ಹಿರೇ ಬಾಗೇವಾಡಿ: ರೈತಪರ ಹೋರಾಟದಲ್ಲಿ ಮುನ್ನುಗ್ಗಿ ಪ್ರತಿಭಟನೆ , ರೈತ ಸಂಘಟನೆ ಬೆಳವಣಿಗೆ, ರೈತರ ಶಕ್ತಿ ಹೆಚ್ಚು ಮಾಡಿದ ಕೀರ್ತಿ ರೈತ ಹೋರಾಟಗಾರ, ಮಾಜಿ ಕೇಂದ್ರ ಗ್ರಾಮೀಣಭಿವೃದ್ಧಿ ಸಚಿವ ಬಾಬಾಗೌಡ ಪಾಟೀಲ ಅಜ್ಜನವರಿಗೆ ಸಲ್ಲುತ್ತದೆ ಮತ್ತು ರೈತ ಹೋರಾಟದ ಮುಖಾಂತರ ಕಿತ್ತೂರು ಮತ್ತು ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷೇತರರಾಗಿ ವಿಧಾನಸಭೆಗೆ ಸ್ಪರ್ದಿಸಿ ಎರಡು ಜಯಗಳಿಸಿದ ಕ್ರಾಂತಿ ಕಾರಿ ನಾಯಕರಾಗಿದ್ದರು ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲರ 80 ನೇ ಜನ್ಮದಿನದ ಪ್ರಯುಕ್ತ ಚಿಕ್ಕ ಬಾಗೇವಾಡಿ ಗ್ರಾಮದ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಜಿ ಪಂ. ಸದಸ್ಯ ಹಾಗೂ ಕೆ ಪಿ ಸಿ ಸಿ ಸದಸ್ಯರಾದ ಶ್ರೀಮತಿ ರೋಹಿಣಿ ಪಾಟೀಲ, ಬಾಬಾಗೌಡ ಪಾಟೀಲರ ಕುಟುಂಬಸ್ಥರು, ರೈತರು, ಬಾಬಾಗೌಡರ ಅಭಿಮಾನಿಗಳು ಪಾಲ್ಗೊಂಡಿದ್ದರು.