ಮಾಸಿಕ ಋತುಚಕ್ರವು ಪ್ರತಿ ಬಾಲಕಿಯ ಜೀವನದಲ್ಲಿ ಸಹಜ ಪ್ರಕ್ರಿಯೆ: ಬಸವರಾಜೇಶ್ವರಿ

Ravi Talawar
ಮಾಸಿಕ ಋತುಚಕ್ರವು ಪ್ರತಿ ಬಾಲಕಿಯ ಜೀವನದಲ್ಲಿ ಸಹಜ ಪ್ರಕ್ರಿಯೆ: ಬಸವರಾಜೇಶ್ವರಿ
WhatsApp Group Join Now
Telegram Group Join Now
ಬಳ್ಳಾರಿ ಆ 25. ಶ್ರೀ  ವಾಸವಿ ವಿದ್ಯಾಲಯದಲ್ಲಿ ಶನಿವಾರದಂದು ವಿದ್ಯಾರ್ಥಿನಿಯರ ಆರೋಗ್ಯ ಕಾಪಾಡುವ ದೃಷ್ಟಿಯಿಂದ “ಸ್ಯಾನಿಟರಿ ಪ್ಯಾಡ್ ಗಳ ಬಳಕೆ ಮತ್ತು ವಿಲೇವಾರಿ  ಕುರಿತು ಜಾಗೃತಿ ಕಾರ್ಯಕ್ರಮವನ್ನು” ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು  ಶಾಲಾ  ಸಹಶಿಕ್ಷಕಿಯರು ಉದ್ಘಾಟಿಸಿ,  ಬಸವರಾಜೇಶ್ವರಿಯವರು  ಮಾತಾನಾಡುತ್ತಾ “ ಮಾಸಿಕ ಋತುಚಕ್ರವು ಪ್ರತಿ ಬಾಲಕಿಯ ಜೀವನದಲ್ಲಿ ಸಹಜ ಪ್ರಕ್ರಿಯೆಯಾಗಿದ್ದು, ಈ ಅವಧಿಯಲ್ಲಿ ಸ್ವಚ್ಛತೆ ಕಾಪಾಡುವುದು ಅತ್ಯಂತ ಮುಖ್ಯ. ವಿದ್ಯಾರ್ಥಿನಿಯರು ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಿ,ಸ್ಯಾನಿಟರಿ ಪ್ಯಾಡ್ ಗಳನ್ನು ಸರಿಯಾಗಿ ಬಳಸಿ ವಿಲೇವಾರಿ ಮಾಡಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪೋಷಕರ ಉಪಸ್ಥಿತಿಯಲ್ಲಿ ವಿದ್ಯಾರ್ಥಿನಿಯರಿಗೆ ಪ್ಯಾಡ್ ಗಳ ಸರಿಯಾದ ಬಳಕೆ, ಬದಲಾವಣೆ ಮಾಡುವ ಅವಧಿ, ಬಳಸಿದ ಪ್ಯಾಡ್ ಗಳ ವಿಲೇವಾರಿ ವಿಧಾನ ಹಾಗೂ ಸ್ವಚ್ಛತೆಯ ಮಹತ್ವದ ಕುರಿತು ಸಮಗ್ರ ಮಾಹಿತಿ ನೀಡಿ,  ಮಾಸಿಕ ಋತುಚಕ್ರದ  ಸಮಯದಲ್ಲಿ ಸ್ವಚ್ಛತೆಯನ್ನು ಕಾಪಾಡದಿದ್ದಲ್ಲಿ ತೀವ್ರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ಸ್ವಚ್ಛತೆ ಪಾಲನೆ ಮಾಡುವುದು ಪ್ರತಿಯೊಬ್ಬ ವಿದ್ಯಾರ್ಥಿನಿಯ ಹೊಣೆಗಾರಿಕೆ ಎಂದು ತಿಳಿಸಿದರು.
ಕಾರ್ಯಕ್ರಮದ ಪ್ರಮುಖ ಭಾಗವಾಗಿ, ಸ್ಯಾನಿಟರ್ ಪ್ಯಾಡ್ ಗಳ ಬಳಕೆ ಮತ್ತು ವಿಲೇವಾರಿ ಕುರಿತು ಪ್ರಾತ್ಯಕ್ಷಿಕೆ  ನಡೆಸಲಾಯಿತು.ಇದರಿಂದ ವಿದ್ಯಾರ್ಥಿನಿಯರಿಗೆ ಪ್ಯಾಡ್ ಗಳನ್ನು ಸುರಕ್ಷಿತವಾಗಿ ಬಳಸುವ ವಿಧಾನ ಹಾಗೂ ಅದರ ವಿಲೇವಾರಿ ಬಗ್ಗೆ ಇನ್ನಷ್ಟು ಸ್ಪಷ್ಟತೆ ದೊರೆಯಿತು. ಶಾಲಾ ಶಿಕ್ಷಕಿಯರು  ವಿದ್ಯಾರ್ಥಿನಿಯರಿಗೆ ಆತ್ಮವಿಶ್ವಾಸ ತುಂಬಿ, ಮಾತಾನಾಡುತ್ತ, ದೇಹ ಮತ್ತು ಮನಸ್ಸಿನ ಆರೋ್ಗ್ಯ ಕಾಪಾಡಿಕೊಳ್ಳಲು ತಕ್ಕ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಪ್ರೇರೇಪಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿನಿಯರು ಹಾಗೂ ಪೋಷಕರು  ಉಪಸ್ಥಿತರಿದ್ದರು. ಸ್ವಚ್ಛತಾ ಸಿಬ್ಬಂದಿ ಮತ್ತು ವಿಲೇವಾರಿ ಮಾಡುವವರ ಆರೋಗ್ಯದ ಕಾಳಜಿ ಮತ್ತು ಹಿತ ದೃಷ್ಟಿಯಿಂದ ಈ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಾಲೆಯ ಸಹಶಿಕ್ಷಕಿಯರು  ಮಾತಾನಾಡಿ, “ವಿದ್ಯಾರ್ಥಿನಿಯರ ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ನಮ್ಮ ವಿದ್ಯಾಲಯ  ಸದಾ ಮುಂಚೂಣಿಯಲ್ಲಿರುತ್ತದೆ.ಮುಂದೆಯೂ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು” ಎಂದು ತಿಳಿಸಿದರು.
WhatsApp Group Join Now
Telegram Group Join Now
Share This Article