ಚಿಕ್ಕಮಗಳೂರು, ಆಗಸ್ಟ್ 11: ಚಿಕ್ಕಮಗಳೂರು ತಾಲ್ಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಎಸ್ಐಟಿ ರಚನೆ ಮಾಡಿ ಉತ್ಖನನ ಮಾಡುವಂತೆ ಹಿಂದೂ ಸಂಘಟನೆಗಳು ಪಟ್ಟು ಹಿಡಿದಿವೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಸರ್ಕಾರಕ್ಕೆ ಆಗ್ರಹಿಸಲಾಗಿದೆ.
ದತ್ತಪೀಠ ಹಿಂದೂಗಳ ಪೀಠ ದತ್ತಾತ್ರೇಯ ಸ್ವಾಮಿ ತಪಸ್ಸು ಮಾಡಿದ ಜಾಗ. ನಕಲಿ ಗೋರಿ ನಿರ್ಮಿಸಿದ್ದು ಈ ಬಗ್ಗೆ ಸತ್ಯ ತಿಳಿಯಲು ಜಿಪಿಎಸ್ ಆಧುನಿಕ ತಂತ್ರಜ್ಞಾನ ಬಳಸಿ ಉತ್ಖನನ ಮಾಡುವಂತೆ ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ಹಿಂದೂ ಸಂಘಟನೆ ಮುಖಂಡ ರಘು ಸಕಲೇಶಪುರ ಮನವಿ ಮಾಡಿದ್ದಾರೆ.