ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ; ಎನ್.ಎಸ್.ಎಸ್ ವಿದ್ಯಾರ್ಥಿಗಳಿಂದ ಅರಿವು

Ravi Talawar
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ; ಎನ್.ಎಸ್.ಎಸ್ ವಿದ್ಯಾರ್ಥಿಗಳಿಂದ ಅರಿವು
WhatsApp Group Join Now
Telegram Group Join Now

ಯರಗಟ್ಟಿ : ’ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಸೆ.೨೨ರಿಂದ ಆರಂಭವಾಗಲಿದೆ. ಇದಕ್ಕೆ ಪೂರ್ವಭಾವಿಯಾಗಿ ಸೆ.೧೦ರಿಂದ ೧೯ರವರೆಗೆ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಮನೆಮನೆಗೆ ಭೇಟಿ ನೀಡಿ ಸಮೀಕ್ಷೆಗೆ ಅಗತ್ಯವಿರುವ ದಾಖಲೆಗಳನ್ನು ಸಾರ್ವಜನಿಕರು ಸಿದ್ಧಪಡಿಸಿ ಇಟ್ಟುಕೊಳ್ಳುವಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅರಿವು ಮೂಡಿಸಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂಬಂಧ ಡಾ. ರಾಜಶೇಖರ ಬಿರಾದಾರ ಅವರು ಮಾತನಾಡಿದರು. ’ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ರಾಜ್ಯದ ಎಲ್ಲ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವ ಕಾರ್ಯವಾಗಿದೆ. ರಾಜ್ಯದ ನೀತಿ ನಿರೂಪಣೆಯನ್ನು ಕೈಗೊಳ್ಳಲು ಇದು ಆಧಾರವಾಗಿರುತ್ತದೆ. ಸಮೀಕ್ಷೆ ಕಾರ್ಯ ಈ ನಾಡಿನ ಸೇವೆಯ ಭಾಗವಾಗಿದೆ. ಸಮೀಕ್ಷಾ ಕಾರ್ಯ ಅನು?ನಗೊಳಿಸುವ ನಿಟ್ಟಿನಲ್ಲಿ ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಹೆಚ್ಚಾಗಿದೆ. ಇದಕ್ಕಾಗಿ ಬದ್ಧತೆಯಿಂದ ಕೆಲಸ ಮಾಡಬೇಕಾದ ಅವಶ್ಯಕತೆ ಇದೆ’ ಎಂದರು.

ಈ ವೇಳೆ ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಪ. ಪಂ. ಕಿರಿಯ ಆರೋಗ್ಯ ನಿರೀಕ್ಷಕ ನಾಗರಾಜ ಚವಡಪ್ಪನವರ, ಮಾಮನಿ ಕಾಲೇಜಿನ ಪ್ರಾಧ್ಯಾಪಕರಾದ ಶಂಕರಪ್ಪ ಲಗಳಿ, ಉಪನ್ಯಾಸಕರಾದ ವಿಜಲಕ್ಷ್ಮೀ ಬದ್ದಿ, ಶಿದ್ಲಿಂಗಪ್ಪ ಗಾಳಿ, ಮಹಾಸೇಶ ಕೆ. ವೈ, ಅರ್ಷಾನ ಖಾಷಾನಟ್ಟಿ, ಪ. ಪಂ. ಸಿಬಂದ್ದಿಯಾದ ಕೆ. ಬಿ. ಬೆಣ್ಣಿ, ಆನಂದ ಬೆಳವಿ, ಮಲ್ಲಪ್ಪ ಬಾರ್ಕಿ, ಸ್ಥಳಿಯರಾದ ರಾಜು ಬೆಣ್ಣಿ, ಸಂಜು ಮಿಕಲಿ, ಹನಮಂತ ಹಣಬರ, ಶ್ರೀಶೈಲ ವಾಲಿ, ಬಾಬು ಪಾಳೇಕರ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

WhatsApp Group Join Now
Telegram Group Join Now
Share This Article