ಬಬಲೇಶ್ವರ ಶ್ರೀ ಶಾಂತವೀರ ಕಾಲೇಜು 100% ಫಲಿತಾಂಶ

Ravi Talawar
ಬಬಲೇಶ್ವರ ಶ್ರೀ ಶಾಂತವೀರ ಕಾಲೇಜು 100% ಫಲಿತಾಂಶ
WhatsApp Group Join Now
Telegram Group Join Now

ಬಬಲೇಶ್ವರ,ಏಪ್ರಿಲ್ 10:    ಬಬಲೇಶ್ವರದ ಶ್ರೀ ಶಾಂತವೀರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮಾರ್ಚ್ ೨೦೨೪ರಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ನಮ್ಮ ಕಾಲೇಜಿನಿಂದ ೩೭೦ ವಿದ್ಯಾರ್ಥಿಗಳು ಹಾಜರಾಗಿದ್ದು ೧೩೦ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ ಪ್ರಥಮ ದರ್ಜೆಯಲ್ಲಿ ೨೧೬ ವಿದ್ಯಾರ್ಥಿಗಳು, ೨೦ ದ್ವಿತೀಯ ಹಾಗೂ ತೃತೀಯ ದರ್ಜೆಯಲ್ಲಿ ೦೪ ಜನ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿನ ಫಲಿತಾಂಶ ಶೇ. ೧೦೦% ರಷ್ಟು ಆಗಿರುತ್ತದೆ.

ಕಲಾ ವಿಭಾಗದಲ್ಲಿ ೧೬೯ ವಿದ್ಯಾರ್ಥಿಗಳು ಹಾಜರಾಗಿದ್ದು ಶೇಕಡಾ ೧೦೦ ಫಲಿತಾಂಶ ಬಂದಿರುತ್ತದೆ. ಕುಮಾರ: ಅಮ್ಮಣ್ಣ ಕೇಸರಗೊಪ್ಪ ಹಾಗೂ ಲಕ್ಷ್ಮೀ ಸನಪ್ಪಗೋಳ ೫೮೬(೯೭.೬೬%) ರಷ್ಟು ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಆಶ್ವಿನಿ ಜಾನೋಜಿ ಹಾಗೂ ಸಾವಿತ್ರಿ ಹಟ್ಟಿ ೫೮೧(೯೬.೮೩%) ರಷ್ಟು ಅಂಕ ಗಳಿಸಿ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ ಕುಮಾರ: ಮಲ್ಲಿಕಾರ್ಜುನ ದಳವಾಯಿ ೫೮೦(೯೬.೬೬%) ರಷ್ಟು ಅಂಕ
ಗಳಿಸಿ ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾನೆ ವಿಜ್ಞಾನ ವಿಭಾಗದಲ್ಲಿ ೯೮ ವಿದ್ಯಾರ್ಥಿಗಳು ಹಾಜರಾಗಿದ್ದು ಶೇಕಡಾ ೧೦೦ ರಷ್ಟು ಫಲಿತಾಂಶ ಬಂದಿರುತ್ತದೆ. ಕುಮಾರಿ: ಸುಶ್ಮಿತಾ ಮಾಳಿ ೫೬೭(೯೪.೦೫%) ರಷ್ಟು ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ.

ಜಯಶ್ರೀ ಚವ್ಹಾಣ ೫೬೧(೯೩.೦೫%) ರಷ್ಟು ಅಂಕ ಗಳಿಸಿ ಕಾಲೇಜಿಗೆ ದ್ವಿತೀಯ ಸ್ಥಾನ. ಪಡೆದಿದ್ದಾಳೆ.ಸೌಭಾಗ್ಯಬಿರಾದಾರ ೫೬೦(೯೩.೦೩%) ರಷ್ಟು ಅಂಕ ಗಳಿಸಿ ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾಳೆ. ವಾಣಿಜ್ಯ ವಿಬಾಗದಲ್ಲಿ ೧೦೨ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ೨೭ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ೬೪ ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿ ೧೧ ವಿದ್ಯಾರ್ಥಿಗ ಉತ್ತೀರ್ಣರಾಗಿದ್ದು ಕುಮಾರಿ: ಲಕ್ಷ್ಮೀ ಗಗನಮಾಳಿ ೫೭೨(೯೫.೩೩%) ರಷ್ಟು ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಕುಮಾರ: ವಿಶ್ವನಾಥ ಶಿರೋಳ ೫೬೬(೯೪.೩೩%) ರಷ್ಟು ಅಂಕ ಗಳಿಸಿ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ ಕುಮಾರಿ ಶಿಲ್ಪಾ ಗುಣದಾಳ ೫೬೫೪೯೪.೧೬%) ರಷ್ಟು ಅಂಕ ಗಳಿಸಿ ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾಳೆ. ಒಟ್ಟು ಕಾಲೇಜಿನ ಫಲಿತಾಂಶವು ೧೦೦%
ರಷ್ಟಾಗಿರುವದರಿಂದ ಇವರಿಗೆ ಗ್ರಾಮಾಂತರ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯವರು ಮತ್ತು ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು
ಅಭಿನಂದನೆ ಸಲ್ಲಿಸಿದ್ದಾರೆ.

 

WhatsApp Group Join Now
Telegram Group Join Now
Share This Article