ಸಚಿವರು ಬಂದಂತಹ ಸಂದರ್ಭದಲ್ಲಿ ನಾನು ಇರಬಾರದು ಎಂದು ತೀರ್ಮಾನಿಸಿದ್ದೇನೆ ಎಂದು ಭಾವುಕರಾದ ಬಿ ವೈ ವಿಜಯೇಂದ್ರ
ಏಳನೇ ದಿನಕ್ಕೆ ಕಾಲಿಟ್ಟ ರೈತರ ಅಹೋರಾತ್ರಿ ಹೋರಾಟ
ಪ್ರಾಮಾಣಿಕವಾಗಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಮಸಿ ಹಚ್ಚುವಂತ ಕೆಲಸ ಮಾಡಲಾರೆ: ಬಿ ವೈ ವಿಜಯೇಂದ್ರ
ಗುರ್ಲಾಪೂರ : ಇವತ್ತು ಏಳನೇ ದಿನಕ್ಕೆ ಕಾಲಿಟ್ಟ ರೈತರ ಪ್ರಾಮಾಣಿಕ ಹೋರಾಟಕ್ಕೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು, ಸಚಿವರನ ಕಳಿಸಿಕೊಡು ಅಂತ ಕೆಲಸ ಮಾಡುತ್ತಿದ್ದು, ಸಚಿವರು ಬಂದಂತಹ ಸಂದರ್ಭದಲ್ಲಿ ನಾನು ಇರಬಾರದು ಎಂದು ತೀರ್ಮಾನಿಸಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಭಾವುಕರಾಗಿ ಹೇಳಿದರು.
ಬುಧವಾರದಂದು ಗುರ್ಲಾಪೂರ್ ಕ್ರಾಸ್ ಬಳಿ ನಡೆಯುತ್ತಿರುವ 7ನೇ ದಿನದ ರೈತರ ಅಹೋರಾತ್ರಿ ಹೋರಾಟದ ವೇದಿಕೆಯಲ್ಲಿ ಮಾತನಾಡಿದವರು, ಸತತವಾಗಿ ಏಳು ದಿನದವರೆಗೂ ಪ್ರಾಮಾಣಿಕವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಕಬ್ಬು ಬೆಳೆಗಾರರ ಸಂಘ ಮತ್ತು ವಿವಿಧ ಸಂಘಟನೆಗಳು ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿವೆ, ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಬಂದು ಈ ರೈತರ ಹೋರಾಟದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂಬ ಆರೋಪಗಳನ್ನು ಹೊತ್ತುಕೊಳ್ಳಲು ನಾನು ತಯಾರಿಲ್ಲ ಹಾಗಾಗಿ ಈ ಹೋರಾಟಕ್ಕೆ ಮಸಿ ಹಚ್ಚುವಂತೆ ಕೆಲಸ ನಾನು ಕೂಡ ಮಾಡಲಾರೆ ಹಾಗಾಗಿ ನಾನು ಬೆಳಗಾವಿಗೆ ಹೋಗಿ ಮೊನ್ನೆ ದಿನ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಲಕ್ಕಪ್ಪನನ್ನು ಭೇಟಿ ಮಾಡಿ ಬೆಂಗಳೂರಿಗೆ ಹೋಗುವುದಾಗಿ ಹೇಳಿದರು.
ಉತ್ತರ ಕರ್ನಾಟಕದ ರೈತರ ಸಂಕಷ್ಟ ನೋಡಲಾರದೆ, ನಾನು ಸ್ಥಳಕ್ಕೆ ಧಾವಿಸಿ ರೈತರ ಹೋರಾಟಕ್ಕೆ ಬೆಂಬಲವಾಗಿ ನಿಂತು ಹೋರಾಟದಲ್ಲಿ ಭಾಗವಹಿಸಿ ಸರ್ಕಾರದ ಕಿವಿ ಹಿಂದು ಅಂತ ಕೆಲಸ ಎಚ್ಚರಿಸುವಂತಹ ಕೆಲಸ ಮಾಡಿದ್ದೇನೆ. ನಿನ್ನೆಯ ದಿನ ಮುಖ್ಯಮಂತ್ರಿಗಳು ನನ್ನ ಜೊತೆ ಹಾಗು ಜಿಲ್ಲಾಧಿಕಾರಿಗಳ, ಸಚಿವರ ಮತ್ತು ಸಕ್ಕರೆ ಕಮಿಷನರ್ ಜೊತೆ ಚರ್ಚಿಸಿದ್ದಾರೆ. ರೈತರ ತಾಳ್ಮೆಯನ್ನು ಪರೀಕ್ಷೆ ಮಾಡದೆ ತಕ್ಷಣವಾಗಿ ನ್ಯಾಯ ಒದಗಿಸುವಂತೆ ಕೆಲಸವಾಗಬೇಕು. ಒಂದು ವೇಳೆ ನ್ಯಾಯ ಒದಗಿಸುವಂತಹ ಕೆಲಸ ಮಾಡದಿದ್ದರೆ ಈ ಹೋರಾಟದ ಬೆಂಕಿ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುತ್ತದೆ ಎಂದು ಸರ್ಕಾರದ ವಿರುದ್ಧ ಗುಡುಗಿದರು.
ಗುರ್ಲಾಪುರದಲ್ಲಿ ಪ್ರಾರಂಭವಾದಂತ ಈ ಐತಿಹಾಸಿಕ ರೈತರ ಚಳುವಳಿಯಿಂದ ಅಥಣಿ, ಚಿಕ್ಕೋಡಿ, ಬೈಲಹೊಂಗಲ, ವಿಜಯಪುರ ಅಷ್ಟೇ ಅಲ್ಲದೆ ಬೇರೆ ಬೇರೆ ಜಿಲ್ಲೆಗಳಲ್ಲಿ ಕೂಡ ರೈತರು ಬೀದಿಗಳಿದು ಹೋರಾಟ ಮಾಡುತ್ತಿರುವ ಪ್ರತಿಫಲವಾಗಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಸಚಿವರನ್ನು ಕಳಿಸುವಂತ ಕೆಲಸ ಮಾಡುತ್ತಿದೆ. ಸಚಿವರು ಈ ಸ್ಥಳಕ್ಕೆ ಬಂದಾಗ ಕೇಂದ್ರ ಸರ್ಕಾರದ ಮೇಲೆ ಗೊಂಬೆ ಕೂರಿಸುವಂತಹ ಕೆಲಸ ಮಾಡಬಾರದು ಎಂದು ಹೇಳಿದರು.
ಇವತ್ತು ನನ್ನ ಸುದೈವ ನನ್ನ 50ನೇ ಜನ್ಮದಿನವನ್ನು ಇಡೀ ನಾಡಿಗೆ ಅನ್ನ ನೀಡುವ ಅನ್ನದಾತನೊಂದಿಗೆ ಆಚರಿಸುವಂತಹ ಸೌಭಾಗ್ಯ ನನ್ನದಾಗಿದೆ. ಹಾಗಾಗಿ ಸಚಿವರು ಬಂದಾಗ ಶಾಂತಿಯುತವಾಗಿ ಅವರ ತಂದ ಮಾಹಿತಿಯನ್ನು ಪಡೆದು, ಹೋರಾಟವನ್ನು ಇಲ್ಲಿಗೆ ಕೈ ಬಿಡಬೇಕಾ ಅಥವಾ ಮುಂದುವರಿಸಬೇಕಾ ಎಂಬುದು ನಿರ್ಧರಿಸಿರಿ. ಯಾವಾಗಲೂ ನಿಮ್ಮ ಜೊತೆ ನಾನಿದ್ದೇನೆ ಎಂಬ ಭರವಸೆಯನ್ನು ರೈತರಿಗೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಮಾಜಿ ಶಾಸಕ ಪಿ ರಾಜು, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ಮಾಜಿ ಜಿಪಂ ಸದಸ್ಯ ಗೋವಿಂದ ಕೊಪ್ಪದ, ಪ್ರಮೋದ್ ಮುತಾಲಿಕ್ ಹಾಗೂ ವಿವಿಧ ಜಿಲ್ಲೆಯ ರೈತ ಮುಖಂಡರು ಉಪಸ್ಥಿತರಿದ್ದರು.


