗದಲ್ಲಿ ಸುಮಾರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ದೇವಸ್ಥಾನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಅರಭಾವಿ ದುರದುಂಡೇಶ್ವರ ಮಠದ ಪೀಠಾಧಿಪತಿಗಳಾದ ಮ ನಿ ಪ್ರ ಸ್ವ. ಗುರುಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ ಭೂಮಿ ಪೂಜೆಗೆ ಮಳೆರಾಯ ಸ್ವಾಗತ ಮಾಡಿದ್ದು ಶುಭ ಸಂದೇಶ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರರಾದ ಹಣಮಂತ ಶಿರಹಟ್ಟಿ, ಸಂಪಗಾಂವ ಕಟಾಪುರಮಠದ ವೆ ಮೂ. ಚನ್ನಾವೀರ ಮಹಾಸ್ವಾಮಿಗಳು, ಬೈಲಹೊಂಗಲ ಆರಾದ್ರಿಮಠದ ವೇ ಮೂ. ಮಹಾಂತೇಶ ಶಾಸ್ತ್ರೀಗಳು, ಸಂಪಗಾಂವ ಗ್ರಾಮದ ಹಿರಿಯರು, ಎಲ್ಲ ಸಮಾಜದ ಮುಖಂಡರು, ಶ್ರೀ ಮಾರುತಿ ದೇವಸ್ಥಾನ ಟ್ರಸ್ಟ್ ನ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು, ಅಧಿಕಾರಿಗಳು ಉಪಸ್ಥಿತರಿದ್ದರು.