ವಿದ್ಯಾರ್ಥಿಗಳ ಶಿಕ್ಷಣದ ಅಭಿವೃದ್ಧಿಗೆ ಹಲವರ ಪಾತ್ರ: ಬಾಬಾಸಾಹೇಬ ಪಾಟೀಲ

Ravi Talawar
ವಿದ್ಯಾರ್ಥಿಗಳ ಶಿಕ್ಷಣದ ಅಭಿವೃದ್ಧಿಗೆ ಹಲವರ ಪಾತ್ರ: ಬಾಬಾಸಾಹೇಬ ಪಾಟೀಲ
WhatsApp Group Join Now
Telegram Group Join Now

 

ನೇಸರಗಿ.ಫೆ. 20.ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಿನ್ನಡೆಗೆ ಪಾಲಕರು, ಶಿಕ್ಷಕರು, ರಾಜಕಾರಣಿಗಳು, ಶಿಕ್ಷಣ ಭೋಧನಾ  ಮಟ್ಟ ಮತ್ತು ಅನೇಕ  ಕಾರಣಗಳು ಇದ್ದು ಶಿಕ್ಷಣ ಗುಣಮಟ್ಟ ಸುಧಾರಣೆ ಈ ಎಲ್ಲರ ಸಹಾಯ, ಸಹಕಾರ, ಗುಣಮಟ್ಟದ ಶಿಕ್ಷಣ ಭೋಧನೆಯಿಂದ ವಿದ್ಯಾರ್ಥಿಗಳ  ಶಿಕ್ಷಣ ನೀತಿ ಸುಧಾರಣೆ ಆಗುತ್ತದೆ ಎಂದು ಚನ್ನಮ್ಮ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
   ಅವರು ಗುರುವಾರದಂದು  ಮಲ್ಲಾಪೂರ ಕೆ ಎನ್ ಮತ್ತು ನೇಸರಗಿ ಗ್ರಾಮದ ಶ್ರೀ ಗಾಳೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ರೇವಣಸಿದ್ದೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಲಹೊಂಗಲ ಇವರ ಸಹಯೋಗದಲ್ಲಿ ಪಾಲಕರ ಚಿತ್ತ ಮಕ್ಕಳ ಉತ್ತಮ ಫಲಿತಾಂಶದತ್ತ, 2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ಅಭಿವೃದ್ಧಿ, ವಿದ್ಯಾರ್ಥಿ, ಪಾಲಕ, ಪೋಷಕರ ಸಭೆ ಮತ್ತು ಶ್ರೀ ರೇವಣಸಿದ್ದೇಶ್ವರ ಆಂಗ್ಲ ಮಾಧ್ಯಮ ಶಾಲೆಯ 20 ನೇ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿ ಹೋದ ವರ್ಷ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ  ಕಿತ್ತೂರು ವಲಯ  ರಾಜ್ಯಕೆ 134   ನೇ ಸ್ಥಾನ  ಮತ್ತು ಬೈಲಹೊಂಗಲ ವಲಯ ರಾಜ್ಯಕ್ಕೆ 87 ನೇ ಸ್ಥಾನ  ಬಂದಿದ್ದು ಅವಮಾನಕರ ಸಂಗತಿ, ಅದನ್ನು ಬದಿಗೊತ್ತಿ ಪ್ರಸಕ್ತ ವರ್ಷ 50 ರ ಒಳಗೆ ಸ್ಥಾನ  ಬರಬೇಕು ಅದಕ್ಕಾಗಿ ನಾವು ಶಿಕ್ಷಣ ಅಧಿಕಾರಿಗಳು ಯೋಜನೆ ರೂಪಿಸಿ ಕೆಲಸ ಮಾಡುತ್ತಿದ್ದು ಇದ್ದಕ್ಕೆ ಪಾಲಕರು – ಶಿಕ್ಷಕರು ಶ್ರಮ ವಹಿಸಬೇಕು. ವ್ಯಸನ ಶಿಕ್ಷಕರು ನಮ್ಮ ಕಣ್ಣಿಗೆ ಬಿದ್ದಿದ್ದು ಅವರಿಗೆ ಕೆಲವು ಕಡೆ ಜನರಿಂದ  ಬುದ್ದಿ ಕಳಿಸಿದ್ದು ಅವರು ಸುಧಾರಿಸಿ ವಿದ್ಯಾರ್ಥಿಗಳ ಶಿಕ್ಷಣದ ಆದ್ಯತೆಗೆ ಕೆಲಸ ಮಾಡಬೇಕು. ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ತಳಪಾಯ ಶಿಕ್ಷಣ ಸುಧಾರಿಸಿದಲ್ಲಿ ಪಿಯುಸಿ, ಡಿಗ್ರೀ ಶಿಕ್ಷಣ ಸುಲಭವಾಗುತ್ತದೆ ಮತ್ತು ಇಂದಿನಿಂದ ಟಿ ವ್ಹಿ, ಮೊಬೈಲ್ ಪರೀಕ್ಷೆ ಮುಗಿಯುವವರೆಗೆ  ತ್ಯಾಗ ಮಾಡಿದರೆ ಫಲಿತಾಂಶ  ಹೆಚ್ಚಳ ಆಗುತ್ತದೆ  ಎಂದರು.
    ಕ್ಷೇತ್ರ ಸಮನ್ವಯ ಅಧಿಕಾರಿ ಬಿ ಎನ್ ಕಾಸಾಳೆ ಮಾತನಾಡಿ ಕಳೆದ ಭಾರಿಯ ಕಳಪೆ ಫಲಿತಾಂಷದಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಇದಕ್ಕೆ ಪಾಲಕ, ಪೋಷಕ, ಶಿಕ್ಷಕರು ಸಹಕರಿಸಿ ಶ್ರಮಿಸಬೇಕು ಎಂದರು.
    ಶ್ರೀ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು ಮಾತನಾಡಿ ತಮ್ಮ ಮಕ್ಕಳ ಶಿಕ್ಷಣ ಗುಣಮಟ್ಟ, ಶಿಕ್ಷಕರು ಕಲಿಸಿದ ಗುಣಮಟ್ಟ ಶಿಕ್ಷಣ  ಮತ್ತು ಅವರು ವಿದ್ಯೆ ಬಿಟ್ಟು ಕ್ರೀಡೆಗೆ ಪ್ರೋತ್ಸಾಹ ಕೊಡಿ ಟಿ ವ್ಹಿ ಮತ್ತು ಮೊಬೈಲ್ ನಿಂದ ಆದಷ್ಟು ದೂರವಿಡಿ ಎಂದರು.
   ರೇವಣಸಿದ್ದೇಶ್ವರ ಶಾಲೆಯ ಮುಕ್ಯೋಪಾಧ್ಯಾಯರಾದ ಶರಣು ಮಾದಾಪೂರಮಠ ಮಾತನಾಡಿ   ಶಾಲೆಯ ಪ್ರಾರಂಬದಿಂದ ಇಂದಿನ ಶಾಲೆಯ ಗುಣಮಟ್ಟ ಮತ್ತು ಬೆಳವಣಿಗೆ, ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳು, ಶಾಲೆಯ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದರು.
   ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯಧ್ಯಕ್ಷ ಶಿವನಗೌಡ ಪಾಟೀಲ, ಶಿಕ್ಷಕ ಪ್ರಕಾಶ ಮಾಸ್ತಿಹೊಳಿ, ಎಮ್ ಡಿ ಯರಗಟ್ಟಿ, ಗಂಗಾಧರ ಕಾಮಕರ, ಎಮ್ ಎನ್ ಕಾಂಬ್ಳೆ, ಎಸ್ ಎಸ್ ಪಾಟೀಲ, ರಾಜು ಹಕ್ಕಿ, ರುದ್ರಗೌಡ ಪಾಟೀಲ, ವಾಯ್ ಬಿ ಬಂದ್ರಾಮ್, ಶಂಕರಗೌಡ ಗುರನಗೌಡರ, ಪಿ ಬಿ ದೇಶನೂರ, ಆಡಳಿತ ಮಂಡಳಿ ಸದಸ್ಯರು, ಎಲ್ಲ ಶಾಲೆಗಳ  ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.ಚಿಟ್ನಿಸ್ ಗುರುಗಳು ನಿರೂಪಣೆ ನೆರವೇರಿಸಿದರು.
WhatsApp Group Join Now
Telegram Group Join Now
Share This Article