ಆಯುರ್ವೇದ ಎಂಬುದು ಕೇವಲ ವೈದ್ಯಕೀಯ ವಿಜ್ಞಾನವಲ್ಲ: ಇದು ಜೀವನದ ಕಲೆ, ಮಹೇಶ ಟೆಂಗಿನಕಾಯಿ

Ravi Talawar
ಆಯುರ್ವೇದ ಎಂಬುದು ಕೇವಲ ವೈದ್ಯಕೀಯ ವಿಜ್ಞಾನವಲ್ಲ: ಇದು ಜೀವನದ ಕಲೆ, ಮಹೇಶ ಟೆಂಗಿನಕಾಯಿ
WhatsApp Group Join Now
Telegram Group Join Now
ಧಾರವಾಡ: ಆಯುರ್ವೇದ ಎಂಬುದು ಕೇವಲ ವೈದ್ಯಕೀಯ ವಿಜ್ಞಾನವಲ್ಲ.  ಇದು ಜೀವನದ ಕಲಾ ,ಪ್ರಕೃತಿಯ ಜ್ಞಾನ ಮತ್ತು ಮಾನವ ಸೇವೆಗಳನ್ನು ಮಿಳಿತಗೊಳಿಸಿದ ಮಹಾನ್ ಪರಂಪರೆ. ಆಯುರ್ವೇದವು “ಸ್ವಸ್ಥಸ್ಯ ಸ್ವಾಸ್ಥ್ಯ ರಕ್ಷಣಂ, ಆತುರಸ್ಯ ವ್ಯಾಧಿ ಪರಿಹಾರಂ” ಎಂಬ ಮಹೋಕ್ತಿಯನ್ನು ಆಧಾರವಾಗಿಸಿಕೊಂಡಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಧಾರವಾಡದ  ಪ್ರತಿಷ್ಠಿತ  ಸಿ. ಬಿ ಗುತ್ತಲ ಆಯುರ್ವೇದಿಕ ಮೆಡಿಕಲ ಕಾಲೇಜು ಮತ್ತು ಆಸ್ಪತ್ರೆಯ 2025 ನೇ ವರ್ಷದ ‘ಆಯುರ್ ಪ್ರವೇಶಿಕಾ’ನೂತನ ವಿದ್ಯಾರ್ಥಿಗಳ ಆಗಮನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಅಸ್ವಸ್ವಸ್ಥರಿಗೆ ಆರೋಗ್ಯ ಕಾಪಾಡುವುದು,ಅಸುನಿಗರುಳವರಿಗೆ ಚಿಕಿತ್ಸೆ ನೀಡುವುದು ನಮ್ಮ ಧರ್ಮ.ಈ ಪವಿತ್ರ ಮಾರ್ಗವನ್ನೇ ನೀವು ಇಂದು ಅಧಿಕೃತವಾಗಿ ಆರಿಸಿಕೊಂಡಿರುವುದು ಅತ್ಯಂತ ಹರ್ಷದ ವಿಷಯ. ನಿಮ್ಮ ಮುಂದೆ ಇರುವ ಐದು ವರ್ಷದ ಗುರುಕುಲಯಾನ ಕೇವಲ ಪುಸ್ತಕ ಓದುವುದಲ್ಲ ಇದು ಅನುಭವ, ಸಂಶೋಧನೆ, ಪ್ರಯೋಗ, ಸೇವಾ ಮನೋಭಾವ ಇವುಗಳ ಪಯಣವಾಗಿದೆ ಎಂದು ತಿಳಿಸಿದರು.
ನಮ್ಮ ಗುರುಗಳು ನಿಮಗೆ ಜ್ಞಾನ ನೀಡುತ್ತಾರೆ. ನಮ್ಮ ಆಸ್ಪತ್ರೆ ನಿಮಗೆ ಅನುಭವ ನೀಡುತ್ತದೆ. ನಮ್ಮ ಸಂಸ್ಕೃತಿ ನಿಮಗೆ ಮೌಲ್ಯಗಳನ್ನು ನೀಡುತ್ತದೆ. ಇಲ್ಲಿ ಕಲಿಯುವ ಪ್ರತೀ ವಿಷಯವು ನಿಮ್ಮನ್ನು ಔಷಧಿ ತಯಾರಿಸುವ ವೈದ್ಯನಾಗುವಷ್ಟೇ ಅಲ್ಲ, ಮಾನವತೆಯನ್ನು ಸ್ಪರ್ಶಿಸುವ ವೈದ್ಯನನ್ನಾಗಿಸುವದು.ಪಾಠವನ್ನು ಕೇವಲ ಪಠ್ಯಪುಸ್ತಕಕ್ಕೆ ಸೀಮಿತಗೊಳಿಸಬೇಡಿ. ನಾವು ಪ್ರಾಧ್ಯಾಪಕರನ್ನು ಪ್ರಶ್ನಿಸಿರಿ, ಸಂಶೋಧಿಸಿರಿ, ಅನುಸರಿಸಿರಿ ಶಿಕ್ಷಕರನ್ನು ಗುರುಗಳೆಂದೇ ನೋಡಿ ರೋಗಿಯ ನೋವನ್ನು ನಿಮ್ಮದೇನಂತೆ ಅರ್ಥಮಾಡಿಕೊಳ್ಳಿ ನೀವು ಕಲಿಯುವ ಪ್ರತೀ ಔಷಧಿಯಲ್ಲಿ, ಪ್ರಕೃತಿ ತಾಯಿಯ ಶಕ್ತಿ ಮತ್ತು ನಿಮ್ಮ ನೈಪುಣ್ಯ ಎರಡೂ ಸೇರಿರುತ್ತವೆ ಎಂದರು.ಈ ಕಾಲೇಜು ಹಲವು ವರ್ಷಗಳಿಂದ ಗುಣಮಟ್ಟದ ವೈದ್ಯರನ್ನು ಸಮಾಜಕ್ಕೆ ನೀಡುತ್ತಿದೆ.ಇಲ್ಲಿನ ಶಿಸ್ತಿನ ಸಂಸ್ಕೃತಿ, ಪಥ್ಯ-ಅಪಥ್ಯ ಜ್ಞಾನ, ಹಾಗೂ ಔಷಧ ತಯಾರಿಕೆಯ ಪ್ರಾಯೋಗಿಕ ಅಭ್ಯಾಸ ಇವು ನಿಮಗೆ ಬಲವಾದ ಆಧಾರವಾಗುತ್ತದೆ.
ನೀವು ಆರಿಸಿರುವ ಮಾರ್ಗ ಸುಲಭವಲ್ಲ; ಆದರೆ ಅತ್ಯಂತ ಪವಿತ್ರ ಮತ್ತು ಫಲಶ್ರುತಿಯಾಗಿದೆ.ಇಂದು ನೀವು ಆಯುರ್ವೇದ ವಿದ್ಯಾರ್ಥಿಗಳು ನಾಳೆ ನೀವು ಜನರ ಜೀವ ಉಳಿಸುವ ವೈದ್ಯರು.ನಿಮ್ಮ ವಿದ್ಯಾರ್ಥಿ ಜೀವನ ಯಶಸ್ವಿಯಾಗಲಿ,ಪರಿಣತ ವೈದ್ಯರಾಗಿ ಸಮಾಜಕ್ಕೆ ಸೇವೆ ಸಲ್ಲಿಸಲಿ ಇದನ್ನೇ ನಿಮ್ಮ ಕಾಲೇಜಿನ ಆಶಯ ಎಂದರು.
