ಘಟಪ್ರಭಾ: ಹೆಚ್ಚುತ್ತಿರುವ ಸೈಬರ್ ವಂಚನೆ ಹಾಗೂ ಸುರಕ್ಷತೆ ಕುರಿತು ಡಾ. ಗಂಗಾಧರ ಆಂಗ್ಲ ಮಾಧ್ಯಮ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು. ಪುಣೆಯ ಕ್ವೀಕ್ ಹಿಲ್ ಫೌಂಡೇಶನ್ ಹಾಗೂ ನೀಡಸೋಸಿಯ ಎಸ್ ಜೆ ಟಿ ಎನ್ ಡಿ ಸಿ ಎ ಮಹಾವಿದ್ಯಾಲಯ ಡಾ ಕು. ಸೀಮಾ ಕಟ್ಟಿಮನಿ ಹಾಗೂ ಕು. ಆರತಿ ಶಮನೆವಾಡಿ ಇವರು ವಿದ್ಯಾರ್ಥಿಗಳಿಗೆ ಅಂತರಜಾಲದ ಅಟಗಳ ಗೀಳಿನಿಂದ ದೂರ ಇರುವ ಕುರಿತು, ವೈರಸ ಹಾವಳಿಯಿಂದ ಕಂಪ್ಯೂಟರ್ ಹಾಗೂ ಮೊಬೈಲ್ ಹಾಳಾಗುವದನ್ನು ತಡೆಯುವ, ಹಣಕಾಸು ವಂಚನೆ, ಬೌದ್ಧಿಕ ಸ್ವತ್ತು ವಂಚನೆ, ಅಸ್ಲಿಲ್ ತಾಣಗಳ ಮೋಸ, ವಿವಾಹ ಉದ್ಯೋಗ ವಂಚನೆ ಕುರಿತು ಇಂತಹ ವಂಚನೆಗಳಿಂದ ಹೇಗೆ ಸುರಕ್ಷಿತವಾಗಿರಬೇಕೆಂಬ ತಿಳುವಳಿಕೆಯನ್ನು ಮೂಡಿಸಿದರು.
ಒಟಿಪಿ ಹಾಗೂ ಹುಸಿ ಲಿಂಕಗಳನ್ನು ನಿಸ್ಕ್ರೀಯಗೊಳಿಸುವ ಕುರಿತು ತಿಳಿ ಹೇಳಲಾಯಿತು. ವಂಚನೆಯ ಗಳಿಗೆಯಲ್ಲಿ ಮೊಬೈಲ್ ಗಳಲ್ಲಿ ಎರಡು ಹಂತದ ಪರಿಶೀಲನೆಯ ಮಹತ್ವವನ್ನು ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಮೇಘರಾಜ್ ಸಾಂವಗಾಂವ, ಶಿಕ್ಷಕರಾದ ಅಜಿತ್ ಹೆಗಡೆ, ಸಾಗರ ವಾಳಕಿ, ಮಾರುತಿ ಪಾಟೀಲ, ಶಶಿಧರ ಕರಾಡೆ, ಪೂರ್ಣಿಮಾ ಮೆಳವಂಕಿ,ಪ್ರಭಾವತಿ ಪತ್ತಾರ ಹಾಗೂ ಗಾಯತ್ರಿ ಜಗಜಂಪಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ನಿಡಸೋಸಿಯ ಎಸ್. ಜೆ. ಪಿ. ಎನ್ ಮಹಾವಿದ್ಯಾಲಯದ ಪ್ರಾಚಾರ್ಯ ಬಸವರಾಜ ಹಾಲಬಾವಿ, ಪವನ್ ಹಿರೇಮಠ, ಆನಂದ ಸೋನಾರ ಅವರು ಸಂಯೋಜಿಸಿದ್ದರು. ಈಗಾಗಲೇ ಹುಕ್ಕೇರಿ ತಾಲೂಕಿನ ಹಲವರು ಶಾಲಾ ಮಕ್ಕಳಲ್ಲಿ ಸೈಬರ್ ವಂಚನೆ ಕುರಿತು ಅರಿವು ಮೂಡಿಸುವ ಕುರಿತು ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಾರೆ.