ಮಹಾನ್ಗುರು ಗಳಾದ ಶ್ರೀ ಶ್ರೀ ಲಾಹಿರಿ ಮಹಾಶಯರ ಈ ಮಹತ್ತರವಾದ ಭಕ್ತಿಯನ್ನು, ಪರಮ ಹಂಸ ಯೋಗಾನಂದರು ತಮ್ಮ ‘ಯೋಗಿಯ ಆತ್ಮಕಥೆ’ (Autobiography of a Yogi) ಕೃತಿಯಲ್ಲಿಉಲ್ಲೇಖಿಸಿದ್ದಾರೆ. ಮಹಾವತಾರ ಬಾಬಾಜಿ ಅವರು ಎಲ್ಲಾ ಪ್ರಾಮಾಣಿಕ ಅನುಯಾಯಿಗಳ ಜೀವನದ ಮೇಲೆ ಅವರು ಬೀರುವ ಶುದ್ಧ, ಅತೀಂದ್ರಿಯ ಮಹತ್ವವುಳ್ಳ, ಶಾಶ್ವತ ಪ್ರಭಾವವನ್ನು ಪ್ರಬಲವಾಗಿ ವಿವರಿಸುತ್ತದೆ. ಭಕ್ತಾಧಿಗಳು ಧ್ಯಾನದಿಂದ ಸಕಲವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಶ್ರೀ ಶ್ರೀ ಲಾಹಿರಿ ಮಹಾಶಯರ ಪ್ರಮುಖ ಶಿಷ್ಯರಾದ, ಸ್ವಾಮಿ ಶ್ರೀಯುಕ್ತೇಶ್ವರ ಗಿರಿ ಅವರು ಹೇಳಿದಂತೆ, ಬಾಬಾಜಿ ಅವರ ಆಧ್ಯಾತ್ಮಿಕ ಸ್ಥಿತಿಯು ಮಾನವನ ಗ್ರಹಿಕೆಗೆ ಮೀರಿದ್ದು. ಮಹಾನ್ಗುರುಗಳ ಪ್ರೇರಣೆ ಮತ್ತು ಬೋಧನೆಗಳೊಂದಿಗೆ ಸಾಮಾನ್ಯ ಜನರು ತಮ್ಮನ್ನು ತಾವು ಸಮನ್ವಯಗೊಳಿಸಲು ಪ್ರಯತ್ನಿಸಿದರೆ, ಅವರು ತಮ್ಮಆಧ್ಯಾತ್ಮಿಕ ಪಯಣದಲ್ಲಿಅಪಾರ ಪ್ರಯೋಜನ ಪಡೆಯುತ್ತಾರೆ. ಧ್ಯಾನವು ಮನುಷ್ಯನನ್ನು ಸದೃಢಗೊಳಿಸುತ್ತದೆ, ಮನಸ್ಸಿಗೆ ಸುಖ, ನೆಮ್ಮದಿ ದೊರಕುತ್ತದೆ ಎಂದು ತಿಳಿಸಿದರು.
ಉತ್ತರದಲ್ಲಿ ಹಿಮಾಯಲದ ಮಡಿಲಲ್ಲಿ ದ್ವಾರಪಟ ಎಂಬ ಸ್ಥಳದಲ್ಲಿ ಬಾಬಾಜಿಯರ ಸಾಧನೆ ಮಾಡಿದ ಗುಹೆ ಇದೆ. ಜನಸಾಮಾನ್ಯರೂ ಕೂಡ ತಮ್ಮ ಗ್ರಹಸ್ಥ ಜೀವನವನ್ನು ನಡೆಸುತ್ತ, ಮೋಕ್ಷದ ದಾರಿಯನ್ನು, ಕ್ರೀಯಾಯೋಗದ ಜಲದಿಂದ ಸಾದಿಸಬಹುದು, ಅಂತ ತೋರಿಸಲಿಕ್ಕೆ ಜನಸಾಮಾನ್ಯರ ನಡುವೆ ಇದ್ದುಕೊಂಡು ತಮ್ಮ ಗ್ರಹಸ್ಥ ಜೀವನ ನಡೆಸುತ್ತಿದ್ದ ಭಕ್ತರಾದ ಲಾಹರಿ ಮಹಾಶಯರಿಗೆ ಕ್ರೀಯಾಯೋಗವನ್ನು ಕಲಿಸಿಕೊಟ್ಟರು. ಮತ್ತು ಅದನ್ನು ಶ್ರದ್ಧೆಯುಳ್ಳ ಭಕ್ತರಿಗೆ ಕಲಿಸಲು ಆದೇಶಿಸಿದರು. ಬೆಳಗಾವಿಯ ಹಲವಾರು ಭಕ್ತರಿಗೆ ಈ ಪುಣ್ಯದ ದಿವಸ ಧ್ಯಾನದಲ್ಲಿ ಕ್ರೀಯಾಯೋಗವನ್ನು ಮಾಡಿ ಪಾವನಗೊಳ್ಳಬೇಕು ಶಶಿಕಾಂತ ಚುನಮರಿ ಅವರು ಹರಸಿದರು.
ಶಶಿಕಾಂತ ಚುನಮರಿ, ಶ್ರೀನಿವಾಸ್ ಖೋಪರ್ಡೆ, ಮಾರನ ಬಸರಿ, ಶೈಲಜಾ ಕೋಡಿಶೆಟ್ಟಿ ಮತ್ತು ಮಂಜುಳಾ ಚುನಮರಿ ಹಾಗೂ ಇತರರು ಇದ್ದರು.