ಅಧ್ಯಕ್ಷತೆ ವಹಿಸಿದ ಮಾಜಿಮಹಾಪೌರರಾದ ಸಭಾನಾಯಕರು ಈರೇಶ ಅಂಚಟಗೇರಿ ಅವರು ಗಣ್ಯಮಾನ್ಯರೊಂದಿಗೆ ದೀಪ ಬೆಳಗುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಶಾಸಕರಾದ ಮಹೇಶ ಟೆಂಗಿನಕಾಯಿ ನಾವು ನೀವು ಇಲ್ಲಿ ಸೇರಿರುವುದು ಕೇವಲ ಸ್ವಾಗತಕ್ಕಾಗಿ ಅಲ್ಲ, ಒಂದು ಹೊಸ ಸಂಧ್ಯೆ ಪ್ರಾರಂಭವಾಗುತ್ತಿರುವ ದಿನಕ್ಕಾಗಿ. ಪ್ರಧಾನಿ ನರೇಂದ್ರ ಮೋದಿಯವರು, ದೇಶದ ಆಡಳಿತದ ಚುಕ್ಕಾಣಿ ಹಿಡಿದ ನಂತರ ಆಯುರ್ವೇದ ಮಹತ್ವ ವಿಶ್ವದೆಲ್ಲೆಡೆ ಹರಡಿದೆ‌.‌ಸುಮಾರು 150 ದೇಶಗಳು ಆಯುರ್ವೇದ ಪದ್ದತಿ ಅಳವಡಿಸಿಕೊಂಡಿದ್ದು, ಬಾಂಗ್ಲಾದೇಶ ಆಸ್ಟ್ರೇಲಿಯಾ ದೇಶಗಳು ಆರ್ಯವೇದ ಅಕ್ಯಾಡೆಮಿ ಆರಂಭಿಸಲಿವೆ.ಪ್ರಾಚೀನ ಋಷಿಗಳಿಂದ ಬಂದ ಆಯುರ್ವೇದದ ಈ ಮಹಾನ್ ಪರಂಪರೆಯನ್ನು ಅನುಸರಿಸುತ್ತಾ, ಇಂದು ನಾವು ಸೇವೆ, ಅಧ್ಯಯನ ಮತ್ತು ಅನುಭವದ ನೂತನ ಪಯಣವನ್ನು ಆರಂಭಿಸುತ್ತಿದ್ದೇವೆ.
“ಶ್ರೀ ಧನ್ವಂತರಯ ನಮಃ”ಆರೋಗ್ಯಂ ಧನಂ ಭಗವಂತೋ ದದಾತುಈ  ಅವಧಿಯು ನಮಗೆ ಕೇವಲ ವೈದ್ಯಕೀಯ ಜ್ಞಾನವನ್ನೇ ಅಲ್ಲ.ಮಾನವೀಯತೆ, ಸೇವಾ ಮನೋಭಾವ ಮತ್ತು ರೋಗಿಯತ್ತ ಕರುಣೆ ಎಂಬ ಮೌಲ್ಯಗಳನ್ನೂ ಬೆಳೆಸಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದರು.
ನಮ್ಮ ಗುರುಗಳು, ವೈದ್ಯರು, ಹಾಗೂ ಸಹಪಾಠಿಗಳ ಸಹಕಾರದೊಂದಿಗೆ,ನಾವು ಆಯುರ್ವೇದದ ಸಿದ್ಧಾಂತಗಳನ್ನು ಪ್ರಾಯೋಗಿಕ ಜೀವನದಲ್ಲಿ ಅಳವಡಿಸಿಕೊಳ್ಳೋಣ.ಆರ್ಯವೇದ ವೈದ್ಯಕೀಯ ವಿದ್ಯಾರ್ಥಿಗಳು
ಭವಿಷ್ಯದಲ್ಲಿ ಉತ್ತಮ ವೈದ್ಯರಾಗಿ ನಾಡಿಗೆ ಹಾಗೂ ಕಲಿತ ಶಿಕ್ಷಣ ಸಂಸ್ಥೆಗೆ ಕೀರ್ತಿ ತನ್ನಿ ಎಂದರು ಹಾಗು ಎಲ್ಲರಿಗು ಶುಭ ಕೋರಿದರು.
ಈ ಸಂದರ್ಭದಲ್ಲಿ ರಾಘವೇಂದ್ರ ತವನಪ್ಪನವರ, ಶ್ರೀಶೈಲ ಯಕ್ಕುಂಡಿಮಠ,ಜಗದೀಶ ಮಳಗಿ,ಬಸವರಾಜ ತಾಳೀಕೋಟಿ,ಜಿ.ಜಿ.ಹಿರೇಮಠ, ಎಸ ರಾಧಾಕೃಷ್ಣನ್ ,ಎಸ ಟಿ ಹೊಂಬಳ, ಬಿ ಎಚ ವೆಂಕರೆಡ್ಡಯ್ಯನವರ ವಿ ಎ ಸೊಪ್ಪಿಮಠ ,ವಿದ್ಯಾರ್ಥಿಗಳು ಹಾಗು ಶಿಕ್ಷಕರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